ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು: ಸ್ವಾವಲಂಬನೆ ಪಾಠ ಹೇಳುತ್ತಿದೆ 'ಗಾಂಧಿ ಬಜಾರು'

ಭಾರತೀಯರ ಸ್ವದೇಶಿ ಚಳವಳಿಗೆ ಅಸ್ತ್ರವಾಗಿದ್ದ ಖಾದಿ ವಸ್ತ್ರ
Last Updated 1 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಯಳಂದೂರು: ಐದು ದಶಕಗಳಿಂದ ಇಲ್ಲಿ ಸ್ವದೇಶಿ ಚಿಂತನೆ ಉಸಿರಾಡುತ್ತಿದೆ. ರಾಟೆ, ಚರಕ ಸದ್ದುಮಾಡುತ್ತಿವೆ. ಹತ್ತಿ ಮತ್ತು ರೇಷ್ಮೆಯ ದಿರಿಸುಗಳ ಉರುಳು ಸುತ್ತುತ್ತಿವೆ. ಲಾಭ ಮತ್ತುನಷ್ಟದ ಹೊರತಾಗಿ ಮಹಾತ್ಮನ ಸ್ವಾವಲಂಬನೆ ಪಾಠ ಚಿಂತನೆಗೆ ಹಚ್ಚಿದೆ. ಸ್ಥಳೀಯ ವಸ್ತುಗಳಬಳಕೆ ಮತ್ತು ಸ್ತ್ರೀಯರ ಒಳಗೊಳ್ಳುವಿಕೆಯನ್ನು ವಿಜಿಕೆಕೆ 'ಗಾಂಧಿಬಜಾರು' ಸಾಕಾರಗೊಳಿಸಿದೆ.

ತಾಲ್ಲೂಕಿನ ಬಿಳಿಗಿರಿಬೆಟ್ಟದ ವಿಜಿಕೆಕೆಯಲ್ಲಿ (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ) ಹಲವು ಜನರ ದೈನಂದಿನ ಬದುಕು ಗುಡಿ ಕೈಗಾರಿಕೆಯಿಂದಲೇ ಆರಂಭ ಆಗುತ್ತದೆ. 'ಕೈ'ಪ್ರಧಾನ ಕಸುಬುಗಳಾದ ಹಣ್ಣು ಸಂಸ್ಕರಣೆ, ಬಟ್ಟೆ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳುಗಾಂಧಿ ಆರ್ಥಿಕತೆಯ ಭಾಗವಾಗಿವೆ. ಗ್ರಾಮ ಉದ್ಯೋಗ ಕಸುಬು ಅಸಂಘಟಿತರಿಗೂ ತುಸು ವರಮಾನತಂದುಕೊಡುವ ಮೂಲವಾಗಿದೆ. ಆ ಮೂಲಕ ಮಹಾತ್ಮರ ಆದರ್ಶ ಮತ್ತು ಸಿದ್ದಾಂತಗಳನ್ನು ಇಲ್ಲಿ
ಜೀವಂತವಾಗಿ ಇಟ್ಟಿದ್ದಾರೆ.

‘ಆರಂಭದಲ್ಲಿ ಮಂದಲಗೆ, ಚಾಪೆ ಬದುಕು ಕಟ್ಟಿಕೊಟ್ಟಿತು. ನಂತರ ಮಗ್ಗಗಳನ್ನು ಸಂಯೋಜಿಸಿಸೋಲಿಗರಿಗೆ ತರಬೇತಿ ನೀಡಲಾಯಿತು. ನಂತರ ರಾಟೆ, ಚರಕಗಳನ್ನು ಬಳಸಿ ನೂಲುತೆಗೆಯಲಾಗುತ್ತಿತ್ತು. ಈಗ ಕೆಲವು ಬದಲಾವಣೆ ಮಾಡಿ ಆಧುನಿಕ ಸೌಲಭ್ಯಗಳನ್ನುಒದಗಿಸಲಾಗಿದೆ. ಪಂಚೆ, ಸೀರೆ ಮತ್ತು ಟವೆಲ್ ಸಿದ್ಧಪಡಿಸಿ ಮಾರಾಟಕ್ಕೆ ಅಣಿಗೊಳಿಸಲಾಗುತ್ತದೆ’ ಎಂದು ಹೇಳುತ್ತಾರೆ ವಿಜಿಕೆಕೆ ಕಾರ್ಯದರ್ಶಿ ಡಾ.ಎಚ್.ಸುದರ್ಶನ್.

‘ಬಾಪು ಮತ್ತು ನರೇಂದ್ರ ನನ್ನ ಬದುಕು ಬದಲಿಸಿದ ಮಹಾತ್ಮರು. ರಾಷ್ಟ್ರಪಿತ ಪ್ರಪಂಚಕ್ಕೆಸತ್ಯ ಮತ್ತು ಅಹಿಂಸೆ ಮೂಲಕ ಬದುಕುವುದನ್ನು ತಿಳಿಸಿಕೊಟ್ಟರು. ಅದೇ ಸಮಯದಲ್ಲಿ ಖಾದಿತೊಟ್ಟವರಿಗೆ ಸೇವಾಶ್ರಮದಲ್ಲಿ ಅವಕಾಶ ಕಲ್ಪಿಸಿದರು. ತಾವೇ ತಕಲಿ ಬಳಸಿ ಅಗತ್ಯಕ್ಕೆಬೇಕಾದ ವಸ್ತ್ರ ನೇಯುವುದನ್ನು ಕಲಿತರು. ಇಂದಿನ ಸಮಾಜಿಕ ಸಂಕಟಗಳಿಗೆ ಗಾಂಧೀ ಮಾರ್ಗ ಮದ್ದಾಗಬಲ್ಲುದು’ ಎಂಬುದು ಅವರ ಅಭಿಪ್ರಾಯ.

‘ಸ್ವರಾಜ್ಯ ಕಲ್ಪನೆಯ ತಳಹದಿ ಕಾಯಕದ ಉದ್ದೇಶ. ಕಚ್ಚಾ ವಸ್ತುಗಳನ್ನು ಸ್ಥಳೀಯವಾಗಿಕೊಳ್ಳುತ್ತೇವೆ. ಗಿರಿಜನ ಸ್ತ್ರೀಯರು ಬಟ್ಟೆ ನೇಯ್ಗೆಯಲ್ಲಿ ಪರಿಣತಿ ಪಡೆದಿದ್ದಾರೆ.ಇವರ ಉತ್ಪನ್ನಗಳು ತಮಿಳುನಾಡಿಗೂ ಮಾರಾಟ ಆಗುತ್ತವೆ. ಒಟ್ಟಾರೆ, ಶ್ರಮತತ್ವದಆಧಾರದಲ್ಲಿ ಕಾಯಕಕ್ಕೆ ಅವಕಾಶ ದೊರೆತಿದೆ’ ಎಂದು ನೇಕಾರ ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

'ಉತ್ಪನ್ನಗಳಿಗೆ ಯಾವುದೇ ಹೆಸರಿಲ್ಲ. ಮಾರುಕಟ್ಟೆಯ ಬಲವಿಲ್ಲ. ಸಂಸ್ಥೆಗೆ ಆಗಮಿಸುವಗಾಂಧೀವಾದಿಗಳು ಕೊಳ್ಳುತ್ತಾರೆ. ಕೆಲವರು ಡಿಸೈನ್ ಕೊಟ್ಟು, ಸಿದ್ಧಪಡಿಸಲು ಹಲವು ದಿನಕಾಯುತ್ತಾರೆ. ಸರಳ ಉಡುಪು ಮತ್ತು ನಿಸರ್ಗದತ್ತ ಆಹಾರಕ್ಕೆ ಬೇಡಿಕೆ ಸಲ್ಲಿಸುವವರುಆಸೆಗಣ್ಣಿನಿಂದ ಇಲ್ಲಿಗೆ ಬರುತ್ತಾರೆ' ಎಂದರು.

ತಾಲ್ಲೂಕಿನಲ್ಲಿ ನರೇಗಾ ಹಲವು ಜನರಕೈಹಿಡಿದಿದೆ. ಹದಗೆಟ್ಟ ಅರ್ಥವ್ಯವಸ್ಥೆಗೆ ಸ್ವಯಂ ಉದ್ಯೋಗದ ಮಹತ್ವ ಗ್ರಾಮ ವಾಸಿಗಳಿಗೆಅರಿವಾಗುತ್ತಿದೆ. ಸ್ವರಾಜ್ಯದ ಪರಿಕಲ್ಪನೆಗಳನ್ನು ಇಂದಿನ ವಿದ್ಯಾರ್ಥಿಗಳ ಎದೆಯೊಳಗೆಇಳಿಸುವ ಅನಿವಾರ್ಯ ನಮ್ಮ ಮುಂದಿದೆ. ಕೋವಿಡ್ ಸಂದರ್ಭದಲ್ಲಿ ಕೆಲವರು ಮತ್ತೆಹಳ್ಳಿಯೆಡೆಗೆ ಹಿಂದಿರುಗಿ ಮತ್ತೆ ಕೃಷಿ ಭೂಮಿಯತ್ತ ಹೊರಳುತ್ತಿದ್ದಾರೆ.

1934 ಜನವರಿ 5ರಲ್ಲಿ ಮೈಸೂರಿಗೆ ಗಾಂಧೀಜಿ ಆಗಮಿಸಿದ್ದರು. ಅಗರಂ ರಂಗಯ್ಯ ಮತ್ತುತಗಡೂರು ರಾಮಚಂದ್ರರಾವ್ ಜೊತೆಗೂಡಿ ಬದನವಾಳು ಗ್ರಾಮಕ್ಕೆ ಭೇಟಿ ನೀಡಿದ್ದರು. ಇಲ್ಲಿ'ಅಖಿಲ ಭಾರತ ಚರಕ ಸಂಘ' ಸ್ಥಾಪನೆಗೆ ಮುನ್ನುಡಿ ಬರೆದರು. ಗ್ರಾಮಾಂತರ ಪ್ರದೇಶಗಳಲ್ಲಿಗಾಂಧೀ ಮತ್ತು ಖಾದಿ ಎನ್ನುವುದು ಭಾರತೀಯರ ಸ್ವಾತಂತ್ರ್ಯ ಹೋರಾಟದ ಹಾದಿಗೆರೂಪಕವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT