ಮಂಗಳವಾರ, ಸೆಪ್ಟೆಂಬರ್ 21, 2021
21 °C

ಹುಟ್ಟುಹಬ್ಬದ ದಿನದಂದೇ ವಿದ್ಯುತ್‌ ಸ್ಪರ್ಶಿಸಿ ಮಗು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ತಾಲ್ಲೂಕಿನ ಕೆಂಗಾಕಿ ಗ್ರಾಮದಲ್ಲಿ ಮೂರು ವರ್ಷ ಹೆಣ್ಣು ಮಗುವೊಂದು ಹುಟ್ಟುಹಬ್ಬದ ದಿನವಾದ ಬುಧವಾರ ವಿದ್ಯುತ್‌ ಸ್ಪರ್ಶದಿಂದಾಗಿ ಮೃತಪಟ್ಟಿದೆ. 

ಗ್ರಾಮದ ಸಿದ್ಧಲಿಂಗಸ್ವಾಮಿ ಎಂಬುವವರ ಮಗಳು ನಿವೇದಿತಾ ಮೃತಪಟ್ಟ ದುರ್ದೈವಿ. ಬುಧವಾರವೇ ಆಕೆಯ ಹುಟ್ಟುಹಬ್ಬ ಇತ್ತು. 

‘ಸಿದ್ಧಲಿಂಗಸ್ವಾಮಿ ಅವರ ಜಮೀನಿನಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಘಟನೆ ನಡೆದಿದೆ. ಆಟವಾಡುತ್ತಿದ್ದ ಮಗು ಜಮೀನಿನಲ್ಲಿದ್ದ ಪಂಪ್‌ ಸ್ಟಾರ್ಟರ್‌ ಹತ್ತಿರ ಹೋಗಿದೆ. ಹೇಗೆ ವಿದ್ಯುತ್‌ ಸ್ಪರ್ಶ ಆಯಿತು ಎಂಬುದು ಪೋಷಕರಿಗೂ ಗೊತ್ತಿಲ್ಲ. ಅಸ್ವಸ್ಥಗೊಂಡಿದ್ದ ಮಗುವನ್ನು ಕಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗು ಕೊನೆಯುಸಿರೆಳೆದಿದೆ’ ಎಂದು ಗ್ರಾಮಾಂತರ ಠಾಣೆಯ ಇನ್‌ಸ್ಪೆಕ್ಟರ್‌ ಪುಟ್ಟಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು