ಶನಿವಾರ, ಅಕ್ಟೋಬರ್ 24, 2020
23 °C
ಶುಕ್ರವಾರ ರಾತ್ರಿ ಜಿಲ್ಲೆಯಲ್ಲಿ 2.8 ಸೆಂ.ಮೀ ಮಳೆ, ಚಾಮರಾಜನಗರದಲ್ಲಿ 3.7 ಸೆಂ.ಮೀ

ಬಿರುಸಿನ ವರ್ಷಧಾರೆ; ಕೆರೆಕಟ್ಟೆಗಳಿಗೆ, ಹರಿದ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿಯೂ ಉತ್ತಮ ಮಳೆಯಾಗಿದ್ದು, ಕೆರೆ ಕಟ್ಟೆಗಳಿಗೆ ನೀರು ಹರಿದು ಬಂದಿದೆ. 

ನಗರದ ಐತಿಹಾಸಿಕ ದೊಡ್ಡರಸನಕೊಳ ಅರ್ಧದಷ್ಟು ತುಂಬಿದೆ. ತಾಲ್ಲೂಕಿನ ಕೋಡಿಮೋಳೆ ಕೆರೆಗೂ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. 

ಶುಕ್ರವಾರ ಬೆಳಿಗ್ಗೆ 8.30ರಿಂದ ಶನಿವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 2.8 ಸೆಂ.ಮೀ ಮಳೆಯಾಗಿದೆ.

ಚಾಮರಾಜನಗರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 3.7 ಸೆಂ.ಮೀ ಮಳೆಯಾಗಿದೆ. ಹನೂರು ತಾಲ್ಲೂಕಿನಲ್ಲಿ 3.5 ಸೆಂ.ಮೀ ಮಳೆ ಸುರಿದಿದೆ. ಕೊಳ್ಳೇಗಾಲ 2.9, ಯಳಂದೂರು 1.8 ಮತ್ತು ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 0.8 ಸೆಂ.ಮೀ ಮಳೆಯಾಗಿದೆ. 

ಹೋಬಳಿಗಳ ಪೈಕಿ ಚಾಮರಾಜನಗರ ಹೋಬಳಿಯಲ್ಲಿ 5.6 ಸೆಂ.ಮೀ ಮಳೆಯಾಗಿದೆ. ಹರವೆಯಲ್ಲಿ 4.9, ಹರದನಹಳ್ಳಿಯಲ್ಲಿ 4.7 ಸೆಂ.ಮೀ ಮಳೆ ಬಿದ್ದಿದೆ. 

ತಗ್ಗು ಪ್ರದೇಶಗಳಲ್ಲಿ ನೀರು: ಶುಕ್ರವಾರ ಸಂಜೆಯಿಂದಲೇ ಸುರಿದ ಭಾರಿ ಮಳೆಯಿಂದಾಗಿ ಹೊಲ, ತೋಟಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ತಗ್ಗು ಪ್ರದೇಶಗಳೆಲ್ಲ ಕೆರೆಯಾಗಿ ಮಾರ್ಪಟ್ಟಿದ್ದವು.

ಶನಿವಾರವೂ ಮಳೆ: ಜಿಲ್ಲೆಯಾದ್ಯಂತ ಶನಿವಾರವೂ ಮೋಡದ ವಾತಾವರಣ ಮುಂದುವರಿದಿದ್ದು, ಸಂಜೆ ಹೊತ್ತಿಗೆ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಚಾಮರಾಜನಗರದಲ್ಲಿ ಸಂಜೆ ಸಾಧಾರಣ ಮಳೆಯಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು