ಹನೂರು: ಕಾಡುಗಳ್ಳ ವೀರಪ್ಪನ್ ಒಡನಾಟವಿದ್ದ ಊರು ಎಂಬ ಕುಖ್ಯಾತಿಯ ಜೊತೆಗೆ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ರಾಜ್ಯದ ಗಡಿ ಗ್ರಾಮ ಗೋಪಿನಾಥಂನಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ಸ್ಥಳೀಯರು ಹಾಗೂ ಪ್ರವಾಸಿಗರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಹದೇಶ್ವರ ಬೆಟ್ಟದಿಂದ ತಮಿಳುನಾಡಿಗೆ ರಾಜ್ಯ ಹೆದ್ದಾರಿ 79 ಸಂಪರ್ಕ ಕಲ್ಪಿಸುತ್ತದೆ. ಪಾಲಾರ್ನಿಂದ 28 ಕಿ.ಮೀ ದೂರದಲ್ಲಿ ಹೊಗೆನಕಲ್ ಇದ್ದು, 16 ಕಿ.ಮೀ ದೂರದಲ್ಲಿ ಗೋಪಿನಾಥಂ ಗ್ರಾಮ ಇದೆ. ಗೋಪಿನಾಥಂನಿಂದ ಹೊಗೆನಕಲ್ಗೆ 12 ಕಿ.ಮೀ ದೂರವಿದ್ದು ಈ ರಸ್ತೆ ತೀರಾ ಹದಗೆಟ್ಟಿದ್ದು ಸಂಚಾರಕ್ಕೆ ಯೋಗ್ಯವಾಗಿಲ್ಲ.

ಸಾರ್ವಜನಿಕರು ನಿತ್ಯದ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯಲ್ಲಿ ಸಂಚರಿಸಬೇಕು. ಮಕ್ಕಳು ಇದೇ ರಸ್ತೆಯಲ್ಲಿ ಶಾಲೆಗಳಿಗೆ ತೆರಳಬೇಕು. ರಸ್ತೆಯು ಕಾವೇರಿ ವನ್ಯಧಾಮದ ದಟ್ಟಾರಣ್ಯದಿಂದ ಕೂಡಿದ್ದು, ಸ್ಥಳೀಯರು ಜೀವ ಪಣಕ್ಕಿಟ್ಟು ಸಂಚರಿಸಬೇಕು.

2 ದಶಕಗಳ ಹಿಂದೆ(2004-05ಲ್ಲಿ) ನಿರ್ಮಾಣವಾಗಿದ್ದ ರಸ್ತೆ ಮರು ಡಾಂಬರೀಕರಣ ಕಂಡಿಲ್ಲ ಎನ್ನುತ್ತಾರೆ ಇಲ್ಲಿಯ ಜನರು.

ಇಲ್ಲಿನ ಜನರು ವಾಣಿಜ್ಯ ವಹಿವಾಟು, ಇತರೆ ಚಟುವಟಿಕೆಗಳಿಗೆ ತಮಿಳುನಾಡಿನ ಮೆಟ್ಟೂರು ಪಟ್ಟಣವನ್ನು ಆಶ್ರಯಿಸಿದ್ದಾರೆ. ಅವಘಡಗಳು ಸಂಭವಿಸಿದಾಗ ಹೆಚ್ಚಿನವರು ಮೆಟ್ಟೂರಿಗೆ ತೆರಳಬೇಕು. ರಾತ್ರಿ ವೇಳೆ ಆರೋಗ್ಯ ಸಮಸ್ಯೆಯಾದರೆ ರಸ್ತೆಯ ಹದಗೆಟ್ಟಿರುವ ಕಾರಣಕ್ಕೆ ಗ್ರಾಮಕ್ಕೆ ಆಂಬುಲೆನ್ಸ್ ಬರುವುದಿಲ್ಲ, ಖಾಸಗಿ ವಾಹನಗಳಲ್ಲಿ ರೋಗಿಗಳನ್ನು ಕೊಂಡೊಯ್ಯಬೇಕು, ಗುಂಡಿಬಿದ್ದ ರಸ್ತೆಯಲ್ಲಿ ಸಂಚರಿಸುವುದು ದೊಡ್ಡ ಸವಾಲಾಗಿ ಕಾಣುತ್ತಿದೆ ಎನ್ನುತ್ತಾರೆ ಗೋಪಿನಾಥಂ ಗ್ರಾಮದ ಶಿವಚಂದ್ರನ್.

ಪ್ರವಾಸೋದ್ಯಕ್ಕೂ ಪೆಟ್ಟು: ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವಿಶೇಷ ಜಾತ್ರೆ, ಹಬ್ಬ ಹರಿದಿನಗಳಲ್ಲಿ ಭಾಗವಹಿಸುವ ಬಹುತೇಕ ಭಕ್ತರು ಮಾದಪ್ಪನ ದರ್ಶನ ಪಡೆದು ಗೋಪಿನಾಥಂಗೆ ಬರುತ್ತಾರೆ. ಇಲ್ಲಿ ಸಫಾರಿ ಮುಗಿಸಿಕೊಂಡು ಹೊಗೆನಕಲ್ ಜಲಪಾತ ವೀಕ್ಷಣೆಗೆ ತೆರಳುತ್ತಾರೆ.ಆದರೆ, ಇತ್ತೀಚಿನ ದಿನಗಳಲ್ಲಿ ಕೊಕ್ಕರೆಹಳ್ಳ ಗೇಟ್ವರೆಗೆ ಬರುವ ಪ್ರವಾಸಿಗರು ಹಾಗೂ ಭಕ್ತರು ರಸ್ತೆಯ ದುಸ್ಥಿತಿ ಕಂಡು ಹೊಗೆನಕಲ್ ನೋಡುವ ಆಸೆಯನ್ನೇ ಕೈಬಿಟ್ಟು ವಾಪಸ್ ತೆರಳುತ್ತಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆಗಳು ಕುಂಠಿತಗೊಂಡಿದೆ. ಸ್ಥಳೀಯರೇ ರಸ್ತೆಗೆ ಮಣ್ಣು ಹಾಕಿ ಸರಿಪಡಿಸಿದ್ದೇವೆ. ಆದರೆ ಮಳೆ ಬಂದು ಮತ್ತೆ ಗುಂಡಿಗಳು ಕಾಣುತ್ತವೆ, ಸಂಚಾರ ಕಷ್ಟವಾಗುತ್ತದೆ ಎನ್ನುತ್ತಾರೆ ಮಾರಿಕೋಟೈ ಗ್ರಾಮದ ರತ್ನವೇಲು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-37-690957326

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.