ಗುಂಡ್ಲುಪೇಟೆ: ತಾಲ್ಲೂಕಿನ ಮೂಡುಗೂರಿನ ಶ್ರೀಮಠದ ಇಮ್ಮಡಿ ಉದ್ದಾನಸ್ವಾಮೀಜಿ ಸಮ್ಮುಖದಲ್ಲಿ ವಚನ ಕಲ್ಯಾಣ ಮಹೋತ್ಸವ ಸರಳವಾಗಿ ನಡೆಯಿತು.

ಬಸವಣ್ಣ, ಶರಣರು ಸಮ್ಮತಿಸಿದ ಮಾರ್ಗದಂತೆ ನಡೆವ ವಚನ ಕಲ್ಯಾಣ ಮಹೋತ್ಸವದಲ್ಲಿ ಕೇರಳ ರಾಜ್ಯದ ವಯನಾಡು ಜಿಲ್ಲೆಯ ಆಂಡೂರು ನಿವಾಸಿ ಕನ್ನಡಿಗರಾದ ಮಾಚಪ್ಪ-ರೇಣುಕಾ ದಂಪತಿ ಮಗ ಸಂಗಮೇಶ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಪ್ಪಾಜಿ-ರೇಖಾ ದಂಪತಿ ಪುತ್ರಿ ಐಶ್ವರ್ಯ ಗುರು ಲಿಂಗ ಜಂಗಮ ಸಾಕ್ಷಿಯಾಗಿ ವಿವಾಹವಾದರು.

ಗುರು ಸಮ್ಮುಖದಲ್ಲಿ ನೂತನ ವಧು, ವರ ಇಷ್ಟಲಿಂಗ ಪೂಜೆ ನೆರವೇರಿಸಿ, ಧರ್ಮ ಧ್ವಜಾರೋಹಣ ಮಾಡಿ, ಧರ್ಮಗುರು ಬಸವಣ್ಣನವರಿಗೆ ಪುಷ್ಪಾರ್ಚನೆಮಾಡಿ, ಜಂಗಮರು, ತಂದೆ–ತಾಯಿ ಪಾದಪೂಜೆ ಮಾಡಿದರು. ಅಷ್ಟಾವರಣ, ವಿಭೂತಿ , ರುದ್ರಾಕ್ಷಿ ಧಾರಣೆ, ಮಾಲೆ ಬದಲಾವಣೆ ಮಾಡಿಕೊಂಡರು. ಇಮ್ಮಡಿ ಉದ್ದಾನಸ್ವಾಮೀಜಿ ಬೋಧಿಸಿದ ಪ್ರತಿಜ್ಞೆಯನ್ನು ಸ್ವೀಕರಿಸಿ, ಮಾಂಗಲ್ಯ ಧಾರಣೆ ಮಾಡಿ, ಸರಳ ವಿವಾಹ ವಿಧಿ ನೆರವೇರಿತು.

ಇಮ್ಮಡಿ ಉದ್ದಾನಸ್ವಾಮೀಜಿ ಮಾತನಾಡಿ, ಹಣ ಹಾಗೂ ಸಮಯ ಎರಡೂ ಸಂಪತ್ತುಗಳನ್ನು ಅಪಮೌಲ್ಯಗೊಳಿಸದೆ ಬಳಸಬೇಕು. ಈ ಕಲ್ಯಾಣ ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳ ಸದಸ್ಯರು, ಸ್ನೇಹಿತರು, ಬಂಧು ಬಳಗವಷ್ಟೇ ಭಾಗವಹಿಸಿ ಸಂಭ್ರಮಿಸಿದ್ದು, ಎರಡು ಮನ, ಎರಡು ಮನೆ, ಎರಡು ಊರು ಸೇರುವ ಮದುವೆಯಲ್ಲಿ ಎರಡು ರಾಜ್ಯಗಳನ್ನು ಸೇರಿಸಿ ಇದು ವಿಶೇಷ ಮದುವೆಯಾಗಿದೆ. ಮಠದಲ್ಲಿ ನಡೆಯುತ್ತಿರುವ ಈ 9ನೇ ಮದುವೆಯ ದಂಪತಿಗೆ ಬಸವಣ್ಣನ ಭಾವಚಿತ್ರ ಕೊಟ್ಟು ಬೀಳ್ಕೊಟ್ಟರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶೈಲಕುಮಾರ್ , ಕುಮಚಹಳ್ಳಿ ಗುರುಮಲ್ಲೇಶ್ವರ ಭಜನಾ ಸಂಘದವರು ಪೂರಕ ವಚನಗಳನ್ನು ಹಾಡಿದರು. ಹೂರದಹಳ್ಳಿ ಪರಮೇಶ್ವರಪ್ಪ, ಬಲಚವಾಡಿ ಬಿಕ್ಷದ ಮಠದ ಸ್ವಾಮೀಜಿ ವಿವಾಹ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.