ಗುಂಡ್ಲುಪೇಟೆ: ಇಲ್ಲಿನ ಪುರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ಪುರಸಭೆ ಆಡಳಿತಾಧಿಕಾರಿ ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ದಿನೇಶ್ಕುಮಾರ್ ಮೀನಾ ಗುರುವಾರ ಮಂಡಿಸಿದರು.

ಪಟ್ಟಣ ಪುರಸಭಾ ಸಭಾ ಭವನದಲ್ಲಿ ನಡೆದ ಬಜೆಟ್ ಸಭೆಯಲ್ಲಿ ಮಾತನಾಡಿದ ಅವರು, ₹1 ಕೋಟಿ ವೆಚ್ಚದಲ್ಲಿ ಈಜುಕೊಳ ಹಾಗೂ ₹50 ಲಕ್ಷ ವೆಚ್ಚದಲ್ಲಿ ಆಧುನಿಕ ಜಿಮ್ ನಿರ್ಮಿಸಲಾಗುವುದು. ಪ್ರವಾಸಿ ತಾಣಗಳ ಗುರುತಿಸಲು ಡಿಜಿಟಲ್ ಟೂರಿಸಂ ಮಾಹಿತಿ ಫಲಕ ಅಳವಡಿಸಲಾಗುವುದು ಎಂದರು.

ಊಟಿ-ಮೈಸೂರು ರಸ್ತೆಯಲ್ಲಿ ಪಾದಚಾರಿ ಮಾರ್ಗ ನಿರ್ಮಾಣ ಹಾಗೂ ರೈಲಿಂಗ್ಸ್ ಅಳವಡಿಸಲಾಗುವುದು. ಮುಖ್ಯ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಘನ ತ್ಯಾಜ್ಯ ನಿರ್ವಹಣ ಘಟಕಕ್ಕೆ ಸೋಲಾರ್ ಘಟಕ ಅಳವಡಿಸಲಾಗುವುದು. ಕೊಳೆಗೇರಿ ಅಭಿವೃದ್ಧಿ, ಪುರಸಭೆ ಅಧಿಕಾರಿ, ನೌಕರರ ವಸತಿಗೃಹ ನಿರ್ಮಾಣ, ಆಟೊ ಟ್ಯಾಕ್ಸಿ ನಿಲುಗಡೆ ತಾಣ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಶ್ರೀರಾಮ ದೇವರ ಗುಡ್ಡದ ಬಳಿಯ ಆಶ್ರಯ ಯೋಜನೆ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಲಾಗುವುದು. ಚಿಕ್ಕತುಪ್ಪೂರು ಗ್ರಾಮದ ಬಳಿ ಹೊಸ ಬಡಾವಣೆಗೆ ಮೂಲಸೌಲಭ್ಯ ಒದಗಿಸಲಾಗುವುದು. ಹೊಸ ಬಡಾವಣೆ ಸಿಎ ನಿವೇಶನಗಳಲ್ಲಿ ಹಣ್ಣು, ತರಕಾರಿ ಮಾರುಕಟ್ಟೆ ನಿರ್ಮಾಣವಾಗಲಿದೆ. ಕಸಾಯಿಖಾನೆಗೆ ಆಧುನಿಕ ಸಾಮಗ್ರಿಗಳ ಅಳವಡಿಕೆ ಮತ್ತು ಉನ್ನತೀಕರಣ ನಡೆಯಲಿದೆ ಎಂದು ಮಾಹಿತಿ ನೀಡಿದರು.

₹7.50 ಕೋಟಿ ವೆಚ್ಚದಲ್ಲಿ ಪುರಸಭೆ ಕಚೇರಿ ಕಟ್ಟಡ, 5 ಕೋಟಿ ವೆಚ್ಚದಲ್ಲಿ ರಸ್ತೆ, ಮತ್ತು ಚರಂಡಿ ಅಭಿವೃದ್ಧಿ, ನೈರ್ಮಲ್ಯ ವಾಹನ ಖರೀದಿ ₹1.2 ಕೋಟಿ ವೆಚ್ಚ ಮಾಡಲಾಗುವುದು ಎಂದು ತಿಳಿಸಿದರು.

ಆಸ್ತಿ ತೆರಿಗೆ, ದಂಡ, ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ, ಅಭಿವೃದ್ಧಿ ಮತ್ತು ಸುಧಾರಣೆ, ಉದ್ದಿಮೆ ಪರವಾನಗಿ ಶುಲ್ಕಗಳು, ನೀರಿನ ಶುಲ್ಕ ಮುಂತಾದ ಮೂಲಗಳಿಂದ ₹5.55 ಲಕ್ಷ ಆದಾತ ನಿರೀಕ್ಷಿಸಲಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ₹21.54 ಕೋಟಿ ಅನುದಾನ ನಿರೀಕ್ಷಿಸಲಾಗಿದೆ ಎಂದದರು.

ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಸರವಣ, ಕಂದಾಯ ಅಧಿಕಾರಿ ಸವಿತ, ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಆರೋಗ್ಯ ನಿರೀಕ್ಷಕ ಪರಮೇಶ್ವರಪ್ಪ, ಪರಿಸರ ಎಂಜಿನಿಯರ್ ಮಹೇಶ್, ಎಫ್ಡಿಎ ಕಿರಣ್, ಲೆಕ್ಕಾಧಿಕಾರಿ ಹೇಮಾ, ನೌಕರರಾದ ಮೂರ್ತಿ, ಅನುಪಮ, ಗು.ಚಿ.ರಮೇಶ್, ಪುಟ್ಟಸ್ವಾಮಿ, ರವಿ, ಶಿವು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.