ಗುಂಡ್ಲುಪೇಟೆ: ಒಳಮೀಸಲಾತಿಯಲ್ಲಿ ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯ ಖಂಡಿಸಿ ಬಲಗೈ ಸಮುದಾಯಗಳ ಒಕ್ಕೂಟ, ಹೊಲೆಯ ಬ್ರಿಗೇಡ್ ವತಿಯಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಜಮಾವಣೆಗೊಂಡ ಬಲಗೈ ಸಮುದಾಯಗಳ ಒಕ್ಕೂಟ, ಹೊಲೆಯ ಬ್ರಿಗೇಡ್ ಪದಾಧಿಕಾರಿಗಳು ಮತ್ತು ತಾಲೂಕಿನ ವಿವಿಧ ಗ್ರಾಮಗಳ ಯಜಮಾನರು ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಹೊಲಯ ಸಮುದಾಯದ ಶಾಸಕರು, ಸಚಿವರು, ಸಂಸದರು, ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು. ನಂತರ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಜಮಾಯಿಸಿದರು.

ಈ ಸಂದರ್ಭದಲ್ಲಿ ಬಲಗೈ ಸಮುದಾಯದ ಮುಖಂಡ ಡಾ.ನವೀನ್ ಮೌರ್ಯ ಮಾತನಾಡಿ, ‘ಒಳಮೀಸಲಾತಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಸಿದುಕೊಂಡಿರುವ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ. ನಾವು ಒಳಮೀಸಲಾತಿ ವಿರೋಧಿಗಳಲ್ಲ, ರೋಸ್ಟರ್ ಬಿಂದುವನ್ನು ಮಾತ್ರ ವಿರೋಧ ಮಾಡುತ್ತಿದ್ದೇವೆ’ ಎಂದು ಹೇಳಿದರು.

ಮುಖಂಡ ಸಿ.ಕೆ.ಮಂಜುನಾಥ್ ಮಾತನಾಡಿ, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಳ ಮೀಸಲಾತಿ ಜಾರಿ ಮಾಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ ಮೀಸಲಾತಿ ಜಾರಿಯಲ್ಲಿ ಹೊಲೆಯ ಸಮುದಾಯಕ್ಕೆ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಬಹಳ ಅನ್ಯಾಯ ಮಾಡಿದ್ದಾರೆ’ ಎಂದು ದೂರಿದರು.

ಅಗತಗೌಡನಹಳ್ಳಿ ಬಸವರಾಜು ಮಾತನಾಡಿ, ‘ಸಂವಿಧಾನದ ಉಳಿವಿಗಾಗಿ ನಾವು ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ನಂತರ ಒಳ ಮೀಸಲಾತಿ ನೆಪದಲ್ಲಿ ಹೊಲೆಯ ಸಮುದಾಯಕ್ಕೆ ಮರಣ ಶಾಸನ ಮಂಡಿಸಿದ್ದಾರೆ. ಮಾಜಿ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಬದುಕಿದ್ದರೆ ಒಳಮೀಸಲಾತಿ ಜಾರಿಯಾಗಲು ಬಿಡುತ್ತಿರಲಿಲ್ಲ’ ಎಂದರು.

ಮೂಡ್ನಾಕೂಡು ಪ್ರಕಾಶ್ ಮಾತನಾಡಿ, ‘ಸಂವಿಧಾನದ ಓದಿನ ಹೆಸರಿನಲ್ಲಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಬಲಗೈ ಸಮುದಾಯದಕ್ಕೆ ಮೋಸ ಮಾಡಿದ್ದಾರೆ. ₹53 ಸಾವಿರ ಕೋಟಿ ಎಸ್ಇಪಿ, ಎಸ್ಟಿಪಿ ಹಣವನ್ನು ಗ್ಯಾರಂಟಿ ಯೋಜನೆಗೆ ದುರುಪಯೋಗ ಮಾಡಿಕೊಂಡಿದ್ದಾರೆ’ ಎಂದು ದೂರಿದರು.

ಪ್ರತಿಭಟನಾನಿರತ ಬಲಗೈ ಸಮುದಾಯಗಳ ಒಕ್ಕೂಟ, ಹೊಲೆಯ ಬ್ರಿಗೇಡ್ ವತಿಯಿಂದ ತಹಶೀಲ್ದಾರ್ ತನ್ಮಯ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮುಖಂಡ ಸಿ.ಎಂ.ಕೃಷ್ಣಮೂರ್ತಿ, ಪುರಸಭೆ ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಕನ್ನೇಗಾಲ ಗ್ರಾಪಂ ಮಾಜಿ ಸದಸ್ಯ ನಾಗುಸ್ವಾಮಿ, ದಲಿತ ಸಂಘರ್ಷ ಸಮಿತಿಯ ಸುಭಾಷ್ ಮಾಡ್ರಹಳ್ಳಿ, ಸ್ವಾಮಿ, ಮಾಧು, ಸಂಪತ್ತು, ಬೇರಂಬಾಡಿ ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ, ರಾಘವಪುರ ಗ್ರಾ.ಪಂ ಮಾಜಿ ಅಧ್ಯಕ್ಷ ಆರ್.ಡಿ.ಉಲ್ಲಾಸ್, ರಾಘವಪುರ ದೇವಯ್ಯ, ಮಧು ಬೆಳವಾಡಿ, ಶ್ರೀನಿವಾಸ್ ಪಾಳ್ಯ, ಡಿಎಸ್ಎಸ್ ಮಂಜುನಾಥ್, ವಾಸು, ಮದ್ದಯ್ಯನಹುಂಡಿ ನಾಗರಾಜು, ಸಂಘಸೇನಾ, ಶಿವಯ್ಯ ತೊಂಡವಾಡಿ, ಪುಟ್ಟು, ಕೆ.ಸಿ.ಸಿದ್ದರಾಜು, ಮಾಡ್ರಹಳ್ಳಿ ಮಹದೇವಸ್ವಾಮಿ, ಮಂಗಲ ಉಮೇಶ್, ವೀರನಪುರ ಶಿವು, ರವೀಶ್, ರೇವಣ್ಣ ಕಬ್ಬಹಳ್ಳಿ, ಕಿಲಗೆರೆ ಬಸವಣ್ಣ, ಹರಿಶ್ವಂದ್ರ, ಶಾಂತಕುಮಾರ್, ದೇವರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-37-95107722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.