ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನ ಚೆನ್ನಮಲ್ಲಿಪುರ ಗ್ರಾಮದ ಬಾಳೆತೋಟ, ಆಸುಪಾಸಿನಲ್ಲಿ ಮರಿ ಜತೆ ತಾಯಿ ಹುಲಿ ವಾಸ್ತವ್ಯವಿದ್ದು, ಚಲನವಲನದ ಮೇಲೆ ಅರಣ್ಯ ಇಲಾಖೆಯು ಡ್ರೋನ್ ಕ್ಯಾಮೆರಾ ಮೂಲಕ ನಿಗಾ ಇರಿಸಿದೆ.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಗ್ರಾಮದ ರೈತ ನಾಗಪ್ಪ ಅವರ ಜಮೀನಿನಲ್ಲಿ ಮೂರು ದಿನಗಳ ಹಿಂದೆ 2 ವರ್ಷ ವಯಸ್ಸಿನ ಗಂಡು ಹುಲಿಯನ್ನು ಅಧಿಕಾರಿಗಳು ಸೆರೆ ಹಿಡಿದ್ದು, ಮೈಸೂರಿನ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದರು. ಈಗ ಮರಿಯೊಂದಿಗೆ ತಾಯಿ ಹುಲಿ ಕಾಣಿಸಿಕೊಂಡಿದ್ದು, ಭೀತಿ ಆವರಿಸಿದೆ.

ಹುಲಿ ಮೇಲೆ ನಿಗಾ: ‘ಮದ್ದೂರು ವಲಯದಲ್ಲಿ ಮರಿಯೊಂದಿಗೆ ಇರುವ ತಾಯಿ ಹುಲಿಗಳ ಸೆರೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಲು ತೀರ್ಮಾನಿಸಿದ್ದು, ಸಾಕಾನೆಗಳು ಕುಶಾಲನಗರದಲ್ಲಿ ಇರುವುದರಿಂದ ಸೆರೆ ಕಾರ್ಯಾಚರಣೆ ತಡವಾಗಿದೆ.

ಗುರುವಾರ ಬೆಳಿಗ್ಗೆ ಅವು ಬರುವ ನಿರೀಕ್ಷೆಯಿದ್ದು, ಕಾರ್ಯಾಚರಣೆ ಆರಂಭಿಸಲಾಗುವುದು. ಅಲ್ಲಿಯವರೆಗೆ ಎಸ್.ಟಿ.ಪಿ.ಎಫ್ ಸಿಬ್ಬಂದಿ, ಮದ್ದೂರು, ಮೂಲೆಹೊಳೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಾಳೆತೋಟದಲ್ಲಿ ಬೀಡು ಬಿಟ್ಟಿರುವ ಹುಲಿಗಳ ಮೇಲೆ ನಿಗಾ ವಹಿಸುವರು’ ಎಂದು ಆರ್ಎಫ್ಒ ಪುನೀತ್ ಮಾಹಿತಿ ನೀಡಿದರು.

ಸಫಾರಿ ಆರಂಭಕ್ಕೆ ಆಕ್ರೋಶ

ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಾಗಿ ಸಾವು ನೋವು ಸಂಭವಿಸಿದ ಬಳಿಕ ಮತ್ತು ರೈತರ ಹೋರಾಟದಿಂದ ಎಚ್ಚೆತ್ತ ಅರಣ್ಯ ಸಚಿವರು ಬಂಡೀಪುರ ಸಫಾರಿಗೆ ನಿಷೇಧ ಹೇರಲು ಸೂಚಿಸಿದ್ದರು. ಹುಲಿ ಉಪಟಳದ ವರದಿಯಾಗಿರಲಿಲ್ಲ.

ನಂತರ ರೈತರ ಹಿತ ಮರೆತ ಸರ್ಕಾರ ರೇಸಾರ್ಟ್ ಮಾಲೀಕರ ಲಾಬಿಗೆ ಮಣಿದು ಸಫಾರಿ ಮರು ಆರಂಭಕ್ಕೆ ಹಸಿರು ನಿಶಾನೆ ತೋರಿದ ಪರಿಣಾಮವೇ ಜನ ವಸತಿ ಪ್ರದೇಶಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿವೆ. ರೈತರು ನಿರ್ಭೀತಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಲು ಹಿಂದೇಟು ಹಾಕುವ ವಾತಾವರಣ ಇದೆ. ಬಂಡೀಪುರ ಸಫಾರಿ ಬಂದ್ ಮಾಡಬೇಕು’ ಎಂದು ರೈತ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಶಿವಪುರ ಮಹದೇವಪ್ಪ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.