ಗುಂಡ್ಲುಪೇಟೆ: ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಹಿನ್ನಲೆ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ-766ರಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಮಲ್ಲಯ್ಯನಪುರ ಗೇಟ್ ಬಳಿಯ ಅಪಘಾತ ನಡೆದ ಸ್ಥಳದ ಬಳಿ ಜಮಾವಣೆಗೊಂಡ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಅಧಿಕಾರಿಗಳು, ಆಡಳಿತ ಜನಪ್ರತಿನಿಧಿಗಳು ಹಾಗೂ ಟಿಪ್ಪರ್ ಚಾಲಕನ ವಿರುದ್ಧ ಆಕ್ರೋಶ ಹೊರ ಹಾಕಿದರು.

ಬಿಜೆಪಿ ಯುವ ಮುಖಂಡ ಪ್ರಣಯ್ ಮಾತನಾಡಿ, ಟಿಪ್ಪರ್ ಹಾವಳಿ ಕಾರಣ ತಾಲೂಕಿನಲ್ಲಿ ಅನೇಕ ಜೀವ ಬಲಿಯಾಗುತ್ತಿವೆ. ಸಂಪಾದನೆ ಕಾರಣಕ್ಕೆ ಜೀವಕ್ಕೆ ಬೆಲೆ ಬೇಡವೇ ಎಂದು ಪ್ರಶ್ನಿಸಿದರು. ಸಮಯ ನಿಗದಿಯಾದರೂ ಎಲ್ಲ ಸಮಯದಲ್ಲೂ ಟಿಪ್ಪರ್ಳನ್ನು ಓಡಿಸಲಾಗುತ್ತಿದೆ. ಅಜಾಗರೂಕ ಚಾಲನೆಯಿಂದ ಸಾವು ಸಂಭವಿಸುವ ಜತೆಗೆ ಖನಿಜ ಸಂಪತ್ತು ಲೂಟಿಯಾಗುತ್ತಿದೆ. ಭಯದಿಂದ ಸಂಚರಿಸುವುದು ತಾಲೂಕಿನಲ್ಲಿ ತಪ್ಪಬೇಕು ಎಂದು ಒತ್ತಾಯಿಸಿದರು.

ಮಾಡ್ರಹಳ್ಳಿ ನಾಗೇಂದ್ರ, ನಮೋ ಮಂಜು, ಕಾರ್ತಿಕ್, ಶಿವಕುಮಾರ್, ಬಲಚವಾಡಿ ಸುಬ್ಬು ಸೇರಿದಂತೆ ಹಲವು ಮಂದಿ ಹಾಜರಿದ್ದರು.

ಜನರ ಆಕ್ರೋಶ: ಗುಂಡ್ಲುಪೇಟೆ ತಾಲೂಕಿನಲ್ಲಿ ಎರಡು ತಿಂಗಳಿಂದ ‘ಕಿಲ್ಲರ್' ಟಿಪ್ಪರ್’ಗಳ ಅಬ್ಬರ ಮಿತಿಮೀರಿದ್ದು, ಯಮಸ್ವರೂಪಿ ಟಿಪ್ಪರ್ಗಳು ಸರಣಿ ಅಪಘಾತ ನಡೆಸುತ್ತಿವೆ. ತಾಲ್ಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-37-605035708

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.