ಗುಂಡ್ಲುಪೇಟೆ: ತಾಲ್ಲೂಕಿನ ಕಮರಹಳ್ಳಿ ಗ್ರಾಮದಲ್ಲಿ ಗಾಳಿ, ಮಳೆಗೆ ಬಾಳೆ ಫಸಲು ಮತ್ತು ತೆಂಗಿನ ಸಸಿ ನಾಶವಾಗಿದೆ.

ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ರೈತ ಮನೋಜ್ ಕುಮಾರ್ ಎಂಬವರಿಗೆ ಸೇರಿದ ಕಮರಹಳ್ಳಿ ಗ್ರಾಮದ ಎರಡು ಎಕರೆ ಪ್ರದೇಶದಲ್ಲಿ ಬೆಳೆದಿದ್ದ 2 ಸಾವಿರಕ್ಕೂ ಅಧಿಕ ಬಾಳೆ ಗಿಡ ಮತ್ತು 25ಕ್ಕೂ ಅಧಿಕ ತೆಂಗಿನ ಸಸಿ ಶುಕ್ರವಾರ ತಡರಾತ್ರಿ ಬೀಸಿದ ಗಾಳಿಗೆ ನೆಲಕಚ್ಚಿದೆ. ಇದರಿಂದ ಅವರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ದೂರಿದ್ದಾರೆ.

ಅಧಿಕಾರಿಗಳ ಭೇಟಿ: ಹಾನಿಗೊಳಗಾದ ಜಮೀನಿಗೆ ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ರಮೇಶ್ ಮತ್ತು ಗ್ರಾಮ ಆಡಳಿತ ಅಧಿಕಾರಿ ರಂಜನಾ ಭೇಟಿ ನೀಡಿ, ಮಹಜರು ನಡೆಸಿ, ಪರಹಾರದ ಭರವಸೆ ನೀಡಿದರು.

ಪರಿಹಾರಕ್ಕೆ ಒತ್ತಾಯ: ಗೊನೆ ಬಿಡುವ ಹಂತಕ್ಕೆ ಬಂದಿದ್ದ ಬಾಳೆ ನೆಲಕಚ್ಚಿರುವುದರಿಂದ ಲಕ್ಷಾಂತರ ಮೊತ್ತದ ನಷ್ಟ ಉಂಟಾಗಿದೆ. ಕೃಷಿಕರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಇಲಾಖೆಯವರು ಶೀಘ್ರ ಸೂಕ್ತ ಪರಿಹಾರ ನೀಡಬೇಕು ಎಂದು ಮಾಲೀಕ ಮನೋಜ್ ಕುಮಾರ್ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-37-2016045013

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.