ಗುಂಡ್ಲುಪೇಟೆ: ‘ಸಿಡಿಪಿಒ ಹೇಮಾವತಿ ವಿರುದ್ಧ ಭ್ರಷ್ಟಾಚಾರ ಆರೋಪ ಹೆಚ್ಚಿನ ಪ್ರಮಾಣದಲ್ಲಿ ಕೇಳಿ ಬರುತ್ತಿದ್ದರೂ, ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸದೆ ಬೆಂಬಲಕ್ಕೆ ನಿಂತಿರುವುದು ಬೇಸರದ ಸಂಗತಿ’ ಎಂದು ಜಾರಕಿಹೊಳಿ ಬ್ರಿಗೇಡ್ ಸಂಸ್ಥಾಪಕ ಗೋವಿಂದನಾಯಕ ಹೇಳಿದರು.

ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ವಲಯ ಮತ್ತು ನಿವೃತ್ತ ಅಂಗನವಾಡಿ ಶಿಕ್ಷಕಿಯರ ಮಾಹಿತಿ ಆಧರಿಸಿ ಸಿಡಿಪಿಒ ಹೇಮಾವತಿ ಹಣ ವಸೂಲಿಗೆ ದಂಧೆಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬ್ರಿಗೇಡ್ ವತಿಯಿಂದ ಡಿಸಿಗೆ 15 ದಿನಗಳ ಹಿಂದೆ ದೂರು ನೀಡಲಾಗಿತ್ತು. ಆದರೆ ಇಲ್ಲಿಯ ತನಕ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಭಾಗ್ಯಲಕ್ಷ್ಮಿ ಬಾಂಡ್ ಹಣ, ಸ್ತ್ರೀ ಶಕ್ತಿ ಮಳಿಗೆ, ಅಂಗನವಾಡಿ ಮೇಲ್ದರ್ಜೆರಿಸುವುದು, ಖಾಲಿಯಾದ ಅಂಗನವಾಡಿ ಶಿಕ್ಷಕರು ಮತ್ತು ಸಹಾಯಕಿಯರ ಹುದ್ದೆ ಭರ್ತಿ ಮಾಡಲು ಸಿಡಿಪಿಒ ಹಣಕ್ಕೆ ಬೇಡಿಯಿಟ್ಟರುವ ಆರೋಪದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಜಿಲ್ಲಾಧಿಕಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ಕೆಲ ಅಂಗನವಾಡಿ ಕಾರ್ಯಕರ್ತೆಯರು ಸಹಾಯ ಮಾಡುತ್ತಿದ್ದಾರೆ. ಗುರುಮಲ್ಲಮ್ಮ ಮತ್ತು ತಂಡದವರು ಜಾರಕಿ ಹೊಳಿ ಬ್ರಿಗೆಡ್ ವಿರುದ್ಧ ಪತ್ರಿಕಾಗೋಷ್ಠಿ ಮಾಡಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಬೇಕು. ಇದಕ್ಕಾಗಿ ಸಾಕ್ಷ್ಯಾಧಾರ ನೀಡುತ್ತೇವೆ’ ಎಂದು ತಿಳಿಸಿದರು.

ಸಮಯ ನಿಗದಿ ಪಡಿಸುವೆ: ‘ಸಿಡಿಪಿಒ ಮತ್ತು ಕೆಲ ಅಂಗನವಾಡಿಯವರು ಹಣ ಪಡೆದ ಮತ್ತು ಭ್ರಷ್ಟಾಚಾರ ಸಂಬಂಧ ನನ್ನ ಬಳಿ ಇರುವ ದಾಖಲೆಗಳನ್ನು ಜಾರಕಿಹೊಳಿ ಅವರಿಗೆ ಸಲ್ಲಿಸುತ್ತೇನೆ. ಅವರಿಂದ ನಾನೇ ಸಮಯ ನಿಗಧಿ ಮಾಡಿಸುವೇ. ಗುರುಮಲ್ಲಮ್ಮ ಮತ್ತು ತಂಡವರು ಕೂಡ ಮಾಹಿತಿ ನೀಡಲಿ. ಇದಕ್ಕೆ ಸಿದ್ದರಾಗಿ’ ಎಂದು ಸವಾಲು ಹಾಕಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ದಿಲೀಪ್ ಮಾತನಾಡಿ, ‘ತಾಲೂಕಿನ ವಿವಿಧ ಇಲಾಖೆಗಳಲ್ಲಿ ವ್ಯಾಪಾಕವಾಗಿ ಭ್ರಷ್ಟಾಚಾರ ನಡೆಯುತ್ತಿರುವ ಸಂಬಂಧ ಸಂಘಟನೆಯವರು ಸಾಕ್ಷಿ ಮಾಹಿತಿ ನೀಡಿದ್ದರೂ ಕೂಡ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ತನಿಖೆ ನಡೆಸಿ ಕ್ರಮವಹಿಸಿಲ್ಲ. ಅನೆಕ ವರ್ಷದಿಂದ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನೂ ಕೂಡಲೇ ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ವಕೀಲ ಸಿದ್ದೇಶ್ ಮಾತನಾಡಿದರು. ರೈತ ಸಂಘದ ಶಿವಮಲ್ಲು, ಸಿಐಟಿಯು ಸಂಚಾಲಕ ವೆಂಕಟರಾಜು, ಜಾರಕಿಹೊಳಿ ಬ್ರಿಗೇಡ್ ರಮೇಶ್, ರವಿ ಡಿ, ಗಿರೀಶ್, ಮಂಜುನಾಥ್, ವೇಣು ಸಲಗಾರ್, ಮನು ಪಿ.ನಾಯಕ್, ಸುಕೃತ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-37-2114751454

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.