ಗುಂಡ್ಲುಪೇಟೆ: ಏ.21ರಂದು ಗುಂಡ್ಲುಪೇಟೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶನ ಮಾಡುವುದಾಗಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಡಾ.ಗುರುಪ್ರಸಾದ್ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳ ಹಿಂದೆಯೇ ಜಿಲ್ಲೆಯಲ್ಲಿ ನಡೆಯುವ ಹಲವು ಅಕ್ರಮಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿ ಕ್ರಮಕ್ಕೆ ಆಗ್ರಹಿಸಲಾಗಿತ್ತು. ಆದರೆ ಆ ಪತ್ರವನ್ನು ಕಸದ ಬುಟ್ಟಿಗೆ ಎಸೆದು ಹೋಗಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪ್ರತಿಭಟನೆ ನಡೆಸಿದ ವೇಳೆ ಕ್ರಮ ಕೈಗೊಳ್ಳವ ಭರವಸೆ ನೀಡಿದ್ದರು. ಆದರೆ ಇದುವರೆಗೆ ಸಚಿವರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ನವರ ಭೇಟಿಗೆ ಅವಕಾಶವಿದ್ದರೂ ಯಾವುದೇ ಮನವಿ ನೀಡುವುದಿಲ್ಲ. ರೈತ ಸಂಘದ ಚಳವಳಿಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಮುಂದಾದರೆ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಿಎಂ ರೈತ ವಿರೋಧಿ ಹಾಗೂ ದುರಂಹಕಾರದ ನಡವಳಿಕೆ ಬಿಡಬೇಕು. ತಾಲ್ಲೂಕಿನಲ್ಲಿ ಕೇರಳ ರಾಜ್ಯದವರು ಸಾವಿರಾರು ಎಕರೆ ಜಮೀನು ಖರೀದಿಸುತಿದ್ದಾರೆ. ಸಮರ್ಪಕ ದಾಖಲೆಗಳು ಇಲ್ಲದಿದ್ದರೂ ಎರಡೇ ದಿನಕ್ಕೆ ಜಮೀನುಗಳು ರಿಜಿಸ್ಟರ್ ಆಗುತ್ತಿವೆ. ಅಧಿಕಾರಿಗಳು ಕೇರಳಿಗರು ನೀಡುವ ಲಂಚದ ಹಣಕ್ಕೆ ಕೈ ಒಡ್ಡುತಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕನ್ನು ಮಾರಾಟ ಮಾಡಿದರೂ ಆಶ್ಚರ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಬಂಡೀಪುರದ ಅರಣ್ಯದಿಂದ ಸುರಂಗ ಮಾರ್ಗ ನಿರ್ಮಾಣ ಮಾಡಬೇಕು ಎನ್ನುವ ರಾಜಕಾರಣಿಗಳು ಗುಂಡ್ಲುಪೇಟೆಗೆ ಮೂಲೆಹೊಳೆ ಮೂಲಕ ಕುಡಿಯುವ ನೀರಿನ ಯೋಜನೆ ಜಾರಿಗೆ ಆಸಕ್ತಿ ವಹಿಸುತ್ತಿಲ್ಲ. ತಾಲ್ಲೂಕಿನ ಖನಿಜ ಸಂಪತ್ತು ಪರ ರಾಜ್ಯಗಳ ದಂಧೆಕೋರರಿಂದ ಲೂಟಿಯಾಗುತ್ತಿದ್ದರು ಅಧಿಕಾರಿಗಳು ಮೌನವಾಗಿದ್ದಾರೆ. ಕೊಳ್ಳೇಗಾಲದ ಉಪ ವಿಭಾಗಾಧಿಕಾರಿ ರೈತರ ಜೊತೆ ಸೌಜನ್ಯದಿಂದ ವರ್ತಿಸುವುದಿಲ್ಲ. ಕನ್ನಡ ಬಾರದೆ ಕಡತಗಳನ್ನು ಪರಿಶೀಲಿಸಲು ಎಐ ತಂತ್ರಜ್ಞಾನವನ್ನು ಬಳಸಿ ರೈತರ ಹಲವು ಅರ್ಜಿಗಳನ್ನು ಪೂರ್ಣಗೊಳಿಸದೆ ಕಾಲಾಹರಣ ಮಾಡುತ್ತಿದ್ದಾರೆ. ಜನರ ಸಮಸ್ಯೆ ಆಲಿಸಿದ ನಾಲಾಯಕ್ ಅಧಿಕಾರಿಯನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.

ಬಂಡೀಪುರಕ್ಕೆ ವರ್ಷಕ್ಕೆ ₹30 ಕೋಟಿ ಅನುದಾನ ಬರುತ್ತಿದೆ. ಆದರೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಹಣ ಯಾರ ಪಾಲಾಗುತ್ತಿದೆ? ಲಂಟಾನಾ ಕಳೆ ನಿಯಂತ್ರಣಕ್ಕೆ ಒಂದು ಕೋಟಿ ಹಣ ಪಡೆದು ಒಂದೆರಡು ಲಕ್ಷ ತೋರಿಸಿ ನುಂಗಿ ಹಾಕಿದ್ದಾರೆ. ಕಚೇರಿ ನವೀಕರಣದ ಹೆಸರಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಇದು ಸಂಪೂರ್ಣವಾಗಿ ತನಿಖೆಯಾಗಲಿ ಎಂದು ಆಗ್ರಹಿಸಿದರು. ಜಿಲ್ಲಾಡಳಿತದ ಗಮನಕ್ಕೆ ತಂದರೂ ಡಿಸಿ ಸಭೆಗೆ ಸಿಎಫ್ ಹಾಜರಾಗುವುದಿಲ್ಲ. ಸರ್ಕಾರ ಮುಂಬಡ್ತಿ ನೀಡಿ ವರ್ಗಾವಣೆ ಮಾಡಿದ್ದರೂ ಸಹ ನ್ಯಾಯಲಯದಿಂದ ಆದೇಶ ಪಡೆದು ವಾಪಾಸ್ ಬಂಡೀಪುರಕ್ಕೆ ಬರಲು ಕಾರಣವೇನು ಎಂದು ಪ್ರಶ್ನಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂದಕೆರೆ ಸಂಪತ್ತು ಮಾತನಾಡಿ, ಗಣಿಗಾರಿಕೆ ಉದ್ಯಮಿಯಾಗಿರುವ ಶಾಸಕ ಗಣೇಶಪ್ರಸಾದ್ ಅಕ್ರಮಕ್ಕೆ ಬೆಂಬಲವಾಗಿದ್ದಾರೆ. ಕ್ಷೇತ್ರದಲ್ಲಾಗುವ ಅಧ್ವಾನದ ಕುರಿತು ಕಾಳಜಿ ಇಲ್ಲ. ನಿರಂತರ ಅಪಘಾತ ಸಾವು ನೋವುಗಳಿಗೆ ಶಾಸಕರು ಸ್ಪಂದಿಸುತ್ತಿಲ್ಲ. ₹600 ಕೋಟಿ ಅನುದಾನದ ಮಾಹಿತಿಯನ್ನ ರೈತರಿಗೆ ನೀಡಿಲ್ಲ. ರೈತರ ಬಗ್ಗೆ ಕಾಳಜಿಯಿಲ್ಲದ ಶಾಸಕರಿಂದ ಉಡಾಫೆ ಉತ್ತರ ಬರುತ್ತಿದೆ. ಡಿಸೆಂಬರ್ನಲ್ಲಿ ಕೆರೆಗೆ ನೀರು ಬಿಡಿಸುತ್ತೇವೆ ಎಂದವರು ಏಪ್ರಿಲ್ ಆದರೂ ನೀರು ಹರಿಸಿಲ್ಲ. 110 ಕೆರೆ ಯೋಜನೆ ಹಣ ಮಾಡುವ ಷಡ್ಯಂತ್ರ ಹೊರತು ಬೇರೆನು ಇಲ್ಲ ಆರೋಪಿಸಿದರು.

ಪುಟ್ಟರಂಗಶೆಟ್ಟಿ ಜವಾಬ್ದಾರಿ ಅರಿತು ಚಾಮರಾಜನಗರ ಭಾಗದ ಕೆರೆಗಳಿಗೆ ಎರಡೆರಡು ಬಾರಿ ನೀರು ತುಂಬಿಸಿ ಜೀವಕಳೆ ತಂದಿದ್ದಾರೆ. ಆದರೆ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕ ಗಣೇಶಪ್ರಸಾದ್ ಅವರಿಂದ ಕೆಲಸವಾಗಿಲ್ಲ. ಅಧಿಕಾರಿಗಳನ್ನು ಹದ್ದು ಬಸ್ತಿನಲ್ಲಿಡಲಾಗದ ಇವರಿಂದ ತಾಲ್ಲೂಕಿನಲ್ಲಿ ಅಭಿವೃದ್ಧಿ, ರೈತ ಪರ ಕೆಲಸ ನಿರೀಕ್ಷೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಮಾಡ್ರಳ್ಳಿ ಮಹದೇವಪ್ಪ, ಜಿಲ್ಲಾ ಸಂಚಾಲಕ ಲೋಕೇಶ್, ತಾಲ್ಲೂಕು ಅಧ್ಯಕ್ಷ ಕೆ.ಎಸ್. ಮಹೇಶ್, ಹಿರಿಕಾಟಿ ಚಿಕ್ಕಣ್ಣ, ಬೆಟ್ಟಹಳ್ಳಿ ಗುರು, ಶಂಭುಲಿಂಗಪ್ಪ, ಮಣಿಕಂಠ, ನಂದೀಶ, ಮಹೇಶ, ದೊರೆಸ್ವಾಮಿ, ಕೋಡಹಳ್ಳಿ ರಘು, ಮಹೇಶ, ಸುರೇಶ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-37-1513619648

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.