ಗುಂಡ್ಲುಪೇಟೆ: ತಾಲ್ಲೂಕಿನ ಕನ್ನೇಗಾಲ ಆಸುಪಾಸಿನಲ್ಲಿ ಮಂಗಳವಾರ ವಿವಿಧ ಹೋಟೆಲ್ಗಳಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗೃಹ ಬಳಕೆಯ 3 ಸಿಲಿಂಡರ್ಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ.

ಸುಲ್ತಾನ್ ಬತ್ತೇರಿ ರಸ್ತೆಯ ಕನ್ನೇಗಾಲ ಬಳಿಯ ಸವಿ ಕೆಫಿನ್ ಮತ್ತು ಡೇಟ್ಸ್ ನಲ್ಲಿ 2 ಗೃಹಬಳಕೆ ಸಿಲಿಂಡರ್, ಪಟ್ಟಣದ ಕರ್ನಾಟಕ ಬೇಕ್ಸ್ನಲ್ಲಿ 1 ಗೃಹ ಬಳಕೆಯ ಸಿಲಿಂಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಎಲ್ಪಿಜಿ ಗ್ಯಾಸ್ ಸಿಲಿಂಡರ್ ವ್ಯತ್ಯಯ ಕಾರಣದಿಂದ ಗುಂಡ್ಲುಪೇಟೆ ತಾಲ್ಲೂಕು ಆಹಾರ ನಿರೀಕ್ಷಕಿ ಪೂರ್ಣಿಮಾ ನೇತೃತ್ವದಲ್ಲಿ ಆಹಾರ ಶಿರಸ್ತೇದಾರ್ ಅರವಿಂದ್ ಮತ್ತು ಸಿಬ್ಬಂದಿ ಮೂಲೆಹೊಳೆ ಚೆಕ್ಪೋಸ್ಟ್ ನಿಂದ ಪಟ್ಟಣ ವ್ಯಾಪ್ತಿಯ 13 ಹೋಟೆಲ್, ರೆಸ್ಟೋರೆಂಟ್ಗಳ ಮೇಲೆ ದಾಳಿ ನಡೆಸಿ ಗೃಹ ಬಳಕೆಯ ಸಿಲಿಂಡರ್ ಬಳಸುತ್ತಿರುವ ಬಗ್ಗೆ ಪರಿಶೋಧಿಸಿದ ವೇಳೆ 2 ಹೋಟೆಲ್ ಗಳಲ್ಲಿ ಗೃಹ ಬಳಕೆ ಸಿಲಿಂಡರ್ ಬಳಸುತ್ತಿರುವುದು ಪತ್ತೆಯಾಗಿದೆ. ಸವಿ ಕೆಫಿನ್ ಮತ್ತು ಡೇಟ್ಸ್ ನ ಮಾಲೀಕ ಮಹಾದೇವ ಸ್ವಾಮಿ ಮತ್ತು ಕರ್ನಾಟಕ ಬೇಕ್ಸ್ ನ ಮಾಲೀಕ ಆಶ್ರಫ್ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಮೂರು ಸಿಲಿಂಡರ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-37-6115819

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.