ಗುಂಡ್ಲುಪೇಟೆ: ತಾಲ್ಲೂಕು ವ್ಯಾಪ್ತಿಯಲ್ಲಿ ಸೋಮವಾರ ಜೋರು ಮಳೆಯಾಗಿದ್ದು, ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಕಾಡಂಚಿನ ಗ್ರಾಮಗಳಲ್ಲಿರುವ ಕೆಲವು ಕಾಲುವೆ, ತೊರೆ, ಹಳ್ಳಗಳಲ್ಲಿ ನೀರು ಹರಿಯುವ ಜೊತೆಗೆ ಜಮೀನುಗಳಿಗೂ ನುಗ್ಗಿದೆ.

ಹಿಮವದ್ ಗೋಪಾಲಸ್ವಾಮಿ ಬೆಟ್ಟ ತಪ್ಪಲು, ಬಂಡೀಪುರ ಕಾಡಂಚಿನ ಹೊನ್ನೇಗೌಡನಹಳ್ಳಿ, ಗೋಪಾಲಪುರ, ದೇವರಹಳ್ಳಿ, ಹೊಂಗಹಳ್ಳಿ, ಬರಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಒಂದು ಗಂಟೆಗೂ ಅಧಿಕ ಕಾಲ ಜೋರು ಮಳೆಯಾಗಿದೆ.

ಹೊನ್ನೇಗೌಡನಹಳ್ಳಿ ಗ್ರಾಮದಲ್ಲಿ ಮಳೆಯಿಂದ ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಬೀನ್ಸ್, ಸೂರ್ಯಕಾಂತಿ, ಹಲಸಂದೆ ಸೇರಿದಂತೆ ವಿವಿಧ ಫಸಲುಗಳಿದ್ದ ಜಮೀನಿಗೆ ನೀರು ನುಗ್ಗಿದ್ದು, ಬೆಳೆಗಳು ಕೊಚ್ಚಿ ಹೋಗಿದೆ.

ಭೀಮನಬೀಡು ಗ್ರಾಮದಲ್ಲಿ ಇದೀಗ ತಾನೇ ನಾಟಿ ಮಾಡಿದ್ದ ಮಹದೇವ್ ಎಂಬುವವರ ಒಂದೂವರೆ ಎಕರೆ ಬೆಳ್ಳುಳ್ಳಿ, ಈರುಳ್ಳಿ, ಅರಿಸಿನ ಮಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಇದರಿಂದ ರೈತ ಮಹಿಳೆ ಕಣ್ಣೀರು ಹಾಕಿದ್ದಾರೆ. ಜೋರು ಮಳೆಯಿಂದ ರೈತರಿಗೆ ಲಕ್ಷಾಂತರ ಹಣ ನಷ್ಟವಾಗಿದೆ.

ಬಂಡೀಪುರ ಕಾಡಂಚಿನ ಬೇರಂಬಾಡಿಯ ಕೆಂಪು ಸಾಗರ ಕೆರೆ, ಹಂಗಳ ಹಿರಿಕೆರೆ, ಬರಗಿ ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಹಲವು ಕೆರೆಗಳು ತುಂಬಿದೆ.

ಮಳೆ ಸುರಿದಿರುವುದರಿಂದ ಬಿಸಿಲಿನಿಂದ ತತ್ತರಿಸಿದ್ದ ಜನರ ಮೊಗದಲ್ಲಿ ಮಂದಹಾಸವು ಸಹ ಮೂಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-37-605374619

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.