ಗುಂಡ್ಲುಪೇಟೆ: ಕುಂದಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಮಣ್ಣಿನ ಮಡಿಕೆ ಕಟ್ಟಿ ಹಾಗೂ ಸಣ್ಣ ದೋಣಿ ಗಳನ್ನು ಇರಿಸಿ, ಪಕ್ಷಿ ಸಂಕುಲಕ್ಕೆ ನೀರು, ಕಾಳು ಹಾಕುವ ಮೂಲಕ ವಿಶ್ವ ಭೂಮಿ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮುಖ್ಯ ಶಿಕ್ಷಕ ಮಹದೇಶ್ವರಸ್ವಾಮಿ ಮಾತನಾಡಿ, ದಿನದಿಂದ ದಿನಕ್ಕೆ ಬೇಸಿಗೆ ಬಿರುಬಿಸಿಲು ಊಹೆಗೂ ನಿಲುಕದಷ್ಟು ಜಾಸ್ತಿಯಾಗುತ್ತಿದೆ. ಜೀವಸಂಕುಲ ತತ್ತರಿಸಿ ಹೋಗುತ್ತಿವೆ. ಮರಗಿಡಗಳನ್ನು ಬೆಳೆಸದೆ ಇರುವುದು, ಬೆಳಸಿದ ಮರಗಿಡಗಳನ್ನು ಉಳಿಸದೆ ಇರುವುದು, ಪ್ಲಾಸ್ಟಿಕ್ ಬಳಕೆ, ನೀರು ಪೋಲು ಮಾಡುವುದು. ಗಾಳಿಯನ್ನು ಅಶುದ್ಧ ಗೊಳಿಸುವುದು ಇದಕ್ಕೆಲ್ಲ ಕಾರಣ. ಭೂಮಿ ಬರಡಾಗಿ ನಲುಗಿ ಹೋಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮರಗಿಡಗಳನ್ನು ನೆಟ್ಟು ಬೆಳೆಸಿ ಉಳಿಸುವ ಭೂಮಿ ತಾಯಿಯನ್ನು ಸಂರಕ್ಷಣೆ ಮಾಡೋಣ. ಶುದ್ಧ ಗಾಳಿ, ನೀರು, ಆಹಾರ ಗಳನ್ನು ಭೂಮಿತಾಯಿಯೇ ಕೊಡಬೇಕು. ಈ ವಾಸ್ತವವನ್ನು ಅರಿತು ಮನೆ, ಶಾಲೆ, ಕಾಲೇಜು, ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ, ಪಕ್ಷಿ ಸಂಕುಲಕ್ಕೆ ನೀರು ಆಹಾರ ಒದಗಿಸೋಣ ಎಂದರು. ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-37-575753496

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.