ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲ್ಲೂಕಿನಿಂದ ಕೇರಳ ರಾಜ್ಯಕ್ಕೆಬಿಳಿಕಲ್ಲು, ಕರಿಕಲ್ಲು, ಎಂ ಸ್ಯಾಂಡ್, ಜೆಲ್ಲಿಯನ್ನು ಎಗ್ಗಿಲ್ಲದೆ ಸಾಗಿಸಲಾಗು ತ್ತಿದ್ದು, ಈಗ ಆ ಸಾಲಿಗೆ ಕೆರೆಗಳ ಮಣ್ಣೂ ಸೇರಿಕೊಂಡಿದೆ.

ತಾಲ್ಲೂಕಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಭಾನುವಾರ ಬೆಳಿಗ್ಗೆ ಲಾರಿ– ಕಾರು ನಡುವೆ ನಡೆದ ಅಪಘಾತವು ಇದಕ್ಕೆ ಪುಷ್ಟಿ ನೀಡಿದೆ.

ಮಣ್ಣು ಸಾಗಣೆ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕೇರಳದ ಕಣ್ಣೂರಿನ ಮೂವರು ಮೃತಪಟ್ಟಿದ್ದರು. ಅನುಮತಿ ಇಲ್ಲದಿದ್ದರೂ ಲಾರಿಯಲ್ಲಿ ಕೆರೆ ಮಣ್ಣು ಸಾಗಿಸಲಾಗುತ್ತಿತ್ತು ಎಂಬ ಸಂಗತಿಯು ಅನುಮಾನಗಳಿಗೆ ದಾರಿ ಮಾಡಿದೆ.

‘ಜಿಲ್ಲೆಯ ಖನಿಜ ಹಾಗೂ ನೈಸರ್ಗಿಕ ಸಂಪತ್ತು ನಿಯಮ ಬಾಹಿರವಾಗಿ ನೆರೆ ರಾಜ್ಯಗಳ ಪಾಲಾಗುತ್ತಿದ್ದರೂ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸುಮ್ಮನಿದ್ದಾರೆ’ ಎಂಬ ಆರೋಪವೂ ಇದೇ ವೇಳೆ ಮೂಡಿದೆ.

ಬೇಡಿಕೆ ಹೆಚ್ಚು: ಕಡಿಮೆ ದರ ಹಾಗೂ ಗುಣಮಟ್ಟದ ಕಾರಣಕ್ಕೆ ಕೇರಳದ ವ್ಯಾಪಾರಿಗಳು ಗುಂಡ್ಲುಪೇಟೆ, ಚಾಮರಾಜನಗರ ತಾಲ್ಲೂಕಿನ ಕಲ್ಲುಕ್ವಾರಿಗಳಿಂದ ಹೆಚ್ಚಿನ ಪ್ರಮಾಣದ ಕರಿಕಲ್ಲು, ಬಿಳಿಕಲ್ಲು ತ್ಯಾಜ್ಯ ಹಾಗೂ ಎಂ ಸ್ಯಾಂಡ್, ಜೆಲ್ಲಿಯನ್ನು ಖರೀದಿಸಿ ಕೊಂಡೊಯ್ಯುತ್ತಾರೆ.

‘ಲಾಭದಾಸೆಗೆ ದೈತ್ಯ ಟ್ರಕ್ಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾವಸ್ತು ಸಾಗಿಸಲಾಗುತ್ತಿದೆ. ಪೊಲೀಸರಾಗಲಿ, ಚೆಕ್ಪೋಸ್ಟ್ನಲ್ಲಿ ಕಾರ್ಯ ನಿರ್ವಹಿಸುವ ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಾಗಲಿ ಸಮರ್ಪಕವಾಗಿ ತಪಾಸಣೆಗೆ ಒಳಪಡಿಸುತ್ತಿಲ್ಲ’ ಎಂಬುದು ಸದ್ಯದ ಆರೋಪ.

‘ಗುಂಡ್ಲುಪೇಟೆ-ಕೇರಳ ರಾಷ್ಟ್ರೀಯ ಹೆದ್ದಾರಿ-766ರಲ್ಲಿ ಮಣ್ಣು ಮತ್ತು ಖನಿಜ ಸಾಗಿಸುವ ಲಾರಿಗಳ ಆರ್ಭಟ ಹೆಚ್ಚಾಗಿದೆ. ಅತಿಯಾದ ವೇಗ, ಮಿತಿಗಿಂತ ಹೆಚ್ಚು ಭಾರ ಹೊತ್ತು ಸಾಗುವ ಟ್ರಕ್ಗಳು ಅಪಘಾತಕ್ಕೆ ಕಾರಣವಾಗುತ್ತಿದ್ದು ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ನಿಯಮ ಮೀರುವ ವಾಹನಗಳ ಚಾಲಕರ ವಿರುದ್ಧ ಕ್ರಮ ಜರುಗಿಸುತ್ತಿಲ್ಲ. ಮದ್ದೂರು ಮತ್ತು ಮೂಲೆಹೊಳೆ ಚೆಕ್ ಪೋಸ್ಟ್ನಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿ ಸಮರ್ಪಕವಾಗಿ ತಪಾಸಣೆ ನಡೆಸುತ್ತಿಲ್ಲ’ ಎಂದು ರೈತ ಮುಖಂಡ ಭೀಮನಬೀಡು ರಾಜು ದೂರಿದ್ದಾರೆ.

‘ಮೂಲೆಹೊಳೆ ಚೆಕ್ಪೋಸ್ಟ್ಗೆ ವರ್ಷದಿಂದ ಡಿಆರ್ಎಫ್ಒ ನಿಯೋಜಿಸಲಾಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಲಾಗುತ್ತಿದೆ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್ ದೂರಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-51-1281982947

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.