ಗುಂಡ್ಲುಪೇಟೆ: ಮಡಹಳ್ಳಿ ಗುಮ್ಮಕಲ್ಲು ಗುಡ್ಡ ಕುಸಿತವಾಗಿ ಸ್ಥಗಿತವಾಗಿದ್ದ ಕ್ವಾರಿಯಲ್ಲಿ ಈಜಲು ಹೋಗಿದ್ದ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ನಿಶಾಂತ್ (17) ಎಂಬಾತ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ನಿಶಾಂತ್ ಗುಂಡ್ಲುಪೇಟೆ ಪಟ್ಟಣದ ಮೆಡಿಕಲ್ ಶಾಪ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಸ್ನೇಹಿತರೊಂದಿಗೆ ಈಜಲು ಕ್ವಾರಿಗೆ ಹೋಗಿದ್ದ ಎನ್ನಲಾಗಿದೆ.

ಮಡಹಳ್ಳಿ ಗುಮ್ಮಕಲ್ಲು ಗುಡ್ಡ ಕುಸಿದು ಕಾರ್ಮಿಕರು ಸಾವನ್ನಪ್ಪಿದ್ದರು. ಈಗ ಅದೇ ಗುಡ್ಡದ ಕ್ವಾರಿಯಲ್ಲಿ ಯುವಕ ಈಜಲು ಹೋಗಿ ಸಾವನ್ನಪ್ಪಿದ್ದಾನೆ. ಖನಿಜ ಸಂಪತ್ತನ್ನು ಹೊರತೆಗೆಯಲು ನೂರಾರು ಅಡಿ ಆಳ ಕೊರೆಯುತ್ತಾರೆ. ಆದರೆ ಇದಕ್ಕೆ ತಾಲ್ಲೂಕು ಆಡಳಿತ ಯಾವುದೇ ಮುಂಜಾಗ್ರತಾ ಕ್ರಮವಹಿಸುವುದಿಲ್ಲ. ಇನ್ನಾದರೂ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಇಂತಹ ಸ್ಥಳಗಳಿಗೆ ಬೇಲಿ ಹಾಕಿ ನಿರ್ಬಂಧ ವಿಧಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸಮಾಜ ಸೇವಕ ಎಚ್.ಎಂ. ನಂದೀಶ್ ಮಾತನಾಡಿ, ಸ್ಥಗಿತವಾದ ಕ್ವಾರಿಯಲ್ಲಿ ನೀರು ಸಂಗ್ರಹವಾಗಿದ್ದು, ಅಲ್ಲಿ ಈಜಲು ಹೋಗುವ ಯುವಕರು– ಬಾಲಕರು ಮುಳುಗಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಆಡಳಿತದ ವೈಫಲ್ಯ ಎದ್ದುಕಾಣುತ್ತಿದೆ. ಹಾಗಾಗಿ ಇಂತಹ ನಿರ್ಬಂಧಿತ ಪ್ರದೇಶದಲ್ಲಿ ಯಾರೂ ಹೋಗದ ಹಾಗೆ ತಾಲ್ಲೂಕು ಆಡಳಿತ ಸುತ್ತು ಬೇಲಿ ಹಾಕಬೇಕು. ಇಂತಹ ಘಟನೆಗಳು ಮರುಕಳುಹಿಸಿದರೇ ತಾಲ್ಲೂಕು ಆಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-37-925572989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.