ಗುಂಡ್ಲುಪೇಟೆ: ‘ಪರ್ಮಿಟ್ ಇಲ್ಲದೆ, ಓವರ್ ಲೋಡ್ ಹಾಕಿಕೊಂಡು ತೆರಳುವ ಟಿಪ್ಪರ್ ಲಾರಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಂತೆ ಪೊಲೀಸರು, ಆರ್ಟಿಓ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ’ ಎಂದು ಶಾಸಕ ಎಚ್.ಎಂ.ಗಣೇಶಪ್ರಸಾದ್ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗಣಿಗಾರಿಕೆ ಅಥವಾ ಟಿಪ್ಪರ್ ಹಾವಳಿ ಹೆಚ್ಚಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ. ತಮ್ಮ ಅವಧಿಯಲ್ಲಿ ಆಗಿರುವುದನ್ನು ಬಿಜೆಪಿಯವರು ನಮ್ಮ ಮೇಲೆ ಹೇಳುತ್ತಿದ್ದಾರೆ. ಜಾಸ್ತಿ ಆಗಿದ್ದರೂ ಕಾರಣ ಏನೆಂದು ತಿಳಿದು, ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಪರೀಕ್ಷೆ ಇರುವ ಕಾರಣ 15 ದಿನಗಳವರೆಗೆ ತಾತ್ಕಾಲಿಕವಾಗಿ ಟಿಪ್ಪರ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ನಂತರ ಇದರ ಬಗ್ಗೆ ಸರ್ವೇ ಮಾಡಿ ನಿಯಮಮಾನುಸಾರ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಓವರ್ ಸ್ಪಿಡ್ ತಡೆಗೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪರ್ಮಿಟ್ ಇಲ್ಲದೇ ಕೇರಳಕ್ಕೆ ಕ್ರಷರ್ ಉತ್ಪನ್ನ ಸಾಗಿಸಲು ಅವಕಾಶವಿಲ್ಲ. ಅಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಅದನ್ನು ತಡೆಯಲು ಕ್ರಮ ವಹಿಸುತ್ತೇನೆ’ ಎಂದರು.

ಶಾಲಾ ಸಮಯದಲ್ಲಿ ಓಡಾಟ ಸ್ಥಗಿತ: ಶಾಲಾ-ಕಾಲೇಜು ಆರಂಭದ ಸಮಯ ಬೆಳಿಗ್ಗೆ 8.30ರಿಂದ 10ಗಂಟೆ ಮತ್ತು ಸಂಜೆ 3.30ರಿಂದ 5 ರವರೆಗೆ ಪಟ್ಟಣ ಮತ್ತು ತಾಲ್ಲೂಕು ವ್ಯಾಪ್ತಿಯಲ್ಲಿ ಟಿಪ್ಪರ್ ಓಡಾಟ ನಿಲ್ಲಿಸಲು ಈಗಾಗಲೇ ನಿದೇರ್ಶನ ನೀಡಲಾಗಿದೆ’ ಎಂದು ಭರವಸೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಸ್.ನಂಜುಂಡಪ್ರಸಾದ್ ಮಾತನಾಡಿ, ‘ನಮ್ಮ ಕುಟುಂಬ ಮೂಲತಃ ಕೃಷಿ ಕುಟುಂಬವಾಗಿದ್ದು, ಇದರೊಂದಿಗೆ 45 ವರ್ಷಗಳಿಂದ ಕ್ವಾರಿ ವ್ಯವಹಾರ ನಡೆಸುತ್ತಿದ್ದೇವೆ. ಆದ್ದರಿಂದ ನಮ್ಮ ವ್ಯಾಪಾರ, ವ್ಯವಹಾರಗಳ ಬಗ್ಗೆ ಮಾಜಿ ಶಾಸಕರು ಬಾಲಿಶ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.

ಗುಂಡ್ಲುಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್, ತಾಲ್ಲೂಕು ಭೂ ನ್ಯಾಯಮಂಡಳಿ ಸದಸ್ಯ ಜಿ.ಕೆ.ಲೋಕೇಶ್, ಮುಖಂಡರಾದ ಎಚ್.ಎಸ್.ನಂಜಪ್ಪ, ಕಬ್ಬಹಳ್ಳಿ ಮಹೇಶ, ಜಿ.ಎಸ್.ಮಧುಸೂಧನ್, ಶ್ರೀನಿವಾಸ್ ಕಣ್ಣಪ್ಪ, ಅಣ್ಣಯ್ಯಸ್ವಾಮಿ, ಸುರೇಶ್ ಕರ್ಗಳ್ಳಿ, ರಘು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-37-72943050

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.