ಗುಂಡ್ಲುಪೇಟೆ: ತಾಲ್ಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಶೆಡ್ ಧ್ವಂಸಗೊಳಿಸಿದ್ದು ಅದರಲ್ಲಿದ್ದ ಕ್ವಿಂಟಲ್ ಗಟ್ಟಲೇ ಟೊಮೆಟೊವನ್ನು ತಿಂದು-ತುಳಿದು ನಾಶಪಡಿಸಿವೆ.

ಗ್ರಾಮದ ಮಹದೇವಮ್ಮ ಎಂಬುವವರ ಜಮೀನಿನಲ್ಲಿ ಒಂದೂವರೆ ಎಕರೆಯಲ್ಲಿ ಬೆಳೆದು ಕೊಯ್ದು ಪೇರಿಸಿಟ್ಟಿದ್ದ 60ಕ್ಕೂ ಅಧಿಕ ಬಾಕ್ಸ್ ಟೊಮೆಟೊವನ್ನು ತಿಂದು , ತುಳಿದು ನಾಶ ಪಡಿಸಿವೆ. ಮಾಲೀಕರಿಗೆ ಲಕ್ಷಾಂತರ ರೂಪಾಯಿ ಮೊತ್ತದ ನಷ್ಟ ಉಂಟಾಗಿದೆ. ಶೆಡ್ ಧ್ವಂಸ ವಾಗಿರುವ ಜೊತೆಗೆ ಕೃಷಿ ಪರಿಕರಗಳು ಕೂಡ ಹಾನಿಯಾಗಿದೆ.

ನೂರಾರು ಕೆ.ಜಿ. ಟೊಮೆಟೊ, ಶೆಡ್, ಕೃಷಿ ಸಲಕರಣೆಗಳನ್ನು ಕಾಡಾನೆ ನಾಶ ಪಡಿಸಿರುವುದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಬಂಡೀಪುರ ಅರಣ್ಯಾಧಿಕಾರಿಗಳು ಶೀಘ್ರ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-37-1383362160

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.