ಗುಂಡ್ಲುಪೇಟೆ: ಮೈಭಾರತ್ ಕೇಂದ್ರ ಚಾಮರಾಜನಗರ, ರಂಗಸೌರಭ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬೇಗೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ವಿಶ್ವ ಬೈಸಿಕಲ್ ದಿನಾಚರಣೆ ಆಚರಿಸಲಾಯಿತು.

ಸೈಕಲ್ ಬೆಲ್ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತಿಯ ಜಿಲ್ಲಾ ತರಬೇತಿ ಜಿಲ್ಲಾ ಸಂಯೋಜಕ ಟಿ.ಜೆ.ಸುರೇಶ್, ಸೈಕಲ್ ಓಡಿಸುವುದರಿಂದ ದೇಹಕ್ಕೆ ವ್ಯಾಯಾಮಮಾಗುತ್ತದೆ. ದೇಹವನ್ನು ಸದೃಢವಾಗಿಡುವುದರ ಜೊತೆಗೆ ಹೃದಯದ ಆರೋಗ್ಯ ಕಾಪಾಡುತ್ತದೆ. ನಿಯಮಿತವಾಗಿ ಸೈಕಲ್ ಓಡಿಸುವುದರಿಂದ ಆರೋಗ್ಯಯುತವಾಗಿರಬಹುದು ಎಂದರು.

ಈಚೆಗೆ ಸೈಕಲ್ ಬದಲಾಗಿ ದ್ವಿಚಕ್ರ ವಾಹನಗಳ ಬಳಕೆ ಹೆಚ್ಚಾಗಿದ್ದು ಮಾಲಿನ್ಯವೂ ಹೆಚ್ಚುತ್ತಿದೆ. ಕಡಿಮೆ ದೂರದ ಪ್ರಯಾಣಗಳಿಗೆ ಸೈಕಲ್ ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಇಂಧನ ಉಳಿತಾಯವಾಗುವುದರ ಜೊತೆಗೆ ಆರೋಗ್ಯ ಮತ್ತು ಪರಿಸರ ಸುರಕ್ಷಿತವಾಗಿರುತ್ತದೆ ಎಂದರು.

ರಂಗಸೌರಭ ಸಂಸ್ಥೆಯ ಕಾರ್ಯದರ್ಶಿ ಗುರುರಾಜು ಎಸ್.ತಮ್ಮಡಹಳ್ಳಿ, ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಎಲ್.ಸುರೇಶ್ ಮಾತನಾಡಿದರು. ಬೇಗೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ನಿಲಯಪಾಲಕ ಮಂಜುನಾಥ್ ಹೆಚ್.ಎನ್ ಇದ್ದರು. ರಂಗಭೂಮಿ ಕಲಾವಿದೆ ಪುಷ್ಪಲತಾ ಗೀತೆಗಳನ್ನು ಹಾಡಿ ರಂಜಿಸಿದರು. ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲೆ ಲೀಲಾ ಎ.ಬಿ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬೈಸಿಕಲ್ ದಿವಸ್ ಕಾರ್ಯಕ್ರಮಕ್ಕೆ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.

ಶಾಲೆಯ ಸಿಬ್ಬಂದಿ ಹೆಚ್.ಎನ್.ಸಿದ್ದರಾಜು, ಫಾತಿಮುನೀಸಾ, ಪೂರ್ಣಚಂದ್ರ, ತೇಜಸ್ವಿನಿ, ಪುಷ್ಪಾ, ಲೋಕೇಶ್ ಡಿ.ಪಿ, ಪುಟ್ಟಪ್ಪ, ಪ್ರೇಮಾಂಜಲಿ, ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-37-119698770

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.