ಗುಂಡ್ಲುಪೇಟೆ: ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದ ಗುರುಮಲ್ಲಮ್ಮ ಕೋಂ ಸಿದ್ದಯ್ಯ ಎಂಬುವರಿಗೆ ಸೇರಿದ ಹಸು ಸಾವನ್ನಪ್ಪಿದ್ದು, ಹಾಲು ಉತ್ಪಾದಕರ ಸಂಘದ ಡೇರಿ ಕಾರ್ಯದರ್ಶಿ ನಿರ್ಲಕ್ಷ್ಯದಿಂದ ದನ ಸತ್ತಿದೆ ಎಂದು ಆರೋಪಿಸಿ ಮಾಲೀಕರು ಪರಿಹಾರಕ್ಕಾಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
‘ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪಶು ವಿಮೆ ಮಾಡಿಸಲಾಗಿದ್ದು, ಹಸು ಅನಾರೋಗ್ಯಕ್ಕೀಡಾಗಿದ್ದರೂ ಸಂಬಂಧಪಟ್ಟ ಪಶು ವೈದ್ಯರು ಸಕಾಲದಲ್ಲಿ ಬಂದು ಚಿಕಿತ್ಸೆ ನೀಡದ ಕಾರಣ ಹಸು ಸಾವನ್ನಪ್ಪಿದೆ’ ಎಂದು ಮಾಲೀಕರಾದ ಗುರುಮಲ್ಲಮ್ಮ ಅವರ ಮಗ ಯೋಗೇಶ್ ದೂರಿದ್ದಾರೆ.
‘ಹಾಲು ಉತ್ಪಾದಕರ ಸಹಕಾರ ಸಂಘದಿಂದ ಪಶು ವಿಮೆ ಮಾಡಿಸಿದ್ದರೂ, ಸಂಘದ ಕಾರ್ಯದರ್ಶಿ ಮಣಿಕಂಠ ಎಂಬುವರು ಹಸು ಅನಾರೋಗ್ಯ ಚಿಕಿತ್ಸೆ ಬಗ್ಗೆ ಪಶು ವೈದ್ಯರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ ಕಾರಣದಿಂದ ಅದು ಮೃತಪಟ್ಟಿದೆ. ಜೀವ ವಿಮೆ ನವೀಕರಣದ ವೇಳೆ ಗುರುಮಲ್ಲಮ್ಮ ಅವರ ಹೆಸರನ್ನು ಕೈಬಿಡಲಾಗಿದೆ. ಇಲಾಖೆ ಅಧಿಕಾರಿಗಳು ಕೂಡಲೇ ಪರಿಹಾರ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.