ಕೊಳ್ಳೇಗಾಲ: ನಗರದಲ್ಲಿ ಶನಿವಾರ 4ನೇ ವರ್ಷದ ಹನುಮ ಜಯಂತಿ ಉತ್ಸವವು ವಿವಿಧ ಕಲಾ ತಂಡದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ನಗರದ ಲಕ್ಷ್ಮೀನಾರಾಯಣಸ್ವಾಮಿ ದೇವಸ್ಥಾನದ ವೃತ್ತದ ಬಳಿ ಉತ್ಸವ ಮೂರ್ತಿಗೆ ಅರ್ಚಕ ಟಿ.ವಿ.ಎಸ್ ರಾಘವೇಂದ್ರ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆಯು ನಗರದ ಕಾವೇರಿ ರಸ್ತೆಯಿಂದ ಹೊರಟು ಕನ್ನಿಕಾ ಪರಮೇಶ್ವರಿ ರಸ್ತೆ, ಮಸೀದಿ ವೃತ್ತ, ಡಾ.ರಾಜ್ ಕುಮಾರ್ ರಸ್ತೆ, ಡಾ.ವಿಷ್ಣುವರ್ಧನ್ ರಸ್ತೆ, ದೇವಲ ಮಹರ್ಷಿ ವೃತ್ತ, ದೇವಾಂಗಪೇಟೆ ಮಾರ್ಗದಲ್ಲಿ ಮಂಗಳವಾದ್ಯ, ವೀರಗಾಸೆ, ಡೊಳ್ಳುಕುಣಿತ, ಮಹಿಳಾ ವೀರಗಾಸೆ ಸೇರಿದಂತೆ ಇತರೆ ಕಲಾ ತಂಡಗಳದೊಂದಿಗೆ ನಡೆಯಿತು. ಯುವಕರು ಹನುಮ ಬಾವುಟ ರಭಸವಾಗಿ ತಿರುಗಿಸುವ ಮೂಲಕ ಸಂಭ್ರಮಿಸಿದರು.

ಡಾ.ವಿಷ್ಣುವರ್ಧನ್ ರಸ್ತೆಯಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹಾಗೂ ನಗರಸಭೆ ಅಧ್ಯಕ್ಷ ರೇಖಾ, ಸದಸ್ಯರು ಹಾಗೂ ಮುಖಂಡರು ಆಗಮಿಸಿ ಉತ್ಸವಮೂರ್ತಿಗೆ ಪುಷ್ಪನಮನ ಅರ್ಪಿಸಿದರು.

ಉತ್ಸವದಲ್ಲಿ ಹನುಮ ಜಯಂತಿ ಸೇವಾ ಸಮಿತಿ ಸಂಚಾಲಕ ನವೀನ್ ಕುಮಾರ್, ರವಿಕುಮಾರ್, ಕಿಟ್ಟಿ, ನಿರಂಜನ್ ರವೀಂದ್ರ, ಉತ್ತಮ್, ಅಜಯ್, ಕಾರ್ತಿಕ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.