ಹನೂರು: ಮೂರು ದಿನಗಳ ಕಾಲ ನಡೆದ ಹನೂರು ಅಂಬೇಡ್ಕರ್ ಹಬ್ಬಕ್ಕೆ ಸಂಭ್ರಮದ ತೆರೆಬಿತ್ತು. ಕೊನೆಯ ದಿನ ಸಂಜೆ 4ರ ವೇಳೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ಪಟ್ಟಣದ ಡಾ.ಬಿ. ಆರ್. ಅಂಬೇಡ್ಕರ್ ಯುವಕರ ಸಂಘ ಹಾಗೂ ಹನೂರು ಪಟ್ಟಣದ ಸಮುದಾಯದ ಮುಖಂಡರು ಯಜಮಾನರು ಮಹಿಳೆಯರು ಎಲ್ಲರು ಒಟ್ಟಾಗಿ ಸೇರಿ ಹನೂರು ಹಬ್ಬದಲ್ಲಿ ಭಾಗವಹಿಸಿದ್ದರು.

ಭಾವಚಿತ್ರ ಮೆರವಣಿಗೆ ವೇಳೆಯಲ್ಲಿ ಹನೂರು ಪಟ್ಟಣದಾದ್ಯಂತ ಹೆಣ್ಣು ಮಕ್ಕಳು ತಲೆ ಮೇಲೆ ಕುಂಭ ಕಳಸ ಹೊತ್ತು ಸಾಗಿ ಮೆರುಗು ತಂದರು. ಮೆರವಣಿಗೆಯುದ್ದಕ್ಕೂ ಮಹಿಳೆಯರು ಸಂವಿಧಾನದ ಪೀಠಿಕೆ ಪ್ರಸ್ತಾವನೆಯ ಪ್ರತಿಯನ್ನು ಹಿಡಿದು ಸಾಗುವ ಮೂಲಕ ಗಮನಸೆಳೆದರು.

ಕಲಾ ತಂಡಗಳ ಪ್ರದರ್ಶನ: ಮೆರವಣಿಗೆಗೆ ಡೊಳ್ಳು ಕುಣಿತ, ಕಂಸಾಳೆ ಕುಣಿತ ಸೇರಿದಂತೆ ಅನೇಕ ಕಲಾತಂಡಗಳು ತಮ್ಮ ಅತ್ಯದ್ಭುತವಾದಂತಹ ಕಲಾ ಪ್ರದರ್ಶನವನ್ನು ಮಾಡುವ ಮೂಲಕ ರಂಜಿಸಿದರು. ಅಲ್ಲದೆ ತಾಳಕ್ಕೆ ತಕ್ಕಂತೆ ಕುಣಿಯುವ ಮೂಲಕ ಯುವಕರನ್ನು ಸಹ ನಾಚಿಸುವಂತೆ ಕಲಾತಂಡಗಳ ಸದಸ್ಯರು ಪ್ರದರ್ಶನ ನೀಡಿದರು.

ಮೂರು ದಿನಗಳ ಕಾಲ ನಡೆದ ಹಬ್ಬದ ಪ್ರಯುಕ್ತ ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರವನ್ನು ಮಾಡಲಾಗಿತ್ತು. ವಿದ್ಯುತ್ ದೀಪಗಳ ಬಳಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಯುವಕರು ಸಂಭ್ರಮಿಸಿದರು.

ಹನೂರು ಪಟ್ಟಣದ ಯಜಮಾನರು, ಯುವಕರು, ಮಹಿಳೆಯರು ಡಾ. ಬಿಆರ್ ಅಂಬೇಡ್ಕರ್ ಸಂಘದ ಪದಾಧಿಕಾರಿಗಳು ಗ್ರಾಮಸ್ಥರು ಮಕ್ಕಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-37-819769571

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.