ಹನೂರು: ‘ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಸರ್ವರಿಗೂ ಸಮಾನತೆ, ಸಹೋದರತೆ, ಸಹಬಾಳ್ವೆ, ಕಾಯಕ ನಿಷ್ಠೆಯ ಆದರ್ಶಗಳನ್ನು ಜಗಕ್ಕೆ ಸಾರಿದ್ದಾರೆ’ ಎಂದು ಶಾಸಕ ಎಂ.ಆರ್. ಮಂಜುನಾಥ್ ಅಭಿಪ್ರಾಯ ಪಟ್ಟರು.

ಪಟ್ಟಣ ಲೋಕೋಪಯೋಗಿ ಅತಿಥಿ ಗೃಹದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಸವಣ್ಣನವರ ಆದರ್ಶಗಳ ಬಗ್ಗೆ ಮಾತನಾಡುವ ನಾವುಗಳು ನಂತರ ಮರೆಯುತ್ತೇವೆ. ಸ್ವಾರ್ಥ ಮತ್ತು ನಾನು ಮೇಲು ಎಂಬ ನಾನತ್ವಗಳನ್ನು ಮೈಗೂಡಿಸಿಕೊಳ್ಳುವ ಬದಲು, ಕಾಯಕವೇ ಕೈಲಾಸ ಎಂಬ ತತ್ವದೊಂದಿಗೆ ನಡೆಯಿರಿ’ ಎಂದರು.

‘ಇಂತಹ ದಾರ್ಶನಿಕ ಮಹನೀಯರ ತತ್ವ ಆದರ್ಶಗಳನ್ನು ನಾವು ಪಾಲಿಸಿದಾಗ ಮಾತ್ರ ಅವರಿಗೆ ಗೌರವ ಸಲ್ಲಿಸಲು ಸಾಧ್ಯ. ಅದನ್ನು ನೋಡಿ ನಮ್ಮ ಮುಂದಿನ ಪೀಳಿಗೆ ಕಲಿಯುತ್ತದೆ. ಮಹನೀಯರ ಜಯಂತಿಗಳು ಒಂದು ದಿನಕ್ಕೆ ಸೀಮಿತವಾಗಬಾರದು’ ಎಂದರು

‘ಸಮುದಾಯದ ವತಿಯಿಂದ ಪಟ್ಟಣದಲ್ಲಿ ಆಚರಣೆ ಮಾಡುವ ಬಸವೇಶ್ವರರ ಜಯಂತಿಗೆ ನನ್ನ ಸಂಪೂರ್ಣ ಸಹಕಾರವಿದೆ. ಅದೇ ರೀತಿ ಬಸವಣ್ಣನವರ ಪ್ರತಿಮೆ ನಿರ್ಮಾಣ ಹಾಗೂ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ತಹಶೀಲ್ದಾರ್ ಚೈತ್ರಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ರೇಖಾ, ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಉಪಾಧ್ಯಕ್ಷೆ ಪ್ರತಿಮಾ ಮಹದೇವ್, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ಜಿಲ್ಲಾ ನಿರ್ದೇಶಕರಾದ ಬಸವರಾಜು, ಮುಖಂಡರುಗಳಾದ ಮುರುಡೇಶ್ವರ ಸ್ವಾಮಿ, ಟಿ.ಸದಾಶಿವ ಮೂರ್ತಿ, ಡಿ.ಕೆ.ರಾಜು, ಉದ್ದನೂರು ಗಿರೀಶ್ ಇದ್ದರು..

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-37-851813806

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.