ಹನೂರು: ತಾಲ್ಲೂಕಿನ ಪ್ರಬುದ್ಧ ಎಜುಕೇಷನಲ್ ಮತ್ತು ಚಾರಿಟೇಬಲ್ ಸೊಸೈಟಿ ಚೆನ್ನಲಿಂಗನಹಳ್ಳಿಯ ಜೇತವನ ಬುದ್ಧ ವಿಹಾರದಲ್ಲಿ 2,570ನೇ ವರ್ಷದ ಬುದ್ಧ ಪೂರ್ಣಿಮೆ ಆಚರಿಸಿತು.

ಮನೋರಕ್ಕಿತ ಬಂತೇಜಿಯವರು ಬುದ್ಧ ಪೂರ್ಣಿಮೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬೌದ್ಧ ಉಪಾಸಕಿ– ಉಪಾಸಕರಿಗೆ ಬುದ್ಧ ವಂದನೆ ಪಠನೆ ಹಾಗೂ ಪಂಚಶೀಲ ತತ್ವಗಳನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ನರಸೀಪುರದ ಬೌದ್ಧ ಉಪಾಸಕಿ ಬಿ.ಸಿ ಇಂದಿರಮ್ಮ ಮಾತನಾಡಿ, ಜಗತ್ತಿನ ಹಲವಾರು ರಾಷ್ಟ್ರಗಳು ಬುದ್ಧರನ್ನು ಅಪ್ಪಿಕೊಂಡು ಅವರು ತೋರಿದ ಮಾರ್ಗದಲ್ಲಿ ನಡೆಯುತ್ತಾ ಪ್ರಗತಿಯತ್ತ ಸಾಗುತ್ತಿವೆ. ಆದರೆ ಬುದ್ಧ ಹುಟ್ಟಿದ ನಾಡು ಭಾರತ ದೇಶದಲ್ಲಿ ಇನ್ನೂ ಬಡತನ ಮೌಢ್ಯತೆ ತಾಂಡವವಾಡುತ್ತಿದೆ. ಭಗವಾನ್ ಬುದ್ಧ ತೋರಿದ ಮಾರ್ಗದಲ್ಲಿ ನಾವು ಬದುಕು ನಡೆಸಬೇಕು. ದಾನ, ಶೀಲಾ, ಕರುಣೆ, ಮೈತ್ರಿ ಇವೆಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಂಡರೆ ನಮ್ಮಂತ ಶ್ರೀಮಂತರು ಯಾರು ಇರುವುದಿಲ್ಲ, ಸುಂದರ ಬದುಕು ನಮ್ಮದಾಗುತ್ತದೆ ಎಂದರು.

ಮನೋರಕ್ಕಿತ ಬಂತೇಜಿ ಮಾತನಾಡಿ, ಭಗವಾನ್ ಬುದ್ಧರ ಜನ್ಮದಿನದಂದು ಅವರಿಗೆ ಗೌರವವನ್ನು ಸಲ್ಲಿಸಿ ಅವರು ತೋರಿದ ಮಾರ್ಗದಲ್ಲಿ ನಡೆಯುವುದೇ ನಮ್ಮ ಮುಖ್ಯ ಗುರಿಯಾಗಬೇಕು ಎಂದರು.

ಕೊಳ್ಳೇಗಾಲದಿಂದ ಮಧುವನಹಳ್ಳಿ ಮಾರ್ಗವಾಗಿ ತೆರಳುವ ಮಹದೇಶ್ವರ ಬೆಟ್ಟ ಹಾಗೂ ಒಡೆಯರಪಾಳ್ಯ ತೆರಳುವ ಮುಖ್ಯರಸ್ತೆಯಲ್ಲಿ ನೂತನವಾಗಿ ಲಾರ್ಡ್ ಬುದ್ಧ ಸರ್ಕಲ್ ನಾಮ ಫಲಕವನ್ನು ಮನೋರಂಕ್ಕಿತ ಬಂತೇಜಿ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಡಾಕ್ಟರ್ ಜಗನಾಥ್, ಮಹದೇವ್ ಕುಮಾರ್, ನಿವೃತ್ತ ಮುಖ್ಯ ಶಿಕ್ಷಕರು ಸಿದ್ದರಾಜು, ಮುಳ್ಳೂರು ಶಿವಮಲ್ಲು, ಲೋಕೇಶ್, ರಾಜ್ಯದ ವಿವಿಧ ಬಾಗಗಳಿಂದ ಬಂದಿದ್ದ ಬೌದ್ಧ ಉಪಾಸಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-37-127660788

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.