ಹನೂರು: ‘ಒಳ ಮೀಸಲಾತಿ ಹಂಚಿಕೆಯಲ್ಲಿ ದಲಿತ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು, ರೋಸ್ಟರ್ ಪದ್ಧತಿಯಲ್ಲಿ ಬದಲಾವಣೆ ಮಾಡಿ ಎಲ್ಲರಿಗೂ ಸಮಾನವಾಗಿ ಮೀಸಲಾತಿ ಹಂಚಿಕೆ ಮಾಡಬೇಕು’ ಎಂದು ಒತ್ತಾಯಿಸಿ ಸಮುದಾಯದವರು ಹನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಮಹದೇಶ್ವರ ಕ್ರೀಡಾಂಗಣದಿಂದ ಹೊರಟ ಪ್ರತಿಭಟನಕಾರರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಮುಖ್ಯ ರಸ್ತೆಯಲ್ಲಿ ಸಾಗಿ ತಹಶೀಲ್ದಾರ್ ಚೈತ್ರಾ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಚಾಮರಾಜನಗರದ ಸಿ.ಕೆ. ಮಂಜುನಾಥ್ ಮಾತನಾಡಿ, ‘ನಾವು ಒಳ ಮೀಸಲಾತಿ ವಿರೋಧಿಗಳಲ್ಲ, ರೋಸ್ಟರ್ ಬಿಂದುವಿನಲ್ಲಿ ಆಗಿರುವ ಪ್ರಮಾದವನ್ನು ಸರಿಪಡಿಸಬೇಕು, ಹೊಲಯ ಮತ್ತು ಮಾದಿಗ ಸಮುದಾಯದ ಜನರನ್ನು ಒಡೆದು ಆಳುವ ನೀತಿಯನ್ನು ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಸೋದರ ಸಮಾಜದಲ್ಲಿ ಇರುವ ಭಾಸ್ಕರ್ ಪ್ರಸಾದ್ ಮತ್ತು ಅರುಣ್ ಕುಮಾರ್ ಅವರು ನಮ್ಮ ಎರಡು ಸಮುದಾಯದ ಒಗ್ಗಟ್ಟನ್ನು ಮುರಿದು ಶೋಷಣೆಗೆ ಒಳಪಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮೈಸೂರು ವಿಶ್ವವಿದ್ಯಾಲಯದ ಅತಿಥಿ ಉಪನ್ಯಾಸಕ ಮಲೆ ಮಹದೇಶ್ವರ ಸ್ವಾಮಿ ಮಾತಾನಾಡಿ, ‘ನಾಗಮೋಹನ ದಾಸ್ ನೀಡಿರುವ ವರದಿಯಿಂದ ನೊಂದ ಸಮುದಾಯ ನ್ಯಾಯ ಕಾಣಲು ಸಾಧ್ಯವಿಲ್ಲ. ಅವೈಜ್ಞಾನಿಕವಾಗಿ ಒಳ ಮೀಸಲಾತಿ ವರದಿಯನ್ನು ನೀಡಿದ್ದು, ಬಲಗೈ ಸಮುದಾಯದ ಜನರಿಗೆ ಅನ್ಯಾಯವಾಗುತ್ತಿದೆ. ಈ ವರದಿ ಜಾರಿಯಾದರೆ ಸಮುದಾಯದ ಮಕ್ಕಳು ಉದ್ಯೋಗ, ಶಿಕ್ಷಣದಿಂದ ವಂಚಿತರಾಗುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅತಿಥಿ ಉಪನ್ಯಾಸಕ ಮಲ್ಲಿಕಾರ್ಜುನ ಮಾತನಾಡಿ, ‘ಏಳು ವರ್ಷ ಸದಾಶಿವ ಆಯೋಗ ಸಮೀಕ್ಷೆ ಮಾಡಿದ್ದರೂ ಇದುವರೆಗೆ ಮುನ್ನೆಲೆಗೆ ಬರಲಿಲ್ಲ. ಆದರೆ ಮೂರು ತಿಂಗಳಲ್ಲಿ ನಾಗಮೋಹನದಾಸ್ ಸಮೀಕ್ಷೆ ಮಾಡಿ ಬಲಗೈ ಸಮುದಾಯದ ಜನರನ್ನು ಕಡಿಮೆ ಮಾಡಿ, ಹುನ್ನಾರ ನಡೆಸಿ ನಮ್ಮನ್ನು ದಮನ ಗೊಳಿಸುತ್ತಿದ್ದಾರೆ. ತರಾತುರಿಯಲ್ಲಿ ಈ ವರದಿ ನೀಡಿದ್ದಾರೆ. ಈ ವರದಿಯು ಅವೈಜ್ಞಾನಿಕವಾಗಿದೆ’ ಎಂದು ಆರೋಪಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಸೇರಿದ್ದರು.

ಪ್ರತಿಭಟನೆಯಲ್ಲಿ ಹನೂರು ಪಟ್ಟಣದ ಯಜಮಾನರು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಸಂಪತ್ ಕುಮಾರ್, ಸಿದ್ದರಾಜು, ಬಸವರಾಜು, ಮಹೇಶ್, ಮುಖಂಡರಾದ ಕಿರಣ್, ರವೀಂದ್ರ, ಪುಟ್ಟರಾಜು, ಕೃಷ್ಣ, ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಸಿಂಗಾನಲ್ಲೂರು, ದೊಡ್ಡಿಂದುವಾಡಿ, ಮತ್ತಿಪುರ, ತೆಳ್ಳನೂರು, ಹನೂರು ತಾಲ್ಲೂಕಿನ ಮಣಗಳ್ಳಿ, ಬಂಡಳ್ಳಿ, ಅಜ್ಜಿಪುರ, ಮಾರ್ಟಳ್ಳಿ, ಲೊಕ್ಕನಹಳ್ಳಿ, ಚಿಕ್ಕಮಾಲಾಪುರ, ಪಿ.ಜಿ.ಪಾಳ್ಯ, ರಾಮಾಪುರ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.