ಹನೂರು: ‘ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು, ಜನರ ಕಷ್ಟಗಳ ನಿವಾರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ’ ಎಂದು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.

ತಾಲ್ಲೂಕಿನ ಬಂಡಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ಆವರಣದಲ್ಲಿ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಫಲಾನುಭವಿಗಳನ್ನು ಗುರುತಿಸಿ ಮನೆ ಒದಗಿಸಬೇಕು. ವಲಸೆ ಹೋಗಿರುವ ಕುಟುಂಬಗಳಿಗೆ ಆದಾಯದ ಮೂಲ ತೋರಿಸುವ ಮೂಲಕ ಸ್ವ ಗ್ರಾಮದಲ್ಲಿ ನೆಲೆಯೂರುವಂತೆ ಮಾಡಬೇಕಿದೆ’ ಎಂದರು.

‘ಜನರಿಗೆ ಉದ್ಯೋಗ ದೊರಕಿಸುವ ಹೈನುಗಾರಿಕೆ, ಕೃಷಿ ವ್ಯವಸಾಯಗಳಿಗೆ ಅನುಕೂಲವಾಗುವಂಥ ಮಾರ್ಗೋಪಾಯಗಳನ್ನು ಕಂಡುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ನೀರು, ವಿದ್ಯುತ್, ರಸ್ತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು. ಸರ್ಕಾರದ ಸಾಲ ಸೌಲಭ್ಯಗಳು ಸುಲಲಿತವಾಗಿ ದೊರೆತಾಗ ಜನರು ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತದೆ’ ಎಂದರು.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಾಗಯ್ಯ ಮಾತನಾಡಿ, ‘ಶಾಸಕ ಎಂ.ಆರ್.ಮಂಜುನಾಥ್ ಅವರ ಜನಪರ ಸೇವಾ ಕಾರ್ಯಗಳನ್ನು ಗಮನಿಸಿದ್ದು, ಬಿಜೆಪಿ ತೆರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದೇನೆ’ ತಿಳಿಸಿದರು.

ಬಂಡಳ್ಳಿ ಗ್ರಾಮದ ನಾಗಯ್ಯ, ಮಹದೇವು, ಪುಟ್ಟಸ್ವಾಮಿ, ಕುಳ್ಳ ವೀರಯ್ಯ, ಅಣಗಳ್ಳಿದೊಡ್ಡಿ ನಾಗರಾಜು, ಭರತ್, ಹರೀಶ, ಮಂಗಳಮ್ಮ, ಮಹೇಂದ್ರ ಸೇರಿದಂತೆ 60ಕ್ಕೂ ಹೆಚ್ಚು ಮಂದಿ ಬಿಜೆಪಿ, ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.

ಶಂಕರಪ್ಪ, ತಿರುಪತಿ, ಸಮೀವುಲ್ಲಾ, ಮಂಜೇಶ್, ಶುವಣಪ್ಪ, ಉದ್ದನೂರು ಗಿರೀಶ್, ಅಣಗಳ್ಳಿ ಚಂದ್ರು, ಮಾದೇಶ್, ಶಿವರಾಜು, ಹುಚ್ಚಯ್ಯ, ಎಸ್.ಆರ್.ಮಹದೇವ್, ನಟರಾಜು, ಜೇಸಿಮ್ ಪಾಷ, ಜವಾದ್, ಗೋಪಾಲ್ ನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-37-427130216

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.