ಹನೂರು: ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ವ್ಯಾಪ್ತಿಯ ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಜಲಾಶಯದ ಬಳಿ ಉರುಳಿಗೆ ಸಿಲುಕಿ ಹುಲಿ ಮೃತಪಟ್ಟ ಬೆನ್ನಲ್ಲೇ ಸೋಮವಾರ ಅರಣ್ಯ ಇಲಾಖೆಯ ಸಿಬ್ಬಂದಿ ಆರೋಪಿಗಳ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು.

‘ಭೂಮಿ’ ಹಾಗೂ ‘ಭಾನು’ ಎಂಬ ಶ್ವಾನಗಳ ನೆರವಿನೊಂದಿಗೆ 50ಕ್ಕೂ ಹೆಚ್ಚು ಅರಣ್ಯ ಇಲಾಖೆಯ ಗಸ್ತು ಸಿಬ್ಬಂದಿ ಜಲಾಶಯದ ಸುತ್ತಲೂ 6 ಕಿ.ಮೀ ದೂರದವರೆಗೂ ಕೂಬಿಂಗ್ ನಡೆಸಿದರು. ಹಿಂದೆ ಅಕ್ರಮ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು, ಅಂತರರಾಜ್ಯ ಕಳ್ಳಬೇಟೆಕೋರರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಯುತ್ತಿದೆ ಎನ್ನಲಾಗಿದೆ.

ಹುಲಿ ಬೇಟೆ ಗುರಿಯಲ್ಲ:

ಉರುಳಿಗೆ ಸಿಲುಕಿ ಹುಲಿ ಮೃತಪಟ್ಟಿದ್ದರೂ ನಿರ್ದಿಷ್ಟವಾಗಿ ಹುಲಿಯನ್ನು ಬೇಟೆಯಾಡಲು ಉರುಳು ಹಾಕಿರುವ ಸಾಧ್ಯತೆಗಳು ತೀರಾ ಕಡಿಮೆ. ಮೃತಪಟ್ಟ ಹುಲಿಯ ಹಲ್ಲು, ಉಗುರು, ಚರ್ಮ ಸೇರಿದಂತೆ ಇತರೆ ಅಂಗಾಂಗಳನ್ನು ಕಳವು ನಡೆದಿಲ್ಲ. ಹಾಗಾಗಿ, ಕಾಡು ಹಂದಿ, ಮೊಲ, ಜಿಂಕೆ ಸಹಿತ ಇತರೆ ಪ್ರಾಣಿಗಳ ಬೇಟೆಗೆ ಉರುಳು ಹಾಕಿರುವ ಸಾಧ್ಯತೆಗಳು ಹೆಚ್ಚು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

‘ಮಾಂಸಕ್ಕಾಗಿ ಕಾಡುಪ್ರಾಣಿಗಳನ್ನು ಕೊಲ್ಲಲು ಉರುಳು ಹಾಕಲಾಗಿದ್ದು ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ, ಕೃತ್ಯದಲ್ಲಿ ಸ್ಥಳೀಯರ ಅಥವಾ ಪ್ರವಾಸಿಗರ ಕೈವಾಡವಿದೆಯೇ, ಅಂತರ ರಾಜ್ಯ ಕಳ್ಳಬೇಟೆಕೋರರ ಪಾತ್ರ ಇದೆಯೇ ಎಂಬ ಹಿನ್ನೆಲೆಯಲ್ಲೂ ತನಿಖೆ ಸಾಗುತ್ತಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನರಳಾಡಿ ಮೃತಪಟ್ಟ ಹುಲಿ:

ಉರುಳಿಗೆ ಸಿಕ್ಕಿಬಿದ್ದ ಹುಲಿ ಬಿಡಿಸಿಕೊಳ್ಳಲು ಹಲವು ತಾಸುಗಳ ಕಾಲ ಸ್ಥಳದಲ್ಲಿಯೇ ಒದ್ದಾಡಿದೆ. ಈ ಸಂದರ್ಭ ಹುಲಿಯ ಕುತ್ತಿಗೆಯನ್ನು ಬಿಗಿದುಕೊಂಡ ದಾರ ಒಂದು ಇಂಚಿನಷ್ಟು ಚರ್ಮ ಕೊರೆದುಹಾಕಿದೆ. ಅಂತಿಮವಾಗಿ ಉರುಳನ್ನು ಕಿತ್ತುಕೊಂಡರೂ ಪ್ರಾಣ ಉಳಿಸಿಕೊಳ್ಳಲು ನಡೆಸಿದ ಸುಧೀರ್ಘ ಹೋರಾಟದಲ್ಲಿ ತೀರಾ ನಿತ್ರಾಣಗೊಂಡಿದ್ದ ಹುಲಿ ಜಲಾಯಶದ ಬಳಿ ಬಂದು ನೀರು ಕುಡಿದು ಬಳಿಕ ಮೃತಪಟ್ಟಿದೆ ಎನ್ನಲಾಗಿದೆ.

ಗಅಸಮರ್ಥತೆ:

‘ಗುಂಡಾಲ್ ಜಲಾಶಯ ಹಾಗೂ ಸುತ್ತಮುತ್ತಲಿನ ಪ್ರದೇಶ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ವ್ಯಾಪ್ತಿಗೊಳಪಟ್ಟ ಸೂಕ್ಷ್ಮ ಪ್ರದೇಶವಾಗಿದ್ದರೂ ಕಿಡಿಗೇಡಿಗಳು ರಾಜಾರೋಷವಾಗಿ ಉರುಳು ಹಾಕಿರುವುದು ಅರಣ್ಯ ಇಲಾಖೆಯ ವೈಫಲ್ಯ ತೋರಿಸುತ್ತದೆ. ಸಮರ್ಪಕವಾಗಿ ಗಸ್ತು ನಡೆಯದಿರುವುದನ್ನು ನೋಡಿ ದುಷ್ಕರ್ಮಿಗಳು ಉರುಳು ಹಾಕಿದ್ದಾರೆ’ ಎಂದು ಪರಿಸರವಾದಿಗಳು ಟೀಕಿಸಿದ್ದಾರೆ.

‘ಗುಂಡಾಲ್ ಜಲಾಶಯ ವೀಕ್ಷಣೆಗೆ ಬರುವ ಪ್ರವಾಸಿಗರು ಹಿನ್ನೀರಿನಲ್ಲಿ ಮೋಜು ಮಸ್ತಿ ಮಾಡುವುದು ಹೆಚ್ಚಾಗಿದೆ. ಪರಿಸರ ಹಾಗೂ ವನ್ಯಜೀವಿಗಳ ಜೀವಕ್ಕೆ ಕುತ್ತು ತರುವ ಚಟುವಟಿಕೆಗಳಿಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದ್ದಾರೆ.

ಜಲಾಶಯದ ಸುತ್ತಲೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕಾಡುಪ್ರಾಣಿಯ ಮಾಂಸಕ್ಕಾಗಿ ಹಾಕಿದ್ದ ಉರುಳು? ಕಳ್ಳಬೇಟೆ ಸಕ್ರಿಯ: ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.