ಹನೂರು : ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ಕೆ.ಎನ್. ಚೈತ್ರಾ ಸೋಮವಾರ 2026-27 ನೇ ಸಾಲಿಗೆ ₹79 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು.

ಪಟ್ಟಣ ಪಂಚಾಯಿತಿ ಆಯವ್ಯಯದಲ್ಲಿನ ಎಲ್ಲಾ ಮೂಲಗಳಿಂದ ಪ್ರಾರಂಭಿಕ ಶುಲ್ಕ ₹18.07 ಕೋಟಿ ಆದಾಯ ಮತ್ತು 17.28 ಕೋಟಿ ವೆಚ್ಚವನ್ನು ಅಳವಡಿಸಿಕೊಂಡು ₹79.01 ಲಕ್ಷದ ಉಳಿತಾಯ ಬಜೆಟ್ ಮಂಡಿಸಿದರು.

ಎಸ್.ಎಫ್.ಸಿ ವೇತನ ಅನುದಾನ, ಪೌರ ಕಾರ್ಮಿಕರ ವೇತನ ಅನುದಾನ, ಎಸ್.ಎಫ್.ಸಿ ವಿದ್ಯುತ್ ಅನುದಾನ, ಎಸ್.ಎಫ್.ಸಿ ಮುಕ್ತ ನಿಧಿ ಅನುದಾನ 15-16 ನೇ ಹಣಕಾಸು ಅನುದಾನ, ಎಸ್. ಎಫ್.ಸಿ ಇತರೆ ಅನುದಾನಗಳು, ಆಸ್ತಿ ತೆರಿಗೆ ಮತ್ತು ದಂಡ, ಉಪಕರ ಸಂಗ್ರಹಣೆ ಶುಲ್ಕಗಳು, ವಾಣಿಜ್ಯ ಮಳಿಗೆ ಬಾಡಿಗೆ ಮತ್ತು ದಂಡ, ಪರವಾನಗಿ ಶುಲ್ಕಗಳು, ಇತರ ವಿವಿಧ ಶುಲ್ಕಗಳು, ತೆರಿಗೆ ಮತ್ತು ವಸೂಲಾತಿಗಳು, ಉಪ ಕರಗಳು ಸೇರಿದಂತೆ ವಾರ್ಷಿಕ 18.07 ಕೋಟಿ ಆದಾಯವನ್ನು ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಆರ್. ಮಂಜುನಾಥ್, ಹನೂರು ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಸಹ ಹೆಚ್ಚಿನ ಶ್ರಮವಹಿಸಬೇಕು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 13 ವಾರ್ಡ್ಗಳಲ್ಲಿಯೂ ಸಮಸ್ಯೆಗಳಿದ್ದು ಇದನ್ನು ಬಗೆಹರಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಕೆಲವು ವಾರ್ಡ್ಗಳಲ್ಲಿ ಬೀದಿ ದೀಪ ಹಾಗೂ ಸ್ವಚ್ಛತೆ ಇಲ್ಲದಿರುವ ಬಗ್ಗೆ ಹಲವಾರು ದೂರುಗಳು ಇವೆ. ಎಂಜಿನಿಯರ್ ಹಾಗೂ ಆರೋಗ್ಯ ನಿರೀಕ್ಷಕರು ಸಮಸ್ಯೆಯನ್ನು ಬಗೆಹರಿಸಬೇಕು ಎಂದರು.

ಪಟ್ಟಣದ 7ನೇ ವಾರ್ಡಿನ ಕನ್ನಿಕಾಪರಮೇಶ್ವರಿ ರಸ್ತೆಯಲ್ಲಿ ಪ್ರತಿನಿತ್ಯ ಸ್ವಚ್ಛತೆ ಮಾಡದೇ ಇರುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದು ನಾರುತ್ತಿದೆ ಇದನ್ನು ಪ್ರತಿದಿನ ಯಾಕೆ ಸ್ವಚ್ಛತೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಆರೋಗ್ಯ ನಿರೀಕ್ಷಕ ಪ್ರಕಾಶ್ ಮಾತನಾಡಿ ಎರಡು ದಿನಗಳಿಗೊಮ್ಮೆ ಸ್ವಚ್ಛ ಮಾಡಲಾಗುತ್ತಿದೆ ಪ್ರತಿನಿತ್ಯ ಮಾಡಲಾಗುವುದು ಎಂದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇ– ಸ್ವತ್ತು ಖಾತೆ ಬದಲಾವಣೆ ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ ಸೇರಿದಂತೆ ಇನ್ನಿತರ ಪಟ್ಟಣ ಪಂಚಾಯಿತಿಯಿಂದ ಸಿಗುವ ಸೌಲಭ್ಯಗಳು ಜನಸಾಮಾನ್ಯರಿಗೆ ನೇರವಾಗಿ ತಲುಪದಿರುವುದು ಗಮನಕ್ಕೆ ಬಂದಿದೆ . ಅಧಿಕಾರಿಗಳು ಜನರನ್ನು ಕಚೇರಿಗೆ ಅಲೆದಾಡಿಸದೆ ನಿಗದಿತ ಸಮಯದೊಳಗೆ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು. ಇಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದರು.

ಹನೂರು ಪಟ್ಟಣ ವ್ಯಾಪ್ತಿಯ ಅಜ್ಜಿಪುರ ಹಾಗೂ ಎಲೆಮಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪೆಟ್ರೋಲ್ ಬಂಕ್ ಸಮೀಪದ ವೃತ್ತಕ್ಕೆ ಶ್ರೀ ನಾಡಪ್ರಭು ಕೆಂಪೇಗೌಡ ಎಂದು ನಾಮಕರಣ ಮಾಡಲು ಪಟ್ಟಣ ಪಂಚಾಯಿತಿ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ಸಂಬಂಧ ಕಚೇರಿಯಿಂದ ಸರ್ಕಾರಕ್ಕೆ ಸಮರ್ಪಕ ದಾಖಲಾತಿಗಳನ್ನು ಸಲ್ಲಿಸುವಂತೆ ಈಗಾಗಲೇ ಎರಡು ಬಾರಿ ಸೂಚಿಸಿದ್ದೇನೆ ಆದರು ಇದುವರೆಗೂ ದಾಖಲಾತಿಗಳನ್ನು ಏಕೆ ಸಲ್ಲಿಸಿಲ್ಲ ಎಂದು ವಿಷಯ ನಿರ್ವಾಹಕ ಪ್ರತಾಪರನ್ನು ತರಾಟೆಗೆ ತೆಗೆದುಕೊಂಡರು. ಆಡಳಿತಾಧಿಕಾರಿ ತಹಶೀಲ್ದಾರ್ ಚೈತ್ರ ಮಾತನಾಡಿ, ಸಂಜೆಯೊಳಗೆ ಪತ್ರಿಕಾ ಪ್ರಕಟಣೆಯ ಪತ್ರಿಗಳನ್ನು ಹಾಗೂ ಸಂಬಂಧಪಟ್ಟ ದಾಖಲಾತಿಗಳನ್ನು ಸಲ್ಲಿಸುವಂತೆ ಸೂಚಿಸಿದರು. ಶೀಘ್ರದಲ್ಲೇ ಸಮರ್ಪಕ ದಾಖಲಾತಿಗಳನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.

ಪ್ರತಿ ವರ್ಷವೂ ಸಹ ಬಜೆಟ್ ಆಯವ್ಯಯ ಮಂಡಿಸಲಾಗುತ್ತಿದೆ. ಆದರೆ ಮಂಡಿಸಿದ ನಂತರ ಯಾವೆಲ್ಲ ಕಾರ್ಯಕ್ರಮಗಳು ಅನುಷ್ಠಾನವಾಗಿದೆ.ನಿರೀಕ್ಷಿಸಲಾದ ಆದಾಯ ಬಂದಿದೆಯೇ, ಯಾವ ಕಾರಣಕ್ಕೆ ಆದಾಯ ಬಂದಿಲ್ಲ. ವಸೂಲಾತಿ ಏಕೆ ಆಗಿಲ್ಲ ಎಂಬುದರ ಬಗ್ಗೆ ಪರಿಶೀಲನೆ ನಡೆಸಬೇಕು ಎಂದರು. ಪಟ್ಟಣ ಪಂಚಾಯಿತಿಯಲ್ಲಿ ಬಿಲ್ ಪಾವತಿ ಮಾಡುವಾಗ ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಬೇಕು ಹಣ ಬಳಕೆ ಬಗ್ಗೆ ನನಗೆ ಮಾಹಿತಿ ನೀಡಬೇಕು ಎಂದು ಅಕೌಂಟೆಂಟ್ ದೇವಿಕಾ ಅವರಿಗೆ ಸೂಚನೆ ನೀಡಿದರು.

ಮುಖ್ಯಾಧಿಕಾರಿ ರೇಖಾ, ಕಿರಿಯ ಎಂಜಿನಿಯರ್ ನಾಗರಾಜು, ಆರೋಗ್ಯಾಧಿಕಾರಿ ಪ್ರಕಾಶ್, ಜೂನಿಯರ್ ಪ್ರೋಗ್ರಾಮರ್ ಮಹೇಶ್, ದ್ವಿತೀಯ ದರ್ಜೆ ಸಹಾಯಕ ಮಾದೇಶ್, ಬಿಲ್ ಕಲೆಕ್ಟರ್ ಭರತ್, ವಿಷಯನಿರ್ವಾಹಕ ಪ್ರತಾಪ್, ಮದನ್, ಅಕೌಂಟೆಂಟ್ ದೇವಿಕಾ ಸಿಬ್ಬಂದಿ ವರ್ಗದವರಾದ ರಮ್ಯ, ಆಶಾ, ಮಹೇಶ್, ಶ್ರೀನಿವಾಸ್, ಸುನೀಲ್ ಸುಷ್ಮಾ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-37-1918134171

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.