ಹನೂರು: ತಾಲ್ಲೂಕಿನ ಅಜ್ಜೀಪುರ – ದೊಮ್ಮನಗದ್ದೆ ಮಾರ್ಗ ಮಧ್ಯೆ ಇರುವ ಜಡೇಸ್ವಾಮಿ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು.

ಕೊಂಡೋತ್ಸವವನ್ನು 2014ರಲ್ಲಿ ನಡೆಸಲಾಗಿತ್ತು. 12 ವರ್ಷಗಳ ನಂತರ ಅಜ್ಜೀಪುರ, ಸುತ್ತಲಿನ ಗ್ರಾಮಸ್ಥರು ಕೊಂಡೋತ್ಸವವನ್ನು ಸಾಂಪ್ರದಾಯಿಕವಾಗಿ ನೇರವೇರಿಸಿದರು.

ಸೋಮವಾರ ಜಡೇಸ್ವಾಮಿ ಸ್ವಾಮಿಗೆ ವಿಶೇಷ ಪುಷ್ಪ ಅಲಂಕಾರ ಮಾಡಲಾಗಿತ್ತು. ಸಂಜೆ 5 ಗಂಟೆಗೆ ಮಹದೇಶ್ವರ ದೇವಾಲಯದ ಬಳಿ ಸ್ವಾಮಿಯ ಗಂಡುಗೋರಲಿ, ಸತ್ತಿಗೆ, ಸೂರಪಾನಿ ಅಲಂಕರಿಸಿ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ವಾದ್ಯ ಮೇಳಗಳೊಂದಿಗೆ ದೇವರು , ಸತ್ತಿಗೆ, ಸುರಾಪನಿ, ಹಾಲಾರವಿ ನೇರವೇರೀಸಲಾಯಿತು. 6 ಗಂಟೆಗೆ ಅರ್ಚಕರು, ಹರಕೆ ಹೊತ್ತ ಭಕ್ತರು ಕೊಂಡ ಹಾಯ್ದರು.

ಅನ್ನ ಸಂತರ್ಪಣೆ: ಕೊಂಡೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಮುದ್ದೆ, ಅನ್ನ, ದ್ವಿದಳ ಧಾನ್ಯದ ಸಾಂಬಾರು, ಪಾಯಸ, ಪಲ್ಯಗಳ ಅನ್ನ ಸಂತರ್ಪಣೆ ಮಾಡಲಾಯಿತು.

ಅರ್ಚಕರಾದ ಚಿನ್ನು, ನಾಗರಾಜ್, ಮುನಿರಾಜು, ರಾಜೇಂದ್ರ, ಚಂದು, ಗಾವಳಿ ಪಚ್ಚಮ್ಮಲ್ಲೇಗೌಡ, ಶಂಕರ್, ರಾಜೇಶ್, ಯಜಮಾನರಾದ ರಾಮೇಗೌಡ, ಮುತ್ತೇಗೌಡ, ಕುಪ್ಪೆಗೌಡ, ಭಕ್ತರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260422-37-179167710

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.