ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರದನಹಳ್ಳಿ: ಸೊಳ್ಳೆಗಳ ಆವಾಸ ಸ್ಥಾನ, ರೋಗರುಜಿನದ ಭೀತಿ

ಸತತ ಮಳೆಗೆ ಗುಂಡಿಯಲ್ಲಿ ಕಲುಷಿತ ನೀರು ಸಂಗ್ರಹ
Last Updated 16 ಸೆಪ್ಟೆಂಬರ್ 2019, 14:56 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಹರದನಹಳ್ಳಿ ಗ್ರಾಮದ 2ನೇ ಬಸ್‌ ನಿಲ್ದಾಣದ ಬಳಿ ಇರುವ ಗುಂಡಿಯಲ್ಲಿ ಚರಂಡಿ ಹಾಗೂ ಮಳೆ ನೀರು ಸಂಗ್ರಹಗೊಂಡಿದೆ. ಸ್ಥಳೀಯ ಜನರು ತ್ಯಾಜ್ಯವನ್ನೂ ಅದೇ ಗುಂಡಿಗೆ ಎಸೆಯುತ್ತಿರುವುದರಿಂದ ನೀರು ಕಲುಷಿತಗೊಂಡಿದ್ದು, ರೋಗರುಜಿನ ಹರಡುವ ಭೀತಿ ಎದುರಾಗಿದೆ.

ಸ್ಥಳೀಯ ಆಡಳಿತ ಗ್ರಾಮದ ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ.ರಸ್ತೆ ಬದಿಯಲ್ಲಿ ಸಂಚರಿಸಿದರೆ ಕಳೆ ಸಸ್ಯಗಳು, ಕಸದರಾಶಿ ಕಣ್ಣಿಗೆ ಕಾಣುತ್ತವೆ.

ರಸ್ತೆ ಬದಿ ಬಹಿರ್ದೆಸೆಯ ತಾಣವಾಗಿದೆ. ಸ್ಥಳೀಯ ಜನರು ಕಸವನ್ನು ಎಲ್ಲೆಂದರಲ್ಲಿ ಬಿಸಾಕುತ್ತಾರೆ. ಅಲ್ಲದೆ, ಕಸದ ವಿಲೇವಾರಿ ಕೂಡ ಸಮರ್ಪಕವಾಗಿ ಆಗುತ್ತಿಲ್ಲ. ಇದರ ನಡುವೆಯೇ ಕಳೆದ ತಿಂಗಳು ಸತತವಾಗಿ ಸುರಿದ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗಿದೆ. ಅವುಗಳು ಸೊಳ್ಳೆಗಳ ಆವಾಸ ಸ್ಥಾನವಾಗಿ ಬದಲಾಗಿವೆ.

ಗ್ರಾಮದ2ನೇ ಬಸ್‌ ನಿಲ್ದಾಣದ ಸಮೀಪ ಹಳ್ಳಬಿದ್ದು ಮಳೆ ನೀರು ನಿಂತಿದೆ ಹಾಗೂ ಅದರ ಅರ್ಧ ಜಾಗವನ್ನು ಪ್ಲಾಸ್ಟಿಕ್‌, ಇತರ ತ್ಯಾಜ್ಯಗಳೇ ಆವರಿಸಿವೆ.ಇಲ್ಲಿ ಸುಮಾರು 660 ಕುಟುಂಬಗಳು ವಾಸಿಸುತ್ತಿವೆ. ಇಲ್ಲಿನವರೇ ತ್ಯಾಜ್ಯವನ್ನು ಆ ಹಳ್ಳಕ್ಕೆ ಎಸೆಯುತ್ತಿದ್ದಾರೆ.ರಸ್ತೆ ಬದಿ ಕಸ ಹಾಗೂ ಚರಂಡಿಗಳಲ್ಲಿನ ಹೂಳು ತೆಗೆಸಲುಗ್ರಾಮ ಪಂಚಾಯತಿ ಸದಸ್ಯರು, ಅಭಿವೃದ್ಧಿಅಧಿಕಾರಿಗಳುಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ಆರೋಪಿಸುತ್ತಾರೆ.

‘ಹಿಂದೆ ಮೂರ್ನಾಲ್ಕು ತಿಂಗಳಿಗೊಮ್ಮೆ ಕಸ ವಿಲೇವಾರಿ ಮಾಡಲಾಗುತ್ತಿತ್ತು. ಪ್ರತಿ ತಿಂಗಳು ಕಸ ವಿಲೇವಾರಿ ಮಾಡಿದರೆ ಸ್ವಚ್ಛತೆ ಕಾಣಬಹುದು. ಆದರೆ, ಯಾರೂ ಮಾಡುತ್ತಿಲ್ಲ. ಕಸದ ತೊಟ್ಟಿಗಳನ್ನು ಅಲ್ಲಿಲ್ಲಿ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ನಿವಾಸಿ ಮಹದೇವನಾಯಕ ಅವರು ಹೇಳಿದರು.

‘2ನೇ ಬಸ್‌ ನಿಲ್ದಾಣದ ಬಳಿ ಚರಂಡಿ ನೀರು ಸಂಗ್ರಹಗೊಂಡಿದೆ. ಒಂದೂವರೆ ವರ್ಷದ ಹಿಂದೆ ಚರಂಡಿ ನಿರ್ಮಾಣ ಕಾರ್ಯ ಆರಂಭವಾಗಿ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಚರಂಡಿ ನಿರ್ಮಾಣವಾದರೆ ಕಲುಷಿತ ನೀರುಸಂಗ್ರಹಗೊಳ್ಳುವುದಿಲ್ಲ. ಈ ವರ್ಷ ಚರಂಡಿ ನಿರ್ಮಾಣ ಮಾಡಲಾಗುವುದು’ ಎಂದು ಸುಂದರರಾಜು ಹೇಳಿದರು.

ಕಸದ ವಾಹನ ಖರೀದಿ: ‘ನಾಲ್ಕು ವರ್ಷಗಳ ಹಿಂದೆಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೊಗ ಖಾತ್ರಿ ಯೋಜನೆಯಡಿ (ನರೇಗಾ) ಕಸದ ತೊಟ್ಟಿಗಳ ನಿರ್ಮಾಣ ಮಾಡಬಹುದಿತ್ತು. ಈಗ ಅವಕಾಶ ಇಲ್ಲದ ಕಾರಣ ನಗರ ಪ್ರದೇಶಗಳಲ್ಲಿರುವಂತೆ ಕಸ ಸಂಗ್ರಹ ವಾಹನ ಖರೀದಿಗೆ ಚಿಂತನೆ ನಡೆಸಲಾಗಿದೆ. ಜಿಲ್ಲಾ ಪಂಚಾಯಿತಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದೇವೆ’ ಎಂದು ಹರದನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ವಿದ್ಯಾರ್ಥಿ ನಿಲಯದ ಸಮೀಪವೂಅಶುಚಿತ್ವ

ಗ್ರಾಮದಲ್ಲಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದಸರ್ಕಾರಿ ಗಿರಿಜನ ಮೆಟ್ರಿಕ್‌ ಪೂರ್ವ ಬಾಲಕಿಯರವಿದ್ಯಾರ್ಥಿನಿಲಯದ ಸುತ್ತಮುತ್ತ,ಹಾಸ್ಟೆಲ್‌ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಹಳ್ಳದಲ್ಲಿ ಗಿಡಗಂಟಿಗಳು ಬೆಳೆದಿದೆ. ತ್ಯಾಜ್ಯ ಎಸೆಯಲಾಗಿದೆ. ಅಲ್ಲದೆ,ಇಲ್ಲಿಯೇ ಬಹಿರ್ದೆಸೆಗೆ ಜನರು ಮುಂದಾಗುತ್ತಾರೆ. ಹಳ್ಳದಲ್ಲಿ ಗಲೀಜು ನೀರು ತುಂಬಿಕೊಂಡಿದೆ. ಎಲ್ಲಿ ಸಾಂಕ್ರಾಮಿಕ ರೋಗ ಹರಡುವುದೋ ಎಂಬ ಭಯದಲ್ಲಿ ವಿದ್ಯಾರ್ಥಿನಿಯರಿದ್ದಾರೆ.

‘ಸುಮಾರು 20 ಅಡಿ ಆಳವಿರುವ ಈ ಗುಂಡಿಯನ್ನು ಮುಚ್ಚಿ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಜನರು ಬಹಿರ್ದೆಸೆಗೆ ಬರುವುದನ್ನು ತಡೆಯಲು ಗ್ರಾಮ ಪಂಚಾಯಿತಿ ಆಡಳಿತ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದಳು.

‘ಲೋಕೋಪಯೋಗಿ ಇಲಾಖೆಯು ರಸ್ತೆ ವಿಸ್ತರಣೆ ಸಂದರ್ಭದಲ್ಲಿ ವಿದ್ಯಾರ್ಥಿನಿಲಯ ಸಮೀಪದ ಗುಂಡಿ ಮುಚ್ಚಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಸುಂದರರಾಜು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT