ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾಕಾರ ಮಳೆ: ಚಾಮರಾಜನಗರದಲ್ಲಿ ಮನೆ ಗೋಡೆ ಕುಸಿದು ಯುವಕ ಸಾವು

Last Updated 5 ಸೆಪ್ಟೆಂಬರ್ 2022, 4:30 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಧಾರಾಕಾರ ಮಳೆಯಾಗಿದ್ದು, ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಮೃತ ಪಟ್ಟಿದ್ದಾರೆ.

ಗ್ರಾಮದ ಮೂರ್ತಿ (33) ಮೃತಪಟ್ಟವರು. ಅವರ ತಾಯಿ ದೇವಜಮ್ಮ ಹಾಗೂ ತಂಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾನುವಾರ ರಾತ್ರಿ 10 ಗಂಟೆಯ‌ ನಂತರ ಬಿರುಸಿನ ಮಳೆಯಾಗಿದೆ. ಮನೆಯ ಮುಂಭಾಗದಲ್ಲಿ ಮೂರ್ತಿ ಹಾಗೂ ದೇವಜಮ್ಮ ಮಲಗಿದ್ದರು. ಮಳೆ ಜೋರಾಗಿದ್ದರಿಂದ ಮನೆಯ ಒಳಭಾಗದಲ್ಲಿ ಮಲಗಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದು ಗೋಡೆ ಕುಸಿದಿದೆ. ತಕ್ಷಣವೇ‌ ಮೂರ್ತಿ ತಾಯಿಯನ್ನು ಹಿಂದಕ್ಕೆ ತಳ್ಳಿದರು. ಆದರೆ ಅವರು ಗೋಡೆಯಡಿ ಸಿಲುಕಿ ಮೃತಪಟ್ಟರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೂರ್ತಿ ಅವರದ್ದು ಬಡ ಕುಟುಂಬವಾಗಿದ್ದು, ಕೂಲಿ ಮಾಡಿ‌ಜೀವನ ಸಾಗಿಸುತ್ತಿದ್ದರು. ಮನೆ ಪೂರ್ಣ ಪ್ರಮಾಣದಲ್ಲಿ ಹಾಳಾಗಿದ್ದು, ಉಳಿದುಕೊಳ್ಳುವುದಕ್ಕೆ ಜಾಗ ಇಲ್ಲದಂತಾಗಿದೆ. ಸರ್ಕಾರ ಕುಟುಂಬಕ್ಕೆ ತಕ್ಷಣವೇ ಪರಿಹಾರ ‌ಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮಗಳಿಗೆ ನುಗ್ಗಿದ ನೀರು: ಮೂರು‌ ದಿನಗಳ ಬಿಡುವಿನ ಬಳಿಕ ಭಾನುವಾರ ರಾತ್ರಿ ಸುರಿದಿರುವ ಧಾರಾಕಾರ ಮಳೆಗೆ ಹಲವು ತಾಲ್ಲೂಕಿನ ಜ್ಯೋತಿಗೌಡನಪುರ, ಹೆಬ್ಬಸೂರು ಸೇರಿದಂತೆ ಹಲವು ಗ್ರಾಮಗಳಿಗೆ‌‌ ನೀರು‌ ನುಗ್ಗಿ ಮನೆಗಳು ಜಲಾವೃತವಾಗಿವೆ.

ಚಾಮರಾಜನಗರ ಕಸಬಾ ಹೋಬಳಿಯಲ್ಲಿ 12.7ಸೆಂ.ಮೀನಷ್ಟು ಮಳೆಯಾಗಿದೆ. ಜಿಲ್ಲಾ ಕೇಂದ್ರದ ತಗ್ಗು ಪ್ರದೇಶಗಳಿಗೂ ನೀರು ನುಗ್ಗಿದೆ. ಇಂದಿರಾ ಕ್ಯಾಂಟೀನ್ ಜಲಾವೃತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT