ಗುಂಡ್ಲುಪೇಟೆ: ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ದೇವವರ ಬ್ರಹ್ಮ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.

ದೇವಾಲಯವನ್ನು ತಳಿರು ತೋರಣ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಲಾಗಿತ್ತು. ಮಾರ್ಚ್ 12ರರಿಂದಲೇ ದೇವಾಲಯದಲ್ಲಿ ಪ್ರಧಾನ ಅರ್ಚಕ ಗೋಪಾಲ ಕೃಷ್ಣ ಭಟ್ಟರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು. ಶನಿವಾರ ಸಂಜೆ ಅಲಂಕೃತ ಅಡ್ಡ ಪಲಕ್ಕಿಯಲ್ಲಿ ಉತ್ಸವ ಮೂರ್ತಿಯನ್ನು ಮಂಗಳವಾದ್ಯ, ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮಾಡಲಾಯಿತು. ಗೋಪಾಲಪುರ, ಕಣ್ಣೇಗಾಲ, ಕುಣಗಹಳ್ಳಿ, ಹೊನ್ನೇಗೌಡನಹಳ್ಳಿ ಇತರೆ ಗ್ರಾಮಗಳ ಭಕ್ತರು ಕಾಡಿನ ಹಂಬು, ಬಿದಿರು ಬೊಂಬು, ಫಲಪುಷ್ಪ, ಪಣತ್ತಾರುಗಳಿಂದ ರಥವನ್ನು ಸಿದ್ಧಗೊಳಿಸಿದ್ದರು.

ಭಾನುವಾರ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿದ್ದ ಭಕ್ತರು ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ಮಂಗಳವಾದ್ಯ, ತಮಟೆ, ಸತ್ತಿಗೆ ಸುರಪಾನಿ, ಕಲಾ ತಂಡಗಳೊಂದಿಗೆ ಗೋವಿಂದ ನಾಮ ಸ್ಮರಣೆಯೊಂದಿಗೆ ದೇವಾಲಯದ ಸುತ್ತಲೂ ಒಂದು ಸುತ್ತು ಪ್ರದಕ್ಷಿಣೆ ಹಾಕಿಸಿ, ಹಸಿರು ಚಪ್ಪರದಡಿ ಇರಿಸಿ ಪೂಜೆ ಸಲ್ಲಿಸಲಾಯಿತು.

ನಂತರ ಅಲಂಕೃತಗೊಂಡಿದ್ದ ರಥದಲ್ಲಿ ಉತ್ಸವಮೂರ್ತಿ ಇರಿಸಿ ಪೂಜೆ, ಮಹಾ ಮಂಗಳಾರತಿ ಅರ್ಚಕರು ನೆರವೇರಿಸಿದರು. ತಹಶೀಲ್ದಾರ್ ಎಂ.ಎಸ್.ತನ್ಮಯ್ ರಥಕ್ಕೆ ಪೂಜೆ ಸಲ್ಲಿಸಿ, ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಎಚ್.ಎಂ.ಗಣೇಶ್ಪ್ರಸಾದ್, ಮಾಜಿ ಸಚಿವೆ ಗೀತಮಹದೇವಪ್ರಸಾದ್ ಪೂಜೆ ಸಲ್ಲಿಸಿದರು. ಹಗ್ಗದ ಬದಲು ಒತ್ತಗದ ಹಂಬಿನಿಂದ ಭಕ್ತರು ಹರ್ಷೋದ್ಗಾರದೊಂದಿಗೆ ರಥವನ್ನು ಎಳೆದು ಸಾಗಿದರು. ಒಂದು ಸುತ್ತು ಪ್ರದಕ್ಷಿಣೆ ನಂತರ ರಥೋತ್ಸವ ಕೊನೆಗೊಂಡಿತು.

ಉಪಾಹಾರ, ಮಜ್ಜಿಗೆ, ಪಾನಕ ವಿತರಣೆ: ಹಂಗಳದ ಕಿಲಕೆರೆ, ಸೋನಾಪುರದ ಬಸವೇಶ್ವರ ದೇವಾಲಯ, ಅರಣ್ಯ ಇಲಾಖೆ ಚೆಕ್ಪೋಸ್ಟ್ ಮತ್ತು ದೇವಾಲಯದ ಮೆಟ್ಟಿಲುಗಳು, ರಥದ ಮನೆ ಮುಂತಾದೆಡೆಗಳಲ್ಲಿ ಪ್ರತಿ ವರ್ಷದಂತೆ ದಾನಿಗಳು ಮತ್ತು ಪೊಲೀಸ್ ಇಲಾಖೆ ಯಿಂದ ಉಪಾಹಾರ, ಮೊಸರನ್ನ, ಮಜ್ಜಿಗೆ, ಪಾನ ವಿತರಣೆ ನಡೆಯಿತು. ಬಿಸಿಲ ಝಳ ಹೆಚ್ಚಿದ್ದ ಹಿನ್ನೆಲೆಯಲ್ಲಿ ಮಜ್ಜಿಗೆ, ಪಾನಕ ಸೇವಿಸಿ ಭಕ್ತರು ದಾಹ ತಣಿಸಿಕೊಂಡರು.

ಕೆಎಸ್ಆರ್ಟಿಸಿಯಿಂದ ಹೆಚ್ಚುವರಿ ಬಸ್: ರಥೋತ್ಸವಕ್ಕೆ ಬರುವ ಭಕ್ತರನ್ನು ಕರೆದೊಯ್ಯಲು ಅರಣ್ಯ ಇಲಾಖೆ ಚೆಕ್ಪೋಸ್ಟ್ ನಿಂದ ಹೆಚ್ಚುವರಿಯಾಗಿ 30 ಮತ್ತು ಗುಂಡ್ಲುಪೇಟೆಯಿಂದ ಅರಣ್ಯ ಇಲಾಖೆ ಚೆಕ್ ಪೋಸ್ಟ್ ವರೆಗೆ 10 ಬಸ್ಗಳ ಸಂಚಾರದ ವ್ಯವಸ್ಥೆಯನ್ನು ಕೆಎಸ್ಆರ್ಟಿಸಿಯಿಂದ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.