ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸದಲ್ಲಿ ಮೀಸಲಾತಿ: ರೇವಣ್ಣ

Published 5 ಸೆಪ್ಟೆಂಬರ್ 2023, 12:38 IST
Last Updated 5 ಸೆಪ್ಟೆಂಬರ್ 2023, 12:38 IST
ಅಕ್ಷರ ಗಾತ್ರ

ಹೊಳೆನರಸೀಪುರ: ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ, ಸಮಾಜದ ಏಳಿಗೆಗೆ ಶ್ರಮಿಸುವ ಶಿಕ್ಷಕರ ಮಕ್ಕಳಿಗೆ ವೈದ್ಯಕೀಯ, ಎಂಜಿನಿಯರಿಂಗ್ , ಉನ್ನತ ವ್ಯಾಸಂಗಕ್ಕೆ ಶೇ 10 ಮೀಸಲಾತಿ ನೀಡಬೇಕು , ಶಿಕ್ಷಕರ ಅನಾರೋಗ್ಯ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.

ಹೊಳೆನರಸೀಪುರ ಶಿಕ್ಷಕರ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಅವರು ಮತನಾಡಿದರು.


ದೇಶಕ್ಕೆ ಸ್ವಾತಂತ್ರ್ಯಬಂದು 77 ವರ್ಷಕಳೆದರೂ ಹಳ್ಳಿಮಕ್ಕಳ ಉನ್ನತ ವಿದ್ಯಾಭ್ಯಾಸದ ಕನಸು ಇನ್ನೂ ನನಸಾಗಿಲ್ಲ.  ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ 1200 ಪ್ರೌಢಶಾಲೆ, 650 ಪಿಯು ಕಾಲೇಜು, 250 ಪ್ರಥಮ ದರ್ಜೆ ಕಾಲೇಜುಗಳನ್ನು ನೀಡಿ, ಕಟ್ಟಡ, ಶಿಕ್ಷಕರನ್ನೂ  ನೀಡಿ, ಶಿಕ್ಷಣ ಇಲಾಖೆಗೆ ಕಾಯಕಲ್ಪ ನೀಡಿದ್ದರು ಎಂದರು.

ಪ್ರಧಾನ ಭಾಷಣ ಮಾಡಿದ ತಹಶೀಲ್ದಾರ್ ಕೃಷ್ಣಮೂರ್ತಿ, ಶಿಕ್ಷಕರಿಗಿರುವ ಗೌರವ ಎಂದೂ ಕಡಿಮೆ ಆಗದಂತೆ ನೆಡೆದುಕೊಳ್ಳಬೇಕಾದ್ದದು ಎಲ್ಲ ಶಿಕ್ಷಕರ ಕರ್ತವ್ಯ ಎಂದರು. ನಿವೃತ್ತ ಶಿಕ್ಞಕರನ್ನು ಶಾಸಕ ರೇವಣ್ಣ ಸನ್ಮಾನಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿಯ ಸದಸ್ಯರು ನಾಡಗೀತೆ ಮತ್ತು ರೈತಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ಇ.ಓ. ಗೋಪಾಲ್, ತಹಶೀಲ್ದಾರ್ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಯತೀಶ್, ಜವರೇಗೌಡ, ದೇವರಾಜ್ ಸುಜತ್ ಅಲಿ ಇದ್ದರು.

ಹೊಳೆನರಸೀಪುರ ಶಿಕ್ಷಕರ ದಿನಾಚರಣೆಯ ಸಭಾಂಗಣಕ್ಕೆ ನಿವೃತ್ತ ಶಿಕ್ಷಕ ಕಟ್ಟೆಬೆಳಗುಲಿ ಪುಟ್ಟರಾಜಪ್ಪ ನಡೆಯಲಾಗದ ಕಾರಣ  ವಾಹನದಲ್ಲೇ ಕುಳಿತಿರುವ ವಿಷಯ ತಿಳಿದ ಶಾಸಕ ರೇವಣ್ಣ ಕಾರಿನ ಬಳಿ ತೆರಳಿ ಆರೋಗ್ಯ ವಿಚಾರಿಸಿ ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಸುಜತ್‍ಅಲಿ ಇದ್ದರು.
ಹೊಳೆನರಸೀಪುರ ಶಿಕ್ಷಕರ ದಿನಾಚರಣೆಯ ಸಭಾಂಗಣಕ್ಕೆ ನಿವೃತ್ತ ಶಿಕ್ಷಕ ಕಟ್ಟೆಬೆಳಗುಲಿ ಪುಟ್ಟರಾಜಪ್ಪ ನಡೆಯಲಾಗದ ಕಾರಣ  ವಾಹನದಲ್ಲೇ ಕುಳಿತಿರುವ ವಿಷಯ ತಿಳಿದ ಶಾಸಕ ರೇವಣ್ಣ ಕಾರಿನ ಬಳಿ ತೆರಳಿ ಆರೋಗ್ಯ ವಿಚಾರಿಸಿ ಸನ್ಮಾನಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಸುಜತ್‍ಅಲಿ ಇದ್ದರು.

‘ರಾಜಕೀಯ ಬಡ್ಡಿ ಚೀಟಿ ಬೇಡ’

‘ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಕಿರಣ್ ನಿನ್ನೆ ಹೃದಯಾಘಾತದಿಂದ ನಿಧನರಾದ್ದು ನನಗೆ ನೋವಾಗಿದೆ. ಅವರ ಕುಟುಂಬಕ್ಕೆ ಅಗತ್ಯ ಸಹಕಾರ ನೀಡುತ್ತೇನೆ. ಆದರೆ ಕಿರಣ್ ಸಾವಿನಲ್ಲಿ ಕೆಲವು ಶಿಕ್ಷಕರು  ರಾಜಕೀಯ ಬಣ್ಣ ನೀಡಿದ್ದು ಅತ್ಯಂತ ವಿಷಾದದ ಸಂಗತಿ. ಇಂತಹ ವಿಷಯದಲ್ಲಿ ರಾಜಕೀಯ ಮಾಡಿ ಅಧಿಕಾರಿಗಳನ್ನು ಹೆದರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ಶಿಕ್ಷಕರ ವಿರುದ್ಧ ತನಿಖಾದಳದಿಂದ ತನಿಖೆ ಮಾಡಿಸುತ್ತೇನೆ. ಕಿರಣ್ ಸಾವಿಗೆ ಕಾರಣ ಪತ್ತೆ ಹೆಚ್ಚಿ. ತಪಿತಸ್ಥರಿದ್ದರೆ ಖಂಡಿತ ಶಿಕ್ಷೆ ಕೊಡಿಸುತ್ತೇನೆ ’ ಎಂದು ಶಾಸಕ ರೇವಣ್ಣ ಹೇಳಿದರು. ಸರ್ಕಾರಿ ಶಾಲೆಯ ಬಹುತೇಕ ಶಿಕ್ಷಕರು ಅತ್ಯುತ್ತಮವಾಗಿ ಬೋಧಿಸುತ್ತಾರೆ. ಬೆರಳೆಣಿಕೆಯಷ್ಟು ಶಿಕ್ಷಕರು ಬಡ್ಡಿ ಚೀಟಿ ವ್ಯವಹಾರ ನಡೆಸುತ್ತಾರೆ ಪರಿಶಿಷ್ಟ ಸಮುದಾಯದ ಮಕ್ಕಳು ಕಲಿಯುವ ಶಾಲೆಗಳಲ್ಲಿ ಶಿಕ್ಷಕರು ಪಾಠಮಾಡದೆ ರಾಜಕೀಯ ಮಾಡಿಕೊಂಡಿದ್ದು ಇಂಥವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಎಂದು ಬಿಇಒಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT