ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಗ್ರಾಮದೇವತೆ ಹಬ್ಬ ಮುಕ್ತಾಯಕ್ಕೆ ಕೆಲವೇ ದಿನಗಳು ಇರುವಾಗ ಆನೆ, ಕುದುರೆ ಸಾಂಪ್ರದಾಯಿಕ ಪೂಜಾ ವೈಭವಗಳು ಶನಿವಾರ ತಡ ರಾತ್ರಿವರೆಗೂ ಜರುಗಿದವು.

ಹಬ್ಬದ ಸಂಭ್ರಮದಲ್ಲಿ ಇರುವಾಗಲೇ ರಾತ್ರಿ ‘ಮದಗಜ’ವೊಂದು ಏಕಾಏಕಿ ನುಗ್ಗಿರುವುದನ್ನು ಕಂಡು ಭಕ್ತರು ಬೆಚ್ಚಿಬಿದ್ದರು. ದೊಂದಿಗಳ ಬೆಳಕಿನಲ್ಲಿ ‘ಆನೆ’ಯನ್ನು ಓಡಿಸುವ ಕೈಂಕರ್ಯಕ್ಕೆ ಮುಂದಾದರು.ಸಹಸ್ರಾರು ಭಕ್ತರು ಗ್ರಾಮದ ಬೀದಿ, ಓಣಿ, ಬಡಾವಣೆಗಳಲ್ಲಿ ನಿಂತು ಕೂಗು, ಕೇಕೆಗಳೊಂದಿಗೆ ಆನೆಯ ಹಿಂದೆ ಸಾಗಿದರು. ಭಕ್ತ ಪಡೆಯನ್ನು ಕಾಪಾಡುವಂತೆ ಚಾಮುಂಡಾಂಬೆಗೆ ಮೊರೆಯಿಡುವ ಪದ್ಧತಿಯನ್ನೂ ಆಚರಿಸಿದರು.

ಈ ಸಮಯದಲ್ಲಿ ವಿರಾಜಮಾನಳಾದ ತಾಯಿ ಚಾಮುಂಡಾಂಬೆ ಪಲ್ಲಕ್ಕಿಯ ಮೇಲೆ ಇರಿಸಿದ್ದ ಕುದುರೆಯನ್ನು ಏರಿ ಆನೆಯನ್ನು ಓಡಿಸಲು ಮುಂದಾದ ಕ್ಷಣವನ್ನು ಗ್ರಾಮಸ್ಥರು ಜತನದಿಂದ ಕಣ್ತುಂಬಿ ಕೊಂಡರು.

‘ಐದು ವರ್ಷಗಳಿಗೆ ಒಮ್ಮೆ ನಡೆಯುವ ಆನೆ ಕುದುರೆ ಉತ್ಸವಗಳ ಆಟಗಳು ನೈಜವಾಗಿ ಮೂಡಿ ಬಂದವು. ಮಜಗಜವನ್ನು ಸದೆಬಡಿದ ದೇವಿಯನ್ನು ಕಂಡು ಭಕ್ತರ ಸಡಗರ ಮಗಿಲು ಮುಟ್ಟಿತು. ಸಹಸ್ರಾರು ಭಕ್ತರು ವಿಜಯಿಗಳಾಗಿ ಸಾಗುವ ದೃಶ್ಯ ಪುರಾಣ ಕಾಲದ ವೈಭವವನ್ನು ಸ್ಮರಿಸುವಂತೆ ಮಾಡಿದವು. ಸಂಪ್ರೀತಗೊಂಡ ಜನರು ಅಮ್ಮನಿಗೆ ಫಲ ಪುಷ್ಪಗಳನ್ನು ಅರ್ಪಿಸಿ, ಪೂಜಾ ಕೈಂಕರ್ಯದಲ್ಲಿ ಭಾಗಿಯಾದರು’ ಎಂದು ಆಗಮಿಕರು ಹೇಳಿದರು.

ವಿದ್ಯುತ್ ಅಲಂಕಾರದ ಪಲ್ಲಕ್ಕಿಯನ್ನು ಭಕ್ತರು ಊರ ತುಂಬ ಹೊತ್ತು ಸಾಗಿದರು. ಮಹಿಳೆಯರು ಮತ್ತು ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಗ್ರಾಮದ ಆಚರಣೆಗಳನ್ನು ಅಚ್ಚರಿಯಿಂದ ವೀಕ್ಷಿಸಿದರು ಎಂದು ಗ್ರಾಮಸ್ಥರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.