ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಹುಂಡಿಯಲ್ಲಿ ₹1.48 ಕೋಟಿ ಸಂಗ್ರಹ

Last Updated 25 ಫೆಬ್ರುವರಿ 2021, 16:19 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಾಲಯದಲ್ಲಿ ಗುರುವಾರ ಹುಂಡಿ ಎಣಿಕೆ ನಡೆದಿದ್ದು, ಕಾಣಿಕೆ ರೂಪದಲ್ಲಿ ₹1.48 ಕೋಟಿ ಸಂಗ್ರಹವಾಗಿದೆ.

31 ಗ್ರಾಂ ಚಿನ್ನ ಹಾಗೂ 2.823 ಕೆಜಿ ಬೆಳ್ಳಿಯನ್ನೂಭಕ್ತರು ಕಾಣಿಕೆ ರೂಪದಲ್ಲಿ ಸಲ್ಲಿಸಿದ್ದಾರೆ.

ಕಳೆದ ತಿಂಗಳು 28ರಂದು ಹುಂಡಿ ಎಣಿಕೆ ನಡೆದಿತ್ತು. 28 ದಿನಗಳ ಅವಧಿಯಲ್ಲಿ ₹1.48 ಕೋಟಿ ಕಾಣಿಕೆ ಸಂಗ್ರಹವಾಗಿದೆ.

ಡಿಸೆಂಬರ್‌ನಿಂದೀಚೆಗೆ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಜನವರಿಯಿಂದ ಭಕ್ತರ ಭೇಟಿಯ ಪ್ರಮಾಣವು ಕೋವಿಡ್‌ ಪೂರ್ವ ಸ್ಥಿತಿಗೆ ತಲುಪಿದೆ.

ಕೋವಿಡ್‌ ಹಾವಳಿಗಿಂತಲೂ ಮೊದಲು ಪ್ರತಿ ತಿಂಗಳು ಹುಂಡಿಯಲ್ಲಿ ಸರಾಸರಿ ₹1.50 ಕೋಟಿಯಷ್ಟು ಹಣ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT