ಗುರುವಾರ , ಅಕ್ಟೋಬರ್ 29, 2020
21 °C
99 ಪ್ರಕರಣ, 116 ಮಂದಿ ಸೋಂಕು ಮುಕ್ತ, ಒಂದು ಸಾವು

ಚಾಮರಾಜನಗರ: ಮೃತಪಟ್ಟ ಸೋಂಕಿತರ ಸಂಖ್ಯೆ ಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಕೋವಿಡ್‌ನಿಂದಾಗಿ ಒಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕು ದೃಢಪಟ್ಟ 100 ಮಂದಿ ಮೃತಪಟ್ಟಂತೆ ಆಗಿದೆ. 72 ಮಂದಿ ಕೋವಿಡ್‌ ಕಾರಣದಿಂದಲೇ ಮೃತಪಟ್ಟಿದ್ದರೆ, 28 ಮಂದಿಗೆ ಸೋಂಕು ಇದ್ದರೂ, ಬೇರೆ ಕಾರಣಗಳಿಂದ ಕೊನೆಯುಸಿರೆಳೆದಿದ್ದಾರೆ. 

ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ 55 ವರ್ಷದ ಪುರುಷ ಅ.5ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮಂಗಳವಾರ ಮೃತಪಟ್ಟಿದ್ದಾರೆ.‌

ಬುಧವಾರ 99 ಹೊಸ ಪ‍್ರಕರಣಗಳು ದೃಢಪಟ್ಟಿದ್ದರೆ, 116 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಹೊಸ 99 ಪ್ರಕರಣಗಳಲ್ಲಿ ಆರು ಪ್ರಕರಣ ಮೈಸೂರು ಹಾಗೂ ಒಂದು ಬೆಂಗಳೂರಿನಲ್ಲಿ ದೃಢಪಟ್ಟಿದೆ. 

ಜಿಲ್ಲೆಯಲ್ಲಿ ಈವರೆಗೆ 4,647 ಪ್ರಕರಣಗಳು ವರದಿಯಾಗಿವೆ. 3,765 ಮಂದಿ ಗುಣಮುಖರಾಗಿದ್ದಾರೆ, ಸದ್ಯ 782 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 315 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 38 ಮಂದಿ ಐಸಿಯುನಲ್ಲಿದ್ದಾರೆ. ಉಳಿದವರು ಕೋವಿಡ್‌ ಆಸ್ಪತ್ರೆ ಹಾಗೂ ಕೇರ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಬುಧವಾರ 1,147 ಮಂದಿಯ ಗಂಟಲು ದ್ರವದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 780 ಪರೀಕ್ಷೆಗಳನ್ನು ಆರ್‌ಟಿಪಿಸಿಆರ್‌, 367 ಪರೀಕ್ಷೆಗಳನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಕಿಟ್‌ ಮೂಲಕ ಮಾಡಲಾಗಿದೆ. 1055 ಮಂದಿಯ ವರದಿಗಳು ನೆಗೆಟಿವ್‌ ಬಂದಿದೆ. 92 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು