ಹನೂರು: ನಾಗಮೋಹನ್ ದಾಸ್ ನೀಡಿರುವ ಒಳಮೀಸಲಾತಿ ವರದಿಯಲ್ಲಿ ಹಂಚಿಕೆ ವಿಚಾರವಾಗಿ ರೋಸ್ಟರ್ ಬಿಂದುವಿನಲ್ಲಿ ಬಲಗೈ ಹೊಲಯ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಮಾರ್ಚ್ 16 ರಂದು ಬಲಗೈ ಸಮುದಾಯದಿಂದ ಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರು ತಿಳಿಸಿದರು.

ಜಿಲ್ಲಾ ಮುಖಂಡ ವಾಸು ಮಾತನಾಡಿ, ಹನೂರು ಪಟ್ಟಣದಲ್ಲಿ ಮಹದೇಶ್ವರ ಕ್ರೀಡಾಂಗಣದಿಂದ ಮೆರವಣಿಗೆ ಹೊರಟು ತಹಶೀಲ್ದಾರ್ ಕಚೇರಿಗೆ ಬಂದು ಮನವಿ ನೀಡಲಾಗುವುದು. ಒಳ ಮೀಸಲಾತಿಯ ವಿಚಾರವಾಗಿ ನಮ್ಮ ಬಲಗೈ ಹೊಲಯ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು, ತಾಲೂಕಿನಲ್ಲಿ ಪ್ರತಿಭಟನೆ ನಡೆಸಿದ್ದೇವೆ. ಮಾರ್ಚ್ 16ರಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ರಾಮಸಮುದ್ರ ಬಾಬು ಕೊಳ್ಳೇಗಾಲದ ಶಂಕರ್ ಚೇತನ್, ಮಂಜುನಾಥ್, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಸಂಪತ್ ಕುಮಾರ್, ಪ್ರಜಾ ವಿಮೋಚನಾ ಚಳುವಳಿಯ ಅಧ್ಯಕ್ಷ ಮಹಾಲಿಂಗ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಮಹೇಶ್, ಗೌತಮ್ ಶಾಲೆಯ ಎಸ್ ರವೀಂದ್ರ, ಅಜ್ಜಿಪುರ ಬೈರಾಜ್, ಹನೂರು ಮುಖಂಡರಾದ ಕಿರಣ, ನಂಜಪ್ಪ, ಮಹದೇವ, ಸುರೇಶ್, ದಲಿತ ಸಮುದಾಯದ ಮುಖಂಡರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.