ಹಂಪಾಪುರ: ಕೆ.ಆರ್.ಪುರ ಗ್ರಾಮಸ್ಥರು ಕಬಿನಿ ಹಿನ್ನೀರಿಗೆ ಶನಿವಾರ ತೆರಳಿ ಹಿನ್ನೀರಿನಲ್ಲಿ ಶ್ಯಾಮ ಆಚರಣೆಯಿಂದ ಹರಡಿದ್ದ ತ್ಯಾಜ್ಯ ಸ್ವಚ್ಛಗೊಳಿಸಿದ್ದಾರೆ.

ಅಂತರಸಂತೆ ಹೋಬಳಿಯ ಕೆ.ಆರ್.ಪುರ ಗ್ರಾಮಸ್ಥರು ಎರಡು ವರ್ಷಕ್ಕೊಮ್ಮೆ ಹಿನ್ನೀರಿಗೆ ತೆರಳಿ ಮರಿಗಳನ್ನು ಬಲಿ ನೀಡಿ, ಸಾವಿರಾರು ಮಂದಿಗೆ ಊಟ ಹಾಕುವುದರ ಮೂಲಕ ಶ್ಯಾಮ ಆಚರಣೆ ಮಾಡಿದ್ದು. ಇದರಿಂದ ಅಪಾರ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗಿದ್ದು, ಜಲಾಶಯ ಕಲುಷಿತಗೊಳ್ಳುತ್ತದೆ ಎಂದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಶನಿವಾರ ‘ಕಬಿನಿ ಹಿನ್ನೀರು ಕಲುಷಿತ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಗೊಂಡಿತ್ತು.

ಇದರಿಂದ ಎಚ್ಚತ್ತು, ಗ್ರಾಮದ ಯಜಮಾನರ ನಿರ್ದೇಶನದಂತೆ ಪ್ರತಿ ಮನೆಗೆ ಒಬ್ಬರಂತೆ ತೆರಳಿ ಈಚೆಗೆ ಆಚರಿಸಿದ್ದ ಶ್ಯಾಮದ ತ್ಯಾಜ್ಯ ತೆರವಿಗೊಳಿಸಿದ್ದಾರೆ.

ಗ್ರಾಮದ ಮುಖಂಡ ಮಗ್ಗೆ ಸುಂದ್ರ ಮಾತನಾಡಿ, ‘ಗ್ರಾಮದಲ್ಲಿ ಎಂದಿನಂತೆ ಆಚರಣೆ ಮಾಡಲಾಗಿತ್ತು. ‘ಪ್ರಜಾವಾಣಿ’ ಪತ್ರಿಕೆ ವರದಿ ಗಮನಿಸಿ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಸ್ವಚ್ಛಗೊಳಿಸಿದ್ದೇವೆ’ ಎಂದರು.

ಯಜಮಾನರಾದ ಸ್ವಾಮಿ, ರಾಜು, ತಿಮ್ಮಯ್ಯ, ಪ್ರವೀಣ, ನಿಂಗರಾಜು, ಕಾಳಸ್ವಾಮಿ, ಸ್ವಾಮಿ, ರಮೇಶ, ಚಿಕ್ಕಯಜಮಾನ ಲೋಕೇಶ್ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-38-162386711

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.