ಚಾಮರಾಜನಗರ: ತಾಲ್ಲೂಕಿನ ಕೋಡಿಮೋಳೆ ಕೆರೆಗೆ ಮಂಗಳವಾರ ನಂಜನಗೂಡು ತಾಲ್ಲೂಕಿನ ಸುತ್ತೂರು ಬಳಿಯ ಕಪಿಲಾ ನದಿಯಿಂದ ನೀರು ಹರಿಯಿತು.
ಕುಡಿಯುವ ನೀರಿನ ಉದ್ದೇಶದ ಸುತ್ತೂರು ಏತ ನೀರಾವರಿ ಯೋಜನೆ ಯಡಿ ನೀರು ತುಂಬಲಿರುವ
ಚಾಮರಾಜನಗರ ಹಾಗೂ ಯಳಂದೂರು ತಾಲ್ಲೂಕುಗಳ 22 ಕೆರೆಗಳ ಪೈಕಿ ಒಂದಾಗಿರುವ ಕೋಡಿಮೋಳೆ ಕೆರೆಯವರೆಗೆ ಪೈಪ್ ಲೈನ್ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ.
ಸುತ್ತೂರು ಬಳಿಯಿಂದ ನಂಜನ ಗೂಡು ತಾಲ್ಲೂಕಿನ ತಗಡೂರು ಕೆರೆ ಹಾಗೂ ತಾಲ್ಲೂಕಿನ ಉಮ್ಮತ್ತೂರು ದೊಡ್ಡಕೆರೆಗೆ ಈಗ ನೀರು ಹರಿಸ ಲಾಗುತ್ತಿದೆ.
22 ಕೆರೆಗಳ ಪೈಕಿ 10 ಕೆರೆ ಗಳಿಗೆಯೋಜನೆಯ ಮೊದಲ ಹಂತದಲ್ಲಿ ನೀರು ಹರಿಸಬೇಕಿದೆ. ಆದರೆ, ಸದ್ಯಕ್ಕೆ ಉಮ್ಮತ್ತೂರು ಕೆರೆ ಯವರೆಗೆ ಮಾತ್ರ ನೀರು ಹರಿಸಲು ಕಾವೇರಿ ನೀರಾವರಿ ನಿಗಮ ನಿರ್ಧರಿ ಸಿದೆ.ಮುಂದಿನ ಹಂತದಲ್ಲಿ ನಗರಕ್ಕೆ ಸಮೀಪದ ದೊಡ್ಡರಾಯಪೇಟೆ ಕೆರೆ, ಕೋಡಿಮೋಳೆ ಕೆರೆಗಳಿಗೆ ನೀರು ಹರಿಯಬೇಕಿದೆ.
ಕೋಡಿಮೋಳೆ ಕೆರೆಯವರೆಗೆ ಪೈಪ್‌ಲೈನ್ ಕಾಮಗಾರಿ ಮುಕ್ತಾಯ ವಾಗಿರುವುದರಿಂದ, ಸೋರಿಕೆ ಇದೆಯೇ ಎಂಬುದನ್ನು ಪತ್ತೆ ಹಚ್ಚುವುದಕ್ಕಾಗಿ ಮಂಗಳವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಪ್ರಾಯೋಗಿಕ ವಾಗಿ ನೀರು ಹರಿಸಿದ್ದಾರೆ.
ಸುತ್ತೂರು ಬಳಿಯಿಂದ ಪಂಪ್‌ಗಳ ಮೂಲಕ ನಂಜನಗೂಡು ತಾಲ್ಲೂಕಿನ ಚುಂಚನಕಟ್ಟೆಗೆ ನೀರೆತ್ತಲಾಗುತ್ತಿದೆ. ಅಲ್ಲಿ ನೀರಿನ ತೊಟ್ಟಿ ನಿರ್ಮಿಸಲಾಗಿದ್ದು, ಅಲ್ಲಿಂದ ಉಮ್ಮತ್ತೂರು ದೊಡ್ಡಕೆರೆಗೆ ಒಂದು ಪೈಪ್‌ಲೈನ್ ಹಾಗೂ ಕೋಡಿ ಮೋಳೆ ಕೆರೆಗೆ ಇನ್ನೊಂದು ಪೈಪ್‌ಲೈನ್ ಹಾಕಲಾಗಿದೆ. ಅಲ್ಲಿಂದ ಗುರುತ್ವಾಕರ್ಷಣೆ ಶಕ್ತಿಯ ಮೂಲಕ ನೀರು ಕೆರೆಗಳಿಗೆ ಹರಿಯುತ್ತದೆ.
‘ಸುತ್ತೂರು ಏತ ನೀರಾವರಿ ಯೋಜನೆಯಲ್ಲಿ ಒಟ್ಟು 35 ಕಿ.ಮೀ. ಉದ್ದದ ಪೈಪ್‌ಲೈನ್ ಅಳವಡಿಸಲಾ ಗಿದ್ದು, ಕೋಡಿಮೋಳೆ ಕೆರೆಯನ್ನು ಸಂಪರ್ಕಿಸುವ ಪೈಪ್‌ಲೈನ್ ಅತಿ ಹೆಚ್ಚು ಉದ್ದದ ಪೈಪ್‌ಲೈನ್ ಆಗಿದೆ. ಪೈಪ್‌ಲೈನ್‌ನಲ್ಲಿ ಏನಾದರೂ ಸಮಸ್ಯೆ ಇದೆಯೇ, ಸೋರಿಕೆ ಆಗುತ್ತಿದೆಯೇ ಎಂಬುದನ್ನು ಪರಿಶೀಲಿಸುವುದಕ್ಕಾಗಿ, ಮಂಗಳವಾರ ಎರಡು ಪಂಪ್‌ಗಳನ್ನು ಚಾಲೂ ಮಾಡಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ’ ಎಂದು ಕಾವೇರಿ ನೀರಾವರಿ ನಿಗಮದ ಚಾಮರಾಜನಗರ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ‘ಪ್ರಜಾ ವಾಣಿ’ಗೆ ತಿಳಿಸಿದರು.
ಕೋಡಿಮೋಳೆ ಕೆರೆಯಲ್ಲಿ ಪಂಪ್‌ಹೌಸ್ ನಿರ್ಮಿಸಲಾಗುತ್ತಿದ್ದು, ಯೋಜನೆಯ ಮುಂದಿನ ಹಂತದಲ್ಲಿ ಇಲ್ಲಿಂದ ನೀರನ್ನು ಮೇಲಕ್ಕೆತ್ತಿ ನಾಗವಳ್ಳಿ ಕೆರೆ, ನಲ್ಲೂರು ಕೆರೆ ಸೇರಿದಂತೆ ವಿವಿಧ ಕೆರೆಗಳಿಗೆ ಕಾವೇರಿ ನೀರಾವರಿ ನಿಗಮ ನೀರು ಹರಿಸಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.