ಚಾಮರಾಜನಗರ: ಆಧ್ಯಾತ್ಮಿಕತೆಯ ಮೂಲಕ ಮುಕ್ತಿ ಮಾರ್ಗ ತೋರಿದ ಯೋಗಿ ನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಅವರ ಆದರ್ಶ ತತ್ವಸಿದ್ಧಾಂತಗಳು ಅನುಕರಣೀಯ ಎಂದು ಚಾಮರಾಜನಗರ ಮತ್ತು ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಹೇಳಿದರು.

ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಯೋಗಿನಾರೇಯಣ ಯತೀಂದ್ರ ಅವರ 300ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೋಲಾರ ಜಿಲ್ಲೆಯ ಕೈವಾರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಯೋಗಿ ನಾರೇಯಣ ಯತೀಂದ್ರರು ಕೈವಾರ ತಾತಯ್ಯನಾಗಿ ಬೆಳೆದು ಸಮಾಜಕ್ಕೆ ಮಾರ್ಗದರ್ಶನ ನಿಡಿದರು. ಆರಂಭದಲ್ಲಿ ಬಳೆ ವ್ಯಾಪಾರ ಮಾಡುತ್ತಿದ್ದ ಕೈವಾರ ತಾತಯ್ಯ ವೃತ್ತಿಯಲ್ಲಿ ದೇವರನ್ನು ಕಾಣುತ್ತಲೇ ಆಧ್ಯಾತ್ಮಿಕವಾಗಿ ಪಕ್ವವಾಗುತ್ತಾ ಹೋದರು ಎಂದರು.

ಕೈವಾರ ತಾತಯ್ಯ ಅವರ ಆದರ್ಶ, ಸದ್ಗುಣಗಳು ಸಮಾಜಕ್ಕೆ ದಾರಿದೀಪವಾಗಲಿ, ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಾದ ಅಗತ್ಯತೆ ಇದೆ ಎಂದು ಮಹಮ್ಮದ್ ಅಸ್ಗರ್ ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ ಮಾತನಾಡಿ, 17-18ನೇ ಶತಮಾನದಲ್ಲಿ ಕಾಲಜ್ಞಾನಿಯಾಗಿ ಪ್ರಸಿದ್ಧಿ ಪಡೆದಿದ್ದ ಕೈವಾರ ತಾತಯ್ಯ ಸಮಾಜದಲ್ಲಿ ಹಾಸುಹೊಕ್ಕಾಗಿದ್ದ ಮೂಢನಂಬಿಕೆಗಳ ವಿರುದ್ಧ ಜನಜಾಗೃತಿ ಮೂಡಿಸಿದರು. ಅಂಧಕಾರದಲ್ಲಿ ಮುಳಗಿದ್ದವರನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಸಿ ಸಮಾಜ ಸುಧಾರಣೆಗೆ ನಾಂದಿ ಹಾಡಿದರು. ಕೈವಾರ ತಾತಯ್ಯ ಅವರ ವ್ಯಕ್ತಿತ್ವ, ಸಾಧನೆ ದಾರಿದೀಪವಾಗಿದ್ದು ಅವರ ವಿಚಾರಧಾರೆಗಳು, ಕಾಲಜ್ಞಾನದ ಮಹತ್ವ ಇಂದಿಗೂ ಪ್ರಸ್ತುತವಾಗಿದೆ ಎಂದರು.

ದಾಸ ಬಣಜಿಗ ಶೆಟ್ಟರ ಸಂಘದ ಗೌರವಾಧ್ಯಕ್ಷ ಸಿ.ವಿ.ಶ್ರೀನಿವಾಸಶೆಟ್ಟಿ ಮಾತನಾಡಿ, ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಿಸುವ ಮೂಲಕ ಸಮಾಜಕ್ಕೆ ಕೈವಾರ ತಾತಯ್ಯ ಅವರ ಕಾಲಜ್ಞಾನದ ಸಂದೇಶ ಹರಡುವ ಪ್ರಯತ್ನ ಶ್ಲಾಘನೀಯ. ಯೋಗಶಕ್ತಿ, ಅಪರಿಮಿತ ಧ್ಯಾನಶಕ್ತಿ ಹೊಂದಿದ್ದ ಕೈವಾರ ತಾತಯ್ಯ ಅವರ ತತ್ವಸಿದ್ಧಾಂತಗಳನ್ನು ಜಗತ್ತು ಪರಿಪೂರ್ಣವಾಗಿ ಅರ್ಥೈಸಿಕೊಂಡರೆ ದೇಶಗಳ ಮಧ್ಯೆ ಯುದ್ಧ, ಕಲಹಗಳು ನಡೆಯುತ್ತಿರಲಿಲ್ಲ. ಜಗತ್ತಿನಲ್ಲಿ ಶಾಂತಿ ನೆಲೆಸುತ್ತಿತ್ತು ಎಂದರು.

ಜನಸಾಮಾನ್ಯರಲ್ಲಿ ಜ್ಞಾನಸುಧೆಯನ್ನು ಪಸರಿಸಿದ ಕೈವಾರ ತಾತಯ್ಯ ಕನ್ನಡ ಮತ್ತು ತೆಲುಗಿನಲ್ಲಿ ರಚಿಸಿದ ಕೀರ್ತನೆಗಳು ಇಂದಿಗೂ ತಾಳೆಗರಿಗಳ ಮೂಲಕ ರಕ್ಷಿಸಿಡಲಾಗಿದೆ. ತಾತಯ್ಯ ಹೆಸರನ್ನು ಚಿರಸ್ಥಾಯಿಯಾಗಿಸಲು ಕೈವಾರದಲ್ಲಿ ಅವರ ಪ್ರತಿಮೆ, ಗ್ರಂಥಾಲಯ ಹಾಗೂ ದಾಸೋಹ ಭವನವನ್ನು ಬೆಂಗಳೂರಿನ ಎಂ.ಎಸ್. ರಾಮಯ್ಯ ಸಂಸ್ಥೆಯ ವತಿಯಿಂದ ಅಭಿವೃದ್ಧಿಪಡಿಸಲಾಗಿದೆ ಎಂದು ಶ್ರೀನಿವಾಸಶೆಟ್ಟಿ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಮುಖಂಡರಾದ ಚಂದ್ರಶೇಖರ್, ಪದ್ಮಾ ಪುರುಷೋತ್ತಮ್, ರಂಗರಾಮು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೆರವಣಿಗೆ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಚಾಮರಾಜೇಶ್ವರ ದೇವಾಲಯದ ಮುಂಭಾಗದಿಂದ ಜಿಲ್ಲಾಡಳಿತ ಭವನದವರೆಗೆ ಯೋಗಿನಾರೇಯಣ ಯತೀಂದ್ರರ ಅವರ ಭಾವಚಿತ್ರವನ್ನು ಬೆಳ್ಳಿಯು ಬಣ್ಣದ ಲೇಪನದ ರಥದಲ್ಲಿರಿಸಿ ಮೆರವಣಿಗೆ ನಡೆಯಿತು. ಜನಪದ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು. ಸಮಾಜದ ಗಣ್ಯರು ಭಾಗವಹಿಸಿ ಕೈವಾರ ತಾತಯ್ಯ ಅವರಿಗೆ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.