ಯಳಂದೂರು: ತಾಲ್ಲೂಕಿನ ಕಂದಳ್ಳಿ ಗ್ರಾಮದ ಮಹದೇಶ್ವರ ದೇವಾಲಯದಲ್ಲಿ ಅಮಾವಾಸ್ಯೆ ರಥೋತ್ಸವ ಅದ್ದೂರಿಯಾಗಿ ಜರುಗಿತು.

ಅಪಾರ ಸಂಖ್ಯೆಯ ಭಕ್ತರು ಶ್ರದ್ಧೆಯಿಂದ ಬೆಳ್ಳಿ ದಂಡಕ ಹೊತ್ತು ಮಾದಪ್ಪನನ್ನು ಉದ್ಘೋಷ ಮಾಡುತ್ತ, ಸ್ವಾಮಿಯ ಛತ್ರಿ , ಸತ್ತಿಗೆ ಸಮೇತ ಮಂಗಳ ವಾದ್ಯಗಳೊಂದಿಗೆ ದೇಗುಲದ ಸುತ್ತಲೂ ತೇರನ್ನು ಎಳೆದರು.

ಅಮಾವಾಸ್ಯೆ ಪೂಜೆಗಾಗಿ ದೇವಳದಲ್ಲಿ ಎರಡು ದಿನಗಳಿಂದ ಸಿದ್ಧತೆ ನಡೆಸಲಾಗಿತ್ತು. ಗುಡಿಯ ಸುತ್ತಲೂ ತಳಿರು ತೋರಣಗಳ ಸಿಂಗಾರ ಮಾಡಿ, ಮುಂಜಾನೆ ಲಿಂಗಸ್ವರೂಪಿ ಮಹದೇಶ್ವರನಿಗೆ ಪುಷ್ಪಗಳನ್ನು ಅರ್ಪಿಸಿ, ಮಹಾ ಮಂಗಳಾರತಿ ನೆರವೇರಿಸಲಾಯಿತು. ಅಭಿಷೇಕ ಪೂಜೆ ನಂತರ ಭಕ್ತರು ದೇವರ ದರ್ಶನ ಪಡೆದರು.

ಮಧ್ಯಾಹ್ನ ಉತ್ಸವ ಮೂರ್ತಿಯನ್ನು ರಥರೋಹಣ ಮಾಡಿದ ನಂತರ ಭಕ್ತರು ದೇವರಿಗೆ ಧೂಪ , ದೀಪ ಬೆಳಗಿ, ಪಂಜಿನ ಸೇವೆ ಸಲ್ಲಿಸಿದರು.

ವೃಕ್ಷ ಪೂಜೆ ನೆರವೇರಿಸಿದರು. ಅನ್ನ ಸಂತರ್ಪಣೆ ನಡೆಯಿತು.

ಹಣ್ಣು, ಕಾಯಿ ಮತ್ತು ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯಿತು. ದೇವಸ್ಥಾನದ ಆಡಳಿತ ಸಮಿತಿ ಸದಸ್ಯರು ಭಕ್ತರಿಗೆ ನೆರವಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-37-1782663650

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.