ಚಾಮರಾಜನಗರ: ಪುಸ್ತಕಗಳನ್ನು ಓದುವ ಸಂಸ್ಕೃತಿ ಹೆಚ್ಚಿಸಲು ರಾಜ್ಯದಾದ್ಯಂತ ಒಂದು ಲಕ್ಷ ಮನೆಗಳಲ್ಲಿ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ಭ್ರಮರಾಂಭ ಬಡಾವಣೆಯ ವಸುಪಾಲ್ ಪಂಡಿತ್, ವಾಸಂತಿ ವಸುಪಾಲ್ ನಿವಾಸದಲ್ಲಿ ಹಮ್ಮಿಕೊಂಡಿದ್ದ ‘ಮನೆಗೊಂದು ಗ್ರಂಥಾಲಯ’ ಕಾರ್ಯಕ್ರಮ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪುಸ್ತಕಗಳನ್ನು ಓದಿ ಎಂದು ಹೇಳುವ ಬದಲು ಓದಲು ವೇದಿಕೆ ನೀಡುವುದು ಕಾರ್ಯಕ್ರಮದ ಸದುದ್ದೇಶ. ಮನೆಗೆ ಪೂಜಾ ಕೊಠಡಿ ಎಷ್ಟು ಮುಖ್ಯವೋ ಜ್ಞಾನಾರ್ಜನೆಗೆ ಪುಸ್ತಕಗಳ ಸಂಗ್ರಹಾಲಯವೂ ಅಷ್ಟೆ ಮುಖ್ಯ. ಭಕ್ತಿಯಿಂದ ಪೂಜೆ ಮಾಡುವುದರ ಜೊತೆಗೆ ಶ್ರದ್ಧೆಯಿಂದ ಪುಸ್ತಕಗಳನ್ನು ಓದುವುದು ಮುಖ್ಯ. ಪುಸ್ತಕ ಸಂಸ್ಕೃತಿಯ ಜೊತೆಗೆ ಬೆಸೆದುಕೊಂಡರೆ, ಸಮರ್ಪಿಸಿಕೊಂಡರೆ ಜ್ಞಾನದ ಬೆಳಕು ಪಸರಿಸುತ್ತದೆ ಎಂದು ಸಲಹೆ ನೀಡಿದರು.

ಮನೆಗೊಂದು ಗ್ರಂಥಾಲಯ ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ದೊರೆತಿದೆ. ಪ್ರತಿ ಜಿಲ್ಲೆಗೆ 10 ಜನರನ್ನು ಜಾಗೃತಿ ಸಮಿತಿ ಸದಸ್ಯರನ್ನಾಗಿ ನೇಮಿಸಲಾಗಿದ್ದು ರಾಜ್ಯದಲ್ಲಿ 365 ಮಂದಿ ಸದಸ್ಯರು ಇದ್ದಾರೆ. ಪ್ರತಿದಿನವೂ ಗ್ರಂಥಾಲಯಗಳಲ್ಲಿ ಪುಸ್ತಕಗಳ ಬಿಡುಗಡೆ, ಚರ್ಚೆ, ಸಂವಾದಗಳು ನಡೆಯಬೇಕು ಎಂದರು.

‘ಮನೆಗೊಂದು ಗ್ರಂಥಾಲಯ’ ಎಂಬ ಜ್ಞಾನದ ಹಣತೆಯನ್ನು ಹಚ್ಚಲಾಗಿದ್ದು ರಾಜ್ಯದ ತುಂಬೆಲ್ಲ ಬೆಳಗಬೇಕು ಎಂಬುದು ಪ್ರಾಧಿಕಾರದ ಆಶಯವಾಗಿದೆ. ಶಾಸಕರು, ಸಚಿವರು ಸೇರಿದಂತೆ ರಾಜಕೀಯ ನಾಯಕರು, ಸಿನಿಮಾ ನಟರು, ಖ್ಯಾತನಾಮರ ಮನೆಗಳಲ್ಲಿ ಗ್ರಂಥಾಲಯಗಳು ಆರಂಭವಾಗಿದ್ದು ಕೊಂಡಿಗಳು ಬೆಸೆದುಕೊಳ್ಳುತ್ತಾ ಹೋಗಿವೆ ಎಂದರು.

ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ‘ಪುಸ್ತಕಗಳ ಮಾರಾಟ ದೇವನೂರು ಮಹದೇವ, ಬೈರಪ್ಪ ಅವರಂತಹ ಲೇಖಕರ ಕೃತಿಗಳು ಮಾತ್ರ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುತ್ತಿದ್ದು ಬಹಳಷ್ಟು ಲೇಖಕರ ಕೃತಿಗಳಿಗೆ ನಿರೀಕ್ಷಿತ ಓದುಗರ ಬೆಂಬಲ ದೊರೆಯುತ್ತಿಲ್ಲ. ಬರೆದು ಬದುಕಬಹುದು ಎಂಬ ಧೈರ್ಯ ಲೇಖಕರಲ್ಲಿ ಇಲ್ಲವಾಗಿದೆ. ಆದರೆ, ವಿದೇಶಗಳಲ್ಲಿ ಮಾತ್ರ ಲೇಖಕರು ಪುಸ್ತಕ ಹಾಗೂ ಬರವಣಿಗೆಯನ್ನು ನಂಬಿ ಬದುಕುಬಲ್ಲರು ಎಂದರು.

ವಸುಪಾಲ್ ಪಂಡಿತ್ ಅವರ ಪೂರ್ವಜರು ಪ್ರಕಾಶನ ಕ್ಷೇತ್ರದ ಬೆಳವಣಿಗೆಗೆ ನೀಡಿರುವ ಕೊಡುಗೆ ಅವಿಸ್ಮರಣೀಯ. ಶಾಸನಗಳ ಅಧ್ಯಯನ, ಜೈನ ಧರ್ಮ ಶಾಸ್ತ್ರ, ಕಾನೂನು, ಜ್ಯೋತಿಷ್ಯ, ಆಯುರ್ವೇದ ಕ್ಷೇತ್ರದಲ್ಲಿ ದುಡಿದಿದ್ದಾರೆ. ಭಾರತಿ ಭವನ ಮುದ್ರಣಾಲಯ ಸ್ಥಾಪಿಸಿ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಹಲವು ದಶಕಗಳ ಹಿಂದೆ ಆರಂಭವಾದ ಮುದ್ರಣಾಲಯ ಇಂದಿಗೂ ಕಾರ್ಯ ನಿರ್ವಹಿಸುತ್ತಿರುವುದು ಸೋಜಿಗ ಹಾಗೂ ಅಭಿನಂದನೀಯ ಎಂದರು.

ಜನಪದ, ಸಾಹಿತ್ಯ ಕ್ಷೇತ್ರಕ್ಕೆ ದುಡಿದು ಹೆಸರಾದವರನ್ನು ಸ್ಮರಿಸದ ನೆಲದಲ್ಲಿ ನೆಲದ ನೆಲದಲ್ಲಿ ಜೈನ ಸಾಹಿತ್ಯವನ್ನು ಪರಿಚಯಮಾಡಿಕೊಟ್ಟ ಕುಟುಂಬದಲ್ಲಿ ಮನೆಗೊಂದು ಗ್ರಂಥಾಲಯ ಕಾರ್ಯಕ್ರಮ ನಡೆಯುತ್ತಿರುವುದು ಅಭಿನಂದನೀಯ ಎಂದು ಹೇಳಿದರು.

ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಸಿ.ಎಂ.ನರಸಿಂಹ ಮೂರ್ತಿ ಮಾತನಾಡಿ, ಯುವಜನತೆಯಲ್ಲಿ ಪುಸ್ತಕ ಹಾಗೂ ಪತ್ರಿಕೆಗಳ ಓದುವ ಸಂಸ್ಕೃತಿ ಬೆಳೆಯಬೇಕು. ವಿಚಾರ, ವಿನಿಮಯ, ಸಂವಾದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಬಾಹುಬಲಿ ಜಯರಾಮ್, ಕರುಣಾಕರ್, ಡಾ.ಪ್ರೇಮಾ, ಶೀಲಾ ಸತ್ಯೇಂದ್ರ ಶಾಸ್ತ್ರಿ, ಪುಷ್ಕರ್ ಪಂಡಿತ್, ರೇಚಂಬಳ್ಳಿ ದುಂಡುಮಾದಯ್ಯ, ಬಸವಣ್ಣ ಮೂಕಹಳ್ಳಿ ಸೇರಿದಂತೆ ಹಲವರು ಇದ್ದರು.

‘ನೆಲಮೂಲದವರನ್ನು ಸ್ಮರಿಸಿ’ ‘ಸಾಹಿತ್ಯ ಹಾಗೂ ಸಂಸ್ಕೃತಿಗೆ ಪ್ರಸಿದ್ಧವಾದ ಜಿಲ್ಲೆಯಲ್ಲಿ ಜನಿಸಿ ಸಾಹಿತ್ಯ ಸಂಸ್ಕೃತಿ ಜನಪದವನ್ನು ಶ್ರೀಮಂತಗೊಳಿಸಿದವರನ್ನು ಸ್ಮರಿಸದಿರುವುದು ನೋವಿನ ಸಂಗತಿ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದ್ದು ಇನ್ನಾದರೂ ಕಲೆ ಸಾಹಿತ್ಯಕ್ಕಾಗಿ ಜೀವನವನ್ನೇ ಮುಡಿಪಿಟ್ಟು ನೆಲ ಮೂಲದವರನ್ನು ಸ್ಮರಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಜಾಗೃತಿ ಸಮಿತಿ ಸಂಚಾಲಕ ಸಿ.ಎಂ.ನರಸಿಂಹ ಮೂರ್ತಿ ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.