ಕೊಳ್ಳೇಗಾಲ: ಇಲ್ಲಿನ ಬಸ್ತೀಪುರ ಬಡಾವಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಪ್ರಯುಕ್ತ ಅದ್ದೂರಿಯಾಗಿ ಮೆರವಣಿಗೆ ಆಯೋಜಿಸಲಾಗಿತ್ತು.

ನಗರದ ಎಂ.ಜಿ.ಎಸ್.ವಿ ಮೈದಾನದಲ್ಲಿ ಅಲಂಕೃತಗೊಂಡಿದ್ದ ಕಾರಿನ ಮೇಲೆ ಬುದ್ಧನ ವಿಗ್ರಹ ಹಾಗೂ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಮೆರವಣಿಗೆಗೆ ಚಾಲನೆ ನೀಡಿದರು. ಬಳಿಕ ಎಂ.ಜಿ.ಎಸ್.ವಿ ಮೈದಾನದಿಂದ ಬಸ್ತೀಪುರ ಬಡಾವಣೆಯವರೆಗೆ ನಡೆದ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು.

ಮೆರವಣಿಗೆ ವೇಳೆ ಬಡಾವಣೆಯ ಮನೆಮನೆಗಳಲ್ಲಿ ಪುಷ್ಪ ನಮನ ಸಲ್ಲಿಸಿ, ಪೂಜೆ ಕೈಕರ್ಯ ಮಾಡಿದರು. ಈ ಸಂದರ್ಭದಲ್ಲಿ ಬಸ್ತೀಪುರ ಬಡಾವಣೆಯ ನಾಗರಾಜು, ಎಸ್.ಮಾದೇಶ್, ಅಂತೋಣಿ, ರಾಜಪ್ಪ, ಸಿದ್ದರಾಜು, ಶಿವಕುಮಾರ್, ಮಹೇಶ್, ಸಿದ್ದರಾಜು, ಮಹದೇವ, ಶಾಂತರಾಜು,ಸ್ವಾಮಿ ನಂಜಪ್ಪ, ರವಿ, ಪ್ರಸನ್ನ ಮೂರ್ತಿ, ಅಶೋಕ, ಹಾಗೂ ಅಂಬೇಡ್ಕರ್ ಸಂಘ ಹಾಗೂ ಬ್ಲೂ ಸ್ಟಾರ್ ಬಾಯ್ಸ್ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-37-678926356

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.