ಕೊಳ್ಳೇಗಾಲ: ನಗರದ ಎಲ್ಲಾ ಚರ್ಚ್ಗಳಲ್ಲಿ ಈಸ್ಟರ್ ಸಂಡೆ ಪುನರುತ್ಥಾನದ ಹಬ್ಬವನ್ನು ವಿಶೇಷ ಪ್ರಾರ್ಥನೆಗಳ ಮೂಲಕ ಭಾನುವಾರ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.

ನಗರದ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್, ಬೇತೇಲ್ ಲೂಥರನ್ ಚರ್ಚ್, ಬ್ರದರನ್ ಚರ್ಚ್, ಅರುಣೋದಯ ಚರ್ಚ್, ಕಲ್ವಾರಿ ಎಜೆ ಚರ್ಚ್, ಎಸ್.ಡಿ.ಎ ಚರ್ಚ್, ಸಿಎಸ್ಐ ಚರ್ಚ್, ಅರುಣೋದಯ ಯೇಸು ಚರ್ಚ್, ನ್ಯೂ ಎಲೀಮ್ ಬ್ರದರನ್ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ಹಾಗೂ ದೇವರ ಹಾಡುಗಳನ್ನು ಹಾಡಿದರು.

ನಗರದ ಬೇತೇಲ್ ಲೂಥರನ್ ಚರ್ಚ್ ಫಾಸ್ಟರ್ ರೆ. ಜೋಶುವಾ ಪ್ರಸನ್ನ ಕುಮಾರ್, ಫಾಸ್ಟರ್ ರೆ. ಆಡಿಸ್ ಅರ್ನಾಲ್ಡ್ ಪ್ರಾರ್ಥನೆ ಸಲ್ಲಿಸಿದರು. ನಂತರ ಸಭಿಕರಿಗೆ ಯೇಸುಕ್ರಿಸ್ತನ ಪುನರುತ್ಥಾನದ ಹೊಂದಿದ ವಿಷಯವನ್ನು ವಿವರವಾಗಿ ತಿಳಿಸಿದರು. ಬಳಿಕ ಸಭಿಕರಿಗೆ ರಾತ್ರಿ ಭೋಜನ ಪರಮ ಪ್ರಸಾದಗಳನ್ನು ವಿತರಣೆ ಮಾಡಿದರು. ಈಸ್ಟರ್ ಸಂಡೆ ಪ್ರಯುಕ್ತ ಮಕ್ಕಳು ಹಾಗೂ ಯವಕರು ವಿಶೇಷ ಗೀತೆಗಳು ಹಾಡಿದರು.

ಚರ್ಚ್ ಮುಕ್ತಾಯವಾದ ಬಳಿಕ ಎಲ್ಲರಿಗೂ ಈಸ್ಟರ್ ಹಬ್ಬದ ಪ್ರಯುಕ್ತ ಮೊಟ್ಟೆ, ಬ್ರೇಡ್ ಹಾಗೂ ಇತರೆ ಸಿಹಿ ತಿಂಡಿಗಳನ್ನು ವಿತರಿಸಿದರು. ಚರ್ಚ್ ಅನ್ನು ಮಲ್ಲಿಗೆ ಹಾಗೂ ಕನಕಾಂಬರ ಹೂಗಳಿಂದ ಸಿಂಗಾರ ಮಾಡಲಾಗಿತ್ತು. ನಂತರ ಪರಸ್ಪರ ಅಪ್ಪಿಕೊಂಡು ಶುಭಾಶಯಗಳನ್ನು ತಿಳಿಸಿದರು. ಮಕ್ಕಳು ಹಾಗೂ ಯವಕರು ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸಿದರು.

ಹಬ್ಬದ ಪ್ರಯುಕ್ತ ಪ್ರತಿಯೊಬ್ಬರ ಮನೆಯಲ್ಲೂ ಬಿರಿಯಾನಿ, ಚಿಕನ್ ಕಬಾಬ್, ಚಿಕನ್ ಫ್ರೈ, ಚಿಕನ್ ಮಂಚೂರಿ, ಚಿಕನ್ ಟಿಕ್ಕಾ, ಫಿಶ್ ಫ್ರೈ ಜಾಮೂನು ಕೇಕ್ ಸೇರಿದಂತೆ ವಿವಿಧ ಬಗೆಯ ತಿಂಡಿ ತಿನಿಸುಗಳನ್ನು ಮಾಡಿದ್ದರು. ಬಂದಿದ್ದ ನೆಂಟರು ಹಬ್ಬದ ಊಟ ಸವಿದು ತಮ್ಮ ತಮ್ಮ ಮನೆಗೆ ತೆರಳಿದರು. ಹಬ್ಬದ ಹಿನ್ನೆಲೆ ರಾತ್ರಿ ಚರ್ಚ್ ಗಳಲ್ಲಿ ವಿಶೇಷ ಗೀತೆಗಳು ಹಾಗೂ ಪ್ರಾರ್ಥನೆಗಳು ನಡೆದವು.

ಸಭೆಯಲ್ಲಿ ಹಿರಿಯರಾದ ಜಾನ್ ಪೀಟರ್, ನರೇಂದ್ರನಾಥ್, ಗೇಬ್ರಿಯಲ್, ಜಾನ್ ಇಮಾನುವೇಲ್, ಎಡಿಟ್ ಸುಜಾತ, ಸುಮಿತ್ರ, ಪ್ರಸನ್ನ ಕುಮಾರ್, ನಿಶ್ಚಿತ್ ಲಿಂಕನ್, ರಾಬಿನ್ ಸನ್, ನಿಶಾಲ್, ನಿತೀನ್, ಆಕಾಶ್, ಡೆಲ್ಟನ್ , ಗುಣಶೇಖರ್, ರಾಹುಲ್, ಜಾಯ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-37-251781083

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.