ಕೊಳ್ಳೇಗಾಲ: ತಾಲ್ಲೂಕಿನ ಕುಣಗಳ್ಳಿ ಹಾಗೂ ಸೂರಪುರ ಸುತ್ತಮುತ್ತಲಿನ ಗ್ರಾಮದ ರೈತರಿಗೆ ತೊಂದರೆ ಕೊಡುತ್ತಿರುವ ಆರ್.ಟಿ.ಐ ಕಾರ್ಯಕರ್ತ ಲಿಂಗರಾಜು ಅವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಇಲ್ಲಿನ ರೈತ ಸಂಘಟನೆಯವರು ರಸ್ತೆ ತಡೆ ಚಳುವಳಿ ನಡೆಸಿದರು.

ನಗರದ ಮುಡಿಗುಂಡದ ಸೇತುವೆ ಬಳಿ ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಘಟಕದ ವತಿಯಿಂದ ಕೆಲಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನಂತರ ರೈತ ಮುಖಂಡ ಹೊನ್ನೂರ್ ಪ್ರಕಾಶ್ ಮಾತನಾಡಿ, ಈ ಭಾಗದಲ್ಲಿ 50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಆರ್.ಟಿ.ಐ ಕಾರ್ಯಕರ್ತ ಅನವಶ್ಯಕವಾಗಿ ತೊಂದರೆ ಕೊಡುತ್ತಿದ್ದು, ರೈತರಿಂದ ಹಣವನ್ನು ಕೊಡುವಂತೆ ಪೀಡುಸುತ್ತಿರುವ ಲಿಂಗರಾಜು ಮೇಲೆ ಸೂಕ್ತ ಕ್ರಮಕೈಗೊಂಡು ಗಡೀಪಾರು ಮಾಡಬೇಕು. ಯಾವ ರೈತರು ಸಹ ಯಾವ ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ. ಸರ್ಕಾರ ಸಾಗುವಳಿ ಪತ್ರ ಹಾಗೂ ಆರ್.ಟಿ.ಸಿ ನೀಡಿದರೆ ಎಲ್ಲವೂ ತಿಳಿಯುತ್ತದೆ. ರೈತರ ಮೇಲೆ ಲಿಂಗರಾಜು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ರೈತರು ಸರ್ಕಾರಿ ಜಮೀನುಗಳನ್ನು ಹಿಡಿದುಕೊಂಡು ವ್ಯವಸಾಯ ಮಾಡುತ್ತಿದ್ದಾರೆ ಎಂಬ ಮಾತು ಸತ್ಯಕ್ಕೆ ದೂರವಾಗಿದೆ. ಹಾಗಾಗಿ ಅವರನ್ನು ಕೂಡಲೇ ಬಂಧಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳದಲ್ಲಿದ್ದ ಡಿವೈಎಸ್ಪಿ ಮೋಹನ್, ರಸ್ತೆ ತಡೆಯಿಂದ ಸಂಚಾರಕ್ಕೆ ತೊಂದರೆಯಾಗಲಿದೆ. ನಿಮ್ಮ ಆರೋಪಗಳ ಕುರಿತು ಸಭೆ ನಡೆಸಲಾಗುವುದು ಎಂದು ಹೇಳಿದ ಬಳಿಕ ಪ್ರತಿಭಟನೆ ಕೈಬಿಟ್ಟರು ನಂತರ ತಾಲ್ಲೂಕು ಕಚೇರಿಗೆ ತಲುಪಿದರು.

ಸಭೆಯಲ್ಲಿ ಆರ್.ಟಿ.ಐ ಕಾರ್ಯಕರ್ತನ ವಿರುದ್ಧ ರೈತರಿಂದ ದೂರು ಆಲಿಸಿದ ನಂತರ ತಹಶೀಲ್ದಾರ್ ಬಸವರಾಜು ಅವರು, ನಿಮ್ಮಗೆ ಆಗುತ್ತಿರುವ ತೊಂದರೆಯನ್ನು ಲಿಖಿತವಾಗಿ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದರು. ಬಳಿಕ ಲಿಖಿತ ದೂರನ್ನು ರೈತರು ನೀಡಿದರು.

ಮಾಡ್ರಳ್ಳಿ ಪಾಪಣ್ಣ, ಬೆರಬಾಂಡಿ ಶಶಿ, ಬೀಮನಬೀಡು ರಾಜು, ಹೊನ್ನೇಗೌಡನಹಳ್ಳಿ ಗಿರಿ ಕುಣಗಳ್ಳಿ ಸೋಮಣ್ಣ, ವೆಂಕಟಶೆಟ್ಟಿ, ಸಿದ್ದೇಶ್, ಶಂಕರ ಮುಳ್ಳೂರು ವೀರಭದ್ರಸ್ವಾಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-37-1601882312

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.