ಕೊಳ್ಳೇಗಾಲ: ಯೇಸುವಿನ ತ್ಯಾಗ ಮತ್ತು ಮರಣ ದಿನವಾಗಿ ಎಲ್ಲಾ ಚರ್ಚ್ ಗಳಲ್ಲಿ ಕ್ರಿಶ್ಚಿಯನ್ನರು ಶುಭ ಶುಕ್ರವಾರ (ಗುಡ್ ಫ್ರೈಡೆ) ಆಚರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ದಿನ ಕ್ರೈಸ್ತರಿಗೆ ಅತ್ಯಂತ ಪವಿತ್ ದಿನ. ಉಪವಾಸ ಮತ್ತು ಪ್ರಾರ್ಥನೆಯೊಂದಿಗೆ ಇದನ್ನು ಆಚರಿಸುತ್ತಾರೆ. ಯೇಸುವಿನ ತ್ಯಾಗ ಮತ್ತು ಪುನರುತ್ಥಾನದ ಭರವಸೆಯನ್ನು ಇದು ಸಂಕೇತಿಸುತ್ತಿದೆ. ತ್ಯಾಗ, ಪ್ರೀತಿ, ಕ್ಷಮೆ, ಕ್ರೈಸ್ತರ ಪ್ರಮುಖ ಅಂಶಗಳು ಎಂದು ಯೇಸು ಶಿಲುಬೆಗೆ ಏರುವ ಮುನ್ನ ತೋರಿಸಿಕೊಟ್ಟು ಅನೇಕ ಮಾರ್ಗ ಹಾಗೂ ವಚನಗಳನ್ನು ನುಡಿದಿದ್ದಾರೆ, ಹಾಗಾಗಿ ಇದನ್ನು ಗುಡ್ ಫ್ರೈಡೆ ಎಂದು ಆಚರಿಸಲಾಗುತ್ತದೆ.

ನಗರದ ಸಂತ ಫ್ರಾನ್ಸಿಸ್ ಅಸ್ಸಿಸಿ ಚರ್ಚ್, ಬೇತೇಲ್ ಲೂಥರನ್ ಚರ್ಚ್, ಬ್ರದರನ್ ಚರ್ಚ್, ಅರುಣೋದಯ ಚರ್ಚ್, ಕಲ್ವಾರಿ ಎಜೆ ಚರ್ಚ್, ಎಸ್.ಡಿ.ಎ ಚರ್ಚ್, ಸಿಎಸ್ಐ ಚರ್ಚ್, ಅರುಣೋದಯ ಯೇಸು ಚರ್ಚ್ ಸೇರಿದಂತೆ ಎಲ್ಲಾ ಚರ್ಚ್ ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಮಹಾ ಗುರುವಾರ: ಯೇಸು ಸ್ವಾಮಿ ತಮ್ಮ ಶಿಷ್ಯರ ಕಾಲು ತೊಳೆದು ಗುರುವಾರ ರಾತ್ರಿ ಅಂದರೆ ಶುಕ್ರವಾರ ಶಿಲುಬೆಗೆ ಏರುವ ಹಿಂದಿನ ದಿನ ಕೊನೆಯ ರಾತ್ರಿ ಭೋಜನ ಪಡೆಯುತ್ತಾರೆ. ಇದರ ಭಾಗವಾಗಿ ಗುರುವಾರ ರಾತ್ರಿ ಎಲ್ಲಾ ಚರ್ಚ್ ಗಳಲ್ಲಿ ರಾತ್ರಿ ಭೋಜನ ಪರಮ ಪ್ರಸಾದ ನಡೆಯಿತು.

ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಎಲ್ಲಾ ಚರ್ಚ್ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಸಿ ಯೇಸು ಕ್ರಿಸ್ತ ಶಿಲುಬೆಗೆ ಏರುವ ಹೇಳುವ ಏಳು ನುಡಿಗಳನ್ನು ಪಠಿಸಲಾಯಿತು. ಗುಡ್ ಫ್ರೈಡೆಯಂದು, ಕರ್ತನಾದ ಯೇಸುವನ್ನು ಸ್ಮರಿಸುತ್ತಾ ದಾನ ಕಾರ್ಯಗಳನ್ನು ಮಾಡಲಾಗುತ್ತದೆ. ಉಪವಾಸದ ನಂತರ ಸಿಹಿ ತಿನಿಸು ಮಾಡಿ ಜನರಿಗೆ ಹಂಚಲಾಗುತ್ತದೆ. ನಂತರ ಎಲ್ಲರಿಗೂ ಗಂಜಿ ಚಟ್ನಿ ಹಾಗೂ ಹಣ್ಣಿನ ರಸ ವಿತರಿಸಲಾಗುತ್ತದೆ. ಮೂರು ದಿನಗಳ ನಂತರ ಈಸ್ಟರ್ ಸಂಡೆ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಶಿಲುಬೆಗೆ ಏರಿದ ನಂತರ ಮೂರು ದಿನಗಳ ನಂತರ ಏಸುಕ್ರಿಸ್ತ ಅವರು ಪುನರುತ್ಥಾನ ಹೊಂದಿದ ಅಂಗವಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಸಭಾ ಪಾಲಕರಾದ ರೆ.ಜೋಶುವಾ ಪ್ರಸನ್ನ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಫಾಸ್ಟರ್ ಆಡಿಸ್ ಅರ್ನಾಲ್ಡ್, ಚರ್ಚ್ ಸಭಾ ಸಮಿತಿಯ ಅಧ್ಯಕ್ಷರ ಜಾನ್ ಪೀಟರ್, ಕಾರ್ಯದರ್ಶಿ ನರೇಂದ್ರನಾಥ್, ಖಜಾಂಚಿ ಸುಜಾತ, ಸಭಾ ಸಮಿತಿಯ ಸದಸ್ಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-37-320407060

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.