ಕೊಳ್ಳೇಗಾಲ: ತಾಲ್ಲೂಕಿನ ಸತ್ತೇಗಾಲ ಗ್ರಾಮದ ಬಲಗೈ ಸಮುದಾಯದ ಬೀದಿ ಹಾಗೂ ಇನ್ನಿತರ ಸ್ಥಳಗಳಲ್ಲಿ ಮದ್ಯ ಅಕ್ರಮ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಲು ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಸಂಘ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟ ಮೇ 11ರಂದು ಕೊಳ್ಳೇಗಾಲ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ಒಮ್ಮತದ ತೀರ್ಮಾನ ಕೈಗೊಂಡಿವೆ.

ತಾಲ್ಲೂಕಿನ ಸತ್ತೇಗಾಲ ಗ್ರಾಮದ ರಾಮಮಂದಿರದಲ್ಲಿ ಶನಿವಾರ ಗ್ರಾಮದ ಕುಲಸ್ಥರು ಮುಖಂಡರುಗಳು ಯುವಕರು ಸಭೆ ನಡೆಸಿದರು. ಫೆ 20ರಂದು ಮತ್ತು ನಂತರ ದಿನಗಳಲ್ಲೂ ಸತ್ತೇಗಾಲ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮತ್ತು ವೈನ್ ಸ್ಟೋರ್ಗಳಿಂದ ಅಕ್ರಮ ಮದ್ಯ ಸಾಗಣೆ ತಡೆಗಟ್ಟಿ ಎಂದು ಪೊಲೀಸ್ ಮತ್ತು ಅಬಕಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡೆವು. ನಂತರ ಇಬ್ಬರು, ಮೂವರು ಮದ್ಯ ಮಾರಾಟ ನಿಲ್ಲಿಸಿದ್ದರು. ಆದರೂ ಸಂಪೂರ್ಣವಾಗಿ ಮದ್ಯ ಅಕ್ರಮ ಮಾರಾಟವನ್ನು ಅಧಿಕಾರಿಗಳು ನಿಲ್ಲಿಸಿಲ್ಲ. ಹಾಗಾಗಿ ಗ್ರಾಮದ ಮುಖಂಡರ ತೀರ್ಮಾನದಂತೆ ಉಗ್ರವಾಗಿ ಡಿವೈಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು ಎಂದು ಮುಖಂಡರು ತಿಳಿಸಿದರು.

ಸಭೆಯಲ್ಲಿ ಮಲ್ಲೇಶ್, ಪುಟ್ಟಸ್ವಾಮಿ, ಮಹದೇವಯ್ಯ, ನಂಜುಂಡಮೂರ್ತಿ, ಬಸವಣ್ಣ, ಸಿದ್ದರಾಜು, ಭಾಸ್ಕರ್, ಪ್ರಭು, ಉಮೇಶ, ಚಂದ್ರಶೇಖರ್, ಶಿವಕುಮಾರ್, ರಾಜಶೇಖರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-37-935742042

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.