ಕೊಳ್ಳೇಗಾಲ: ಇಲ್ಲಿನ ಹಳೆ ನಗರಸಭೆ ಕಟ್ಟಡದ ಮೇಲ್ಬಾಗದಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು.

ಕಟ್ಟಡದ ಮೇಲ್ಬಾಗದಲ್ಲಿ ಬಿದ್ದಿದ್ದ ಮರದ ಎಲೆಗಳು ಹಾಗೂ ತ್ಯಾಜ್ಯಗಳಿಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಮಾಹಿತಿ ತಿಳಿದು ಆಗಮಿಸಿದ್ದ ನಗರಸಭೆ ವಾಹನ ಚಾಲಕ ಸಂದೀಪ್ ಕುಮಾರ್, ಯುಜಿಡಿ ರಾಜು, ಪ್ರಶಾಂತ್ ಅವರು ಬೆಂಕಿ ನಂದಿಸಲು ಮುಂದಾದರು.

ಬೆಂಕಿ ಹೆಚ್ಚಾದ್ದರಿಂದ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಠಾಣಾಧಿಕಾರಿ ಸಿದ್ದಾರ್ಥ, ಸಿಬ್ಬಂದಿ ಕಂದಸ್ವಾಮಿ, ಮಹೇಶ್ ಕುಮಾರ್, ಪ್ರದೀಪ್, ಅಮರೇಶ್ ಆಗಮಿಸಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಿದರು. ಪೌರಯುಕ್ತೆ ರುದ್ರಮ್ಮ ಶರಣಯ್ಯ ಭೇಟಿ ನೀಡಿ ಪರಿಶೀಲಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-37-723655488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.