ಕೊಳ್ಳೇಗಾಲ: ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ತಾಲ್ಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಅನಿರ್ಥಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ, ವಿವಿದ ಸಂಘಟನೆಗಳ ಮುಖಂಡರು, ಗ್ರಾಮದ ಮುಖಂಡರು, ಮಹಿಳೆಯರು, ತಾಲ್ಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ನಂತರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ ವಿರುದ್ಧ ಘೋಷಣೆಗಳನ್ನು ಕೂಗಿದ ಧರಣಿ ನಿರತರು, ನಮ್ಮ ಅಹವಾಲನ್ನು ಆಲಿಸಲು ಸ್ಥಳಕ್ಕೆ ಜಿ.ಪಂ. ಸಿಇಒ ಮೋನಾರೋತ್, ಜಿಲ್ಲಾಧಿಕಾರಿ ಶ್ರೀರೂಪಾ ಬರಬೇಕು ಹಾಗೂ ತಾ.ಪಂ.ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ, ಮಧ್ಯಾಹ್ನದ ವರೆಗೂ ಪ್ರತಿಭಟನೆ ನಡೆಸಿದರು.

ಮುಖಂಡ ಕಮಲ್, ಚಿಕ್ಕ ಮಾಳಿಗೆ, ಆನಂದ್ ಮೂರ್ತಿ, ಮಾತನಾಡಿ, ‘ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಂಪ್ಯೂಟರ್ ಆಪರೇಟರ್, ಗ್ರೂಪ್ ಡಿ ನೌಕರರಾಗಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯ ಸಿಬ್ಬಂದಿಗೆ ತಾಲ್ಲೂಕು ಪಂಚಾಯಿತಿ ಇಒ ನಿರಂತರ ಕಿರುಕುಳ ನೀಡಿದ್ದಾರೆ’ ಎಂಬ ಆರೋಪಿಸಿದರು. ಏ.20 ರಂದು ಜಗಜ್ಯೋತಿ ಬಸವೇಶ್ವರ ಜಯಂತಿಯಂದು ಸಭಾಂಗಣದ ಶೌಚಗೃಹಗಳನ್ನು ಶುಚಿಗೊಳಿಸುವಂತೆ ಈ ಹೊರಗುತ್ತಿಗೆ ಸಿಬ್ಬಂದಿ ಮೇಲೆ ಅವರು ಒತ್ತಡ ಹೇರಿದ್ದಾರೆ. ನಿರಾಕರಿಸಿದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕುವುದಾಗಿ ಬೆದರಿಸಿ, ಶೋಕಾಸ್ ನೋಟಿಸ್ ನೀಡಿದ್ದಾರೆ. ಮ ತಾಲೂಕು ಪಂಚಾಯಿತಿ ಕಚೇರಿಯನ್ನು ಹೊಲಗೇರಿ ಮಾಡುತ್ತಿದ್ದಿರಾ? ಇದನ್ನು ನಾನು ಸಹಿಸುವುದಿಲ್ಲ ಎಂದು ಕಚೇರಿ ಸಿಬ್ಬಂದಿಗೆ ಜಾತಿ ನಿಂದನೆ ಮಾಡಿದ್ದಾರೆ ನಿಂದಿಸಿದ್ದಾರೆ ಎಂದು ದೂರಿದರು.

ತಾಲೂಕಿನ ವಿವಿಧ ಗ್ರಾಮಗಳಿಗೆ ಇಒ ಭೇಟಿ ನೀಡಿದಾಗ ಅವಾಚ್ಯ ಶಬ್ದಗಳಿಂದ ಜನರನ್ನು ನಿಂದಿಸಿ, ಕೀಳು ಮಟ್ಟದ ನಡವಳಿಕೆ ತೋರಿದ್ದಾರೆ. ಕಚೇರಿಗೆ ಬಂದು ಜನರು ಸಮಸ್ಯೆಗಳನ್ನು ಹೇಳಿಕೊಂಡರೆ, ಸೌಜನ್ಯದಿಂದ ವರ್ತಿಸದೆ ಬೆಜವಾಬ್ದಾರಿಯಿಂದ ನಡೆದುಕೊಂಡಿದ್ದು, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಕಾರರ ಒತ್ತಾಯದ ಮೇರೆಗೆ ಇಒ ಅವರನ್ನು ಇಂದಿನಿಂದಲ್ಲೇ ಕಡ್ಡಾಯ ರಜೆ ಮೇಲೆ ಕಳುಹಿಸಲು ಜಿ.ಪಂ.ಸಿಇಒ ಒಪ್ಪಿಗೆ ಮೇರೆಗೆ ಉಪ ಕಾರ್ಯದರ್ಶಿ ಶೃತಿ ಪ್ರಕಟಿಸಿದರು. ಬಳಿಕ ಅನಿರ್ಧಿಷ್ಟಾವದಿ ಧರಣಿಯನ್ನು ಪ್ರತಿಭಟನಾ ನಿರತರು ಕೈಬಿಟ್ಟರು.

ದಲಿತ ಮುಖಂಡ ಶೇಖರ್ ಬುದ್ಧ, ಎಸ್.ಸಿದ್ದಪ್ಪಾಜಿ, ಡಿಎಸ್ಎಸ್ ವೀಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು, ರೈತ ಸಂಘದ ಮುಖಂಡ ಅಣಗಳ್ಳಿ ಬಸವರಾಜು, ದಶರಥ್ , ಕರವೇ ತಾಲೂಕು ಘಟಕದ ಅಧ್ಯಕ್ಷ ಅಯಾಜ್ ಕನ್ನಡಿಗ, ಕೆ.ಕೆ.ಮೂರ್ತಿ, ಮಹಿಳಾ ಸಂಘಟನೆ ಮುಖಂಡ ಪುಟ್ಟಗೌರಿ, ಶಿವಮ್ಮ, ಪುಟ್ಟಿ, ಮುರಳಿ, ಚಾಮರಾಜು, , ಸಿ.ಸಾವಕಯ್ಯ, ಶಿವರಾಳ, ಎಸ್.ರಾಜಶೇಖರ್, ಎಸ್.ಎಲ್.ಲಿಂಗರಾಜು, ಚಿಲಕವಾಡಿ ಪ್ರದೀಪ್, ಬೂದಬಾಳು ಶ್ರೀನಿವಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-37-636023948

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.